/newsfirstlive-kannada/media/media_files/2025/12/30/kogilu-layout-1-2025-12-30-07-26-22.jpg)
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯ ಸಂತ್ರಸ್ತರಿಗೆ ಮನೆ ನೀಡಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳ ವಿರೋಧ ವ್ಯಕ್ತಪಡಿಸಿವೆ, ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಯಿಂದ ಮನೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಇರೋ ಕೇರಳದ ಕೆ.ಸಿ.ವೇಣುಗೋಪಾಲ್ ಒತ್ತಡಕ್ಕೆ ಮಣಿದು ಕೆಲಸ ಸರ್ಕಾರ ಮಾಡ್ತಿದೆ. ಬೆಂಗಳೂರಿನಲ್ಲಿ ಇರೋ ಕನ್ನಡಿಗರಿಗೆ ಮನೆ ಕೊಟ್ಟಿಲ್ಲ. ಅಕ್ರಮ ವಲಸಿಗರಿಗೆ ಜನವರಿ 1 ರಂದು ಮನೆ ಕೊಡ್ತಿವಿ ಅಂತಾ ಘೋಷಣೆ ಮಾಡಿದ್ದಾರೆ. ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡ್ತಿದ್ದಾರೆ. ಇದು ಕಾನೂನಿನ ಪ್ರಕಾರ ಅಕ್ರಮವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕೇರಳದಲ್ಲಿ ಪ್ರವಾಹ ಆದಾಗ 100 ಮನೆ ಕಟ್ಟಿಸಿ ಕೊಡ್ತಿವಿ ಎಂದು ಹಣ ಕೊಟ್ಟಿದ್ದಾರೆ. ಆನೆ ತುಳಿತ ಆದಾಗ 15 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದರು. ಮನೆ, ಪರಿಹಾರ ಕೊಡಲಿ, ಆದ್ರೆ ರಾಜ್ಯದ ಸಂಕಷ್ಟದಲ್ಲಿ ಇರೋ ರೈತರ ನೆರವಿಗೆ ರಾಜ್ಯ ಸರ್ಕಾರ ಬರುತ್ತಿಲ್ಲ. ರೈತರು, ದಲಿತರ, ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವ ಬದಲಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದೀರಿ. ಈ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡ್ತಿದೆ. ಕನ್ನಡಿಗರಿಗೆ ಸಿಗಬೇಕಿದ್ದ ಮನೆಗಳು ಅಕ್ರಮ ವಲಸಿಗರ ಪಾಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕೇಂದ್ರದ ಎಂಎಸ್‌ಎಂಇ ಹಾಗೂ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕೋಗಿಲು ಬಡಾವಣೆಯ ಜನರಿಗೆ ಮನೆ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಯಾರ ಸರ್ಕಾರ ನಡೆಯುತ್ತಿದೆ? ಯಾರಿಗಾಗಿ ಸರ್ಕಾರ ನಡೆಯುತ್ತಿದೆ? ಇದು ನಮ್ಮ ಪ್ರಶ್ನೆ. ರಾಜ್ಯ ಸರ್ಕಾರದ ಬಾರ್‌ಕೋಲು ಯಾರ ಬಳಿ ಇದೆ? ಕೆ.ಸಿ.ವೇಣುಗೋಪಾಲ್ ಅವರು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಮೂಗು ತೂರಿಸುತ್ತಾರೆ. ಅವರದ್ದೇ ಸರ್ಕಾರದ ಸಿಎಂ ಪಿಣರಾಯಿ ವಿಜಯನ್ ಇಲ್ಲಿ ನಿರ್ದೇಶನ ಮಾಡುತ್ತಾರೆ. ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆಶಿಗೆ ಸರ್ಕಾರ ನಡೆಸಲು ಹಕ್ಕು ಇದೆಯೇ? ಇಲ್ಲವೋ? ಕೋಗಿಲು ಬಳಿ 167 ಮನೆಗಳನ್ನು ತೆರವುಗೊಳಿಸುವ ಕೆಲಸ ಮಾಡಿದೆ. ಇದಕ್ಕೆ ನಮ್ಮ ಸ್ವಾಗತ ಇದೆ. ಹಲವಾರು ಬಾರಿ ನೋಟಿಸ್ ಕೊಟ್ಟರೂ ಕೂಡ ಅಕ್ರಮ ಶೆಡ್‌ಗಳು ತೆರವುಗೊಳಿಸಿರಲಿಲ್ಲ. ಇದನ್ನು ತೆರವುಗೊಳಿಸಲಾಗಿದೆ. ಇದಕ್ಕೆ ಕೆ.ಸಿ.ವೇಣುಗೋಪಾಲ್ ಮೂಗು ತೂರಿಸುತ್ತಾರೆ. ಕರ್ನಾಟಕದಲ್ಲಿ ಸರ್ಕಾರ ಏನು ಮಾಡುತ್ತಿದೆ? ಯುಡಿಎಫ್ ಹಾಗೂ ಎಲ್‌ಡಿಎಫ್ ನಮ್ಮ ರಾಜ್ಯದಲ್ಲಿ ಮೂಗು ತೂರಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರೋಧ ವ್ಯಕ್ತಪಡಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/30/shobha-karandlaje-and-by-vijayendra-2025-12-30-14-50-28.jpg)
ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೇರಳ ಸಿಎಂ ಇದರಲ್ಲಿ ಮೂಗು ತೂರಿಸಿರೋದು ಸರಿಯಲ್ಲ. ಅವರ ರಾಜ್ಯದಲ್ಲಿ ನಾವು ಹಸ್ತಕ್ಷೇಪ ಮಾಡಿದ್ರೆ ಅವರು ಸುಮ್ಮನಿರುತ್ತಾರಾ? ರೋಹಿಂಗ್ಯಾಗಳು ಇರಬಹುದೆಂಬ ಬಿಜೆಪಿ ಅನುಮಾನ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ, ನಾವು ಇದನ್ನು ಪರಿಶೀಲನೆ ಮಾಡ್ತೇವೆ. ಅವರು ರೋಹಿಂಗ್ಯಾಗಳಾ? ಬಾಂಗ್ಲಾದೇಶದವರಾ ಅಂತ ನಾವು ಪರಿಶೀಲನೆ ಮಾಡ್ತೇವೆ. ಹಾಗೇನಾದ್ರೂ ಕಂಡು ಬಂದರೆ ನಾವೇ ಕೇಂದ್ರಕ್ಕೆ ತಿಳಿಸುತ್ತೇವೆ ಎಂದ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಕೋಗಿಲು ಲೇಔಟ್ ಒತ್ತುವರಿ ತೆರವು ಪ್ರಕರಣವನ್ನ ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಅಲ್ಪಸಂಖ್ಯಾತರಿಗೆ ಕಿರುಕುಳ ಅಂತಾ ಟ್ವೀಟ್ ಮಾಡಿ ದಾರಿ ತಪ್ಪಿಸಲು ಯತ್ನಿಸುತ್ತಿದೆ. ಅಂತರ್​ ರಾಷ್ಟ್ರೀಯ ಮಟ್ಟದಲ್ಲಿ ಕೋಗಿಲು ಲೇಔಟ್ ವಿಚಾರ ಸದ್ದು ಮಾಡುತ್ತಿದೆ. ಮುಸ್ಲಿಮರ ಮನೆ ತೆರವು ವಿಚಾರವಾಗಿ ಶತ್ರು ದೇಶದಿಂದಲೂ ಧ್ವನಿ ಎತ್ತಲಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳವು ತೀವ್ರ ಕಳವಳ. ಸರ್ಕಾರಿ ಪ್ರಾಯೋಜಕತ್ವದಿಂದ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ. ಮುಸ್ಲಿಮರ ಗುಂಪು ಹತ್ಯೆ ಆಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದ ವಿದೇಶಾಂಗ ಇಲಾಖೆಯು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದೆ.
ಇನ್ನೂ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನದ ಹೇಳಿಕೆಯು ಕಪೋಲಕಲ್ಪಿತ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/30/india-response-to-pakistan-on-kogilu-eviction-2025-12-30-14-51-45.jpg)
ಕೋಗಿಲು ಲೇಔಟ್ ಒತ್ತುವರಿ ತೆರವಿಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ರಾಜ್ಯದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಅವರು ಯಾರು ಹೇಳುವುದಕ್ಕೆ ಎಂದು ಜಮೀರ್ ಪ್ರಶ್ನಿಸಿದ್ದಾರೆ. ಅವರಿಗೇನು ಹಕ್ಕಿದೆ. ಅವರಿಗೂ ಇದಕ್ಕೂ ಏನು ಸಂಬಂಧ ಎಂದು ಜಮೀರ್ ಅಹಮದ್ ಪ್ರಶ್ನಿಸಿದ್ದಾರೆ. ಪಾಕಿಸ್ತಾನಕ್ಕೂ ನಮಗೂ ಏನೇನು ಸಂಬಂಧ ಇಲ್ಲ. ಅವರು ಯಾರು? ನಮ್ಮ ದೇಶದಲ್ಲಿ ನಾವು ಇದ್ದೇವೆ. ಮುಸ್ಲಿಂರನ್ನು ನೋಡಿಕೊಳ್ಳಲು ನಾವು ಇದ್ದೇವೆ. ಮೊದಲು ಅವರ ದೇಶವನ್ನು ಅವರು ನೋಡಿಕೊಳ್ಳಲು ಹೇಳಿ. ಪಾಕಿಸ್ತಾನದಲ್ಲಿರುವ ಬಡತನವನ್ನು ನೋಡಿಕೊಳ್ಳಲು ಹೇಳಿ ಎೞಂದು
ಭಾರತದಲ್ಲಿ ಮುಸ್ಲಿಂರಿಗೆ ತೊಂದರೆ ಆಗುತ್ತಿದೆ ಎಂಬ ಪಾಕಿಸ್ತಾನ ವಿಚಾರ. ಅವರು ಯಾರೀ ಹೇಳಕೆ, ಅವರಿಗೇನು ಹಕ್ಕಿದೆ. ಅವರಿಗೂ ಇದಕ್ಕೂ ಏನು ಸಂಬಂಧ. ಪಾಕಿಸ್ತಾನಕ್ಕೂ ನಮಗೂ ಏನೇನು ಸಂಬಂಧವಿಲ್ಲ. ಅವರು ಯಾರು ನಮ್ಮ ದೇಶದಲ್ಲಿ ನಾವು ಇದ್ದೇವೆ. ಮುಸ್ಲಿರನ್ನ ನೋಡಿಕೊಳ್ಳಲು ನಾವು ಇದ್ದೇವೆ. ಮೊದ್ಲು ಅವರ ದೇಶವನ್ನು ಅವರ ನೋಡಿಕೊಳ್ಳಲು ಹೇಳಿ. ಪಾಕಿಸ್ತಾನದಲ್ಲಿರುವ ಬಡತನವನ್ನ ನೋಡಿಕೊಳ್ಳಲು ಹೇಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us