Advertisment

ಕೆ-ರೈಡ್‌ ಎಂ.ಡಿ. ಆಗಿ ಲಕ್ಷ್ಮಣ್ ಸಿಂಗ್ ಅಧಿಕಾರ ಸ್ವೀಕಾರ : ಬೇಗನೇ ಬೆಂಗಳೂರು ಸಬ್ ಆರ್ಬನ್ ರೈಲು ಜಾರಿಯ ಭರವಸೆ

ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆ ಜಾರಿಗಾಗಿ ಕೆ-ರೈಡ್ ಸ್ಥಾಪಿಸಲಾಗಿದೆ. ಕೆ-ರೈಡ್‌ನ ಪೂರ್ಣಾವಧಿ ಎಂ.ಡಿ. ಆಗಿ ಇಂದು ಲಕ್ಷ್ಮಣ್ ಸಿಂಗ್ ಅಧಿಕಾರ ಸ್ವೀಕರಿಸಿದ್ದಾರೆ. ಲಕ್ಷ್ಮಣ್ ಸಿಂಗ್ ಅವರಿಗೆ ಭಾರತೀಯ ರೈಲ್ವೇಯಲ್ಲಿ ಅಪಾರ ಅನುಭವ ಇದೆ. ಬೇಗನೇ ಸಬ್ ಆರ್ಬನ್ ರೈಲು ಯೋಜನೆ ಜಾರಿಯ ಭರವಸೆ ಮೂಢಿದೆ.

author-image
Chandramohan
K RIDE NEW MD LAXMAN SINGH TOOK CHARGE (1)

K-ರೈಡ್ ಎಂ.ಡಿ.ಆಗಿ ಲಕ್ಷ್ಮೞಣ್ ಸಿಂಗ್ ಅಧಿಕಾರ ಸ್ವೀಕಾರ

Advertisment
  • K-ರೈಡ್ ಎಂ.ಡಿ.ಆಗಿ ಲಕ್ಷ್ಮೞಣ್ ಸಿಂಗ್ ಅಧಿಕಾರ ಸ್ವೀಕಾರ
  • ಕೆ-ರೈಡ್‌ಗೆ ಪೂರ್ಣಾವಧಿ ಎಂ.ಡಿ. ಆಗಿ ಲಕ್ಷ್ಮೞಣ್ ಸಿಂಗ್ ನೇಮಕ
  • ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆ ತ್ವರಿತ ಜಾರಿಯ ನಿರೀಕ್ಷೆ


ಕೆ-ರೈಡ್‌ಗೆ ಬಹಳಷ್ಟು ತಿಂಗಳುಗಳಿಂದ ಪೂರ್ಣಾವಧಿಯ ಎಂ.ಡಿ.  ಅಧಿಕಾರಿಯನ್ನ ಕೇಂದ್ರ ಸರ್ಕಾರ ನೇಮಿಸಿರಲಿಲ್ಲ. ಇದರಿಂದಾಗಿ ಕೆ- ರೈಡ್ ಗೆ ಸಂಬಂಧಿಸಿದ ತೀರ್ಮಾನಗಳನ್ನು ಬೇಗ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ . ಜೊತೆಗೆ ಕೆ-ರೈಡ್‌ನ ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. 2023 ರಲ್ಲಿ ಪ್ರಧಾನಿ ಮೋದಿ ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 40 ತಿಂಗಳುಗಳಲ್ಲಿ ಯೋಜನೆ ಪೂರ್ಣಗೊಳಿಸುವ ವಾಗ್ದಾನ ನೀಡಿದ್ದರು. ಆದರೇ, ಕೆ- ರೈಡ್‌ಗೆ  ಪೂರ್ಣಾವಧಿ ಎಂ.ಡಿ. ಅಧಿಕಾರಿ ಇಲ್ಲದೇ ಸಬ್ ಆರ್ಬನ್ ರೈಲು ಯೋಜನೆ ಸರಿಯಾಗಿ ಟೇಕಾಫ್ ಆಗಲೇ ಇಲ್ಲ. 
ಹೀಗಾಗಿ ಕೆ-ರೈಡ್‌ಗೆ ಪೂರ್ಣಾವಧಿ ಎಂ.ಡಿ. ನೇಮಿಸಬೇಕೆಂದು ಬೆಂಗಳೂರು ಜನರು ಕೇಂದ್ರ ಸರ್ಕಾರವನ್ನು  ಆಗ್ರಹಿಸುತ್ತಲೇ ಇದ್ದರು. ಕೊನೆಗೂ ಇತ್ತೀಚೆಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ಹಾಗೂ ರೈಲ್ವೇ ಮಂಡಳಿಯು  ಕೆ-ರೈಡ್‌ಗೆ ಪೂರ್ಣಾವಧಿ ಎಂ.ಡಿ. ಆಗಿ ಲಕ್ಷ್ಮಣ್ ಸಿಂಗ್ ಅವರನ್ನು ನೇಮಿಸಿತ್ತು.
 ಲಕ್ಷ್ಮಣ್ ಸಿಂಗ್  ಅವರು  ಇಂದು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ದಿ ಕಂಪನಿ (ಕೆ-ರೈಡ್‌) ವ್ಯವಸ್ಥಾಪಕ ನಿರ್ದೇಶಕ( ಎಂ.ಡಿ.) ಆಗಿ ಅಧಿಕಾರ ಸ್ವೀಕರಿಸಿದ್ದರು.

Advertisment

K RIDE NEW MD LAXMAN SINGH TOOK CHARGE (2)





ಲಕ್ಷ್ಮಣ್ ಸಿಂಗ್ ಅವರು ಭಾರತೀಯ ರೈಲ್ವೆ ಸೇವೆಯ ಎಂಜಿನಿಯರ್‌ಗಳ (IRSE) ಅತ್ಯಂತ ಪ್ರತಿಷ್ಠಿತ ಸಿವಿಲ್ ಎಂಜಿನಿಯರಿಂಗ್ ವೃತ್ತಿಪರರಾಗಿದ್ದಾರೆ.


" ಲಕ್ಷ್ಮಣ್ ಸಿಂಗ್ ಅವರು ಭಾರತೀಯ ರೈಲ್ವೆಯಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲದ ಪ್ರಸಿದ್ಧ ಎಂಜಿನಿಯರಿಂಗ್ ವೃತ್ತಿಜೀವನವನ್ನು ಹೊಂದಿರುವ ತಂತ್ರಜ್ಞರು. ಅವರು ಅಸಾಧಾರಣ ತಾಂತ್ರಿಕ ಪರಿಣತಿ, ದೂರದೃಷ್ಟಿಯ ನಾಯಕತ್ವ ಮತ್ತು ಭಾರತದಾದ್ಯಂತ ಸಂಕೀರ್ಣ, ಹೆಚ್ಚಿನ ಪ್ರಭಾವ ಬೀರುವ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮಹತ್ವದ  ದಾಖಲೆಯನ್ನು ಹೊಂದಿದ್ದಾರೆ. ಅವರ ನಾಯಕತ್ವದಿಂದ ಈ ಯೋಜನೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ನನಗೆ ವಿಶ್ವಾಸವಿದೆ" ಎಂದು ಉಸ್ತುವಾರಿ ಎಂ.ಡಿ. ಆಗಿದ್ದ ಗೋವಿಂದ ರೆಡ್ಡಿ ಅವರು ಹೇಳಿದರು.

 ಕೆ-ರೈಡ್‌ನ ಎಂಜಿನಿಯರ್‌ಗಳು, ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಮತ್ತು ಯೋಜನಾ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಲಕ್ಷ್ಮಣ್ ಸಿಂಗ್, ಬೆಂಗಳೂರು ಉಪನಗರ ರೈಲು ಯೋಜನೆಯ (BSRP) ಪ್ರಗತಿಯನ್ನು ವೇಗಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು .  ಕಳೆದ ಕೆಲವು ವರ್ಷಗಳಿಂದ, ಈ ಯೋಜನೆಯ ನಾಡಿಮಿಡಿತವನ್ನು ನಾನು ಆಳವಾಗಿ ಅರ್ಥಮಾಡಿಕೊಂಡಿದ್ದೇನೆ .  ಅದರ ಮಹತ್ವ, ಕರ್ನಾಟಕದ ಜನರಿಗೆ ಅದರ ಪರಿವರ್ತನಾ ಸಾಮರ್ಥ್ಯ ಮತ್ತು ಅದು ಎದುರಿಸಿದ ಸವಾಲುಗಳ ಬಗ್ಗೆ ನನಗೆ ಅರಿವಿದೆ.  ನಮ್ಮ ಮುಂದಿರುವ ಕೆಲಸ ಎಷ್ಟು ಮುಖ್ಯ ಮತ್ತು ಅದು ಏನನ್ನು ಸಾಧಿಸಲು ಸಮರ್ಥವಾಗಿದೆ ಎಂದು ನನಗೆ ತಿಳಿದಿದೆ. ಕಷ್ಟಕರವಾದ ಸಮಸ್ಯೆಗಳು ಎಂಜಿನಿಯರ್‌ಗಳಿಗೆ ಹೊಸದಲ್ಲ.  ವಾಸ್ತವವಾಗಿ, ಸಮಸ್ಯೆಗಳು ಇರುವುದರಿಂದ ಎಂಜಿನಿಯರಿಂಗ್ ಅಸ್ತಿತ್ವದಲ್ಲಿದೆ. ಅಡೆತಡೆಗಳಿಂದ ನಾವು ವಿಚಲಿತರಾಗಲು ಸಾಧ್ಯವಿಲ್ಲ . ಅವು ನಮ್ಮನ್ನು ಮಾರ್ಗದರ್ಶನ ಮಾಡಬಹುದು  ಎಂದು ಕೆ-ರೈಡ್‌ನ ನೂತನ ಎಂ.ಡಿ. ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ. 

Advertisment

ಇದಲ್ಲದೆ, ಶ್ರೀ ಲಕ್ಷ್ಮಣ್ ಸಿಂಗ್ ಅವರು ಸಂಸ್ಥೆಯ ಕೆಲಸಕ್ಕೆ ಮಾರ್ಗದರ್ಶನ ನೀಡುವ ಮೌಲ್ಯಗಳ ಬಗ್ಗೆ ಒತ್ತಿ ಹೇಳಿದರು
ನಮ್ಮ ಜವಾಬ್ದಾರಿ ಸ್ಪಷ್ಟವಾಗಿದೆ. ನಮ್ಮ ಯೋಜನೆಗಳನ್ನು ಅಚಲವಾದ ಬದ್ಧತೆ, ಶಿಸ್ತು ಮತ್ತು ಹೆಮ್ಮೆಯಿಂದ ಕಾರ್ಯಗತಗೊಳಿಸುವುದು. ಈ ಯೋಜನೆಯು ಕಠಿಣ ಪರಿಶ್ರಮ, ಸ್ಮಾರ್ಟ್ ಕೆಲಸ ಮತ್ತು ತಂಡದ ಕೆಲಸವನ್ನು ಬಯಸುತ್ತದೆ. TRACK ಎಂಬ ಸಂಕ್ಷಿಪ್ತ ರೂಪದೊಂದಿಗೆ ಹೇಳಿದ್ದರು. 
Target clearly; Respond quickly; Act decisively; Coordinate seamlessly; Keep commitments
ಸ್ಪಷ್ಟವಾಗಿ ಗುರಿಯಿಡಿ; ತ್ವರಿತವಾಗಿ ಪ್ರತಿಕ್ರಿಯಿಸಿ; ನಿರ್ಣಾಯಕವಾಗಿ ವರ್ತಿಸಿ; ಮನಬಂದಂತೆ ಸಂಯೋಜಿಸಿ; ಬದ್ಧತೆಗಳನ್ನು ಇಟ್ಟುಕೊಳ್ಳಿ—K-RIDE ಅನ್ನು TRACK ಗೆ ಮರಳಿ ತರಲು ನಾವು ಒಟ್ಟಾಗಿ ಕೆಲಸ ಮಾಡೋಣ. ಒಟ್ಟಾಗಿ, ನಾವು K-RIDE ನ ವೇಗವನ್ನು ಪುನರುಜ್ಜೀವನಗೊಳಿಸುವುದಲ್ಲದೆ ಅದನ್ನು ವೇಗಗೊಳಿಸುತ್ತೇವೆ ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದರು. 

ಲಕ್ಷ್ಮಣ್ ಸಿಂಗ್ ಅವರಿಗೆ ಭಾರತೀಯ ರೈಲ್ವೇಯಲ್ಲಿ ದಶಕಗಳ ಕಾಲದ ಅನುಭವ ಇದೆ. ಅದು ಈಗ ಕೆ-ರೈಡ್‌ ನ ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯನ್ನು ಜಾರಿಗೊಳಿಸಲು ಸಹಾಯಕವಾಗುತ್ತೆ ಎಂಬ ನಿರೀಕ್ಷೆ ಇದೆ. ಇನ್ನೂ ಲಕ್ಷ್ಮಣ್ ಸಿಂಗ್ ಅವರು ಭಾರತೀಯ ರೈಲ್ವೇಯಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ಇದುವರೆಗೂ ನಿಭಾಯಿಸಿದ್ದಾರೆ.  ADRM, DRM (Works), ಚೀಫ್ ಇಂಜಿನಿಯರ್‌ (Construction),   ಪ್ರಧಾನ ಕಚೇರಿಯ ಹಿರಿಯ  ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಂಟ್ರಾಕ್ಟ್, ಮೂಲಸೌಕರ್ಯ ಅಭಿವೃದ್ದಿ, ಕಾನೂನು ವ್ಯವಹಾರಗಳು , ಒತ್ತುವರಿ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಬಜೆಟ್‌, ಅಂತರ ಇಲಾಖೆಯ ಸಮನ್ವಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಸಾಕಷ್ಟು ಅನುಭವವನ್ನು ಲಕ್ಷ್ಮಣ್ ಸಿಂಗ್ ಗಳಿಸಿದ್ದಾರೆ.
ಬಹಳಷ್ಟು ಮೂಲಸೌಕರ್ಯ ಯೋಜನೆಗಳ ಜಾರಿಯಲ್ಲಿ ಪ್ರಮುಖ ಪಾತ್ರವನ್ನು ಲಕ್ಷ್ಮಣ್ ಸಿಂಗ್ ನಿರ್ವಹಿಸಿದ್ದಾರೆ.
ಕರ್ನಾಟಕದ ವಿಜಯಪುರ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ನಡುವೆ ಭೀಮಾ ರೈಲು ಬ್ರಿಡ್ಜ್ ನಿರ್ಮಾಣದಲ್ಲಿ ಲಕ್ಷ್ಮಣ್ ಸಿಂಗ್ ಅವರ ಪಾತ್ರ ಪ್ರಮುಖವಾಗಿತ್ತು. ಬೆಂಗಳೂರಿನ ಬಯ್ಯಪ್ಪನಹಳ್ಳಿ ರೈಲ್ವೇ ಟರ್ಮಿನಲ್‌ನ ಮೊದಲ ಏರ್ ಕಂಡೀಷನ್ಡ್ ರೈಲ್ವೇ ಸ್ಟೇಷನ್ ನಿರ್ಮಾಣ ಮಾಡಿದ್ದರಲ್ಲಿ ಲಕ್ಷ್ಮಣ್ ಸಿಂಗ್ ಅವರ ಪಾತ್ರ ಇದೆ. 
ಭಾರತೀಯ ರೈಲ್ವೇಯಲ್ಲಿ ವಿವಿಧ ಸ್ಥಳಗಳಲ್ಲಿ 250 ರೈಲ್ವೇ ಕೆಳ ಸೇತುವೆ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡುವ ಮೂಲಕ ಲೆವೆಲ್ ಕ್ರಾಸಿಂಗ್ ಗಳನ್ನು ತೆಗೆದು ಹಾಕುವಲ್ಲಿ ಲಕ್ಷ್ಮಣ್ ಸಿಂಗ್  ಅವರ ಶ್ರಮ, ಪಾತ್ರ ಇದೆ. 
ಹೈಡ್ರೋ ಪವರ್ ಸುರಂಗ ಮಾರ್ಗಗಳ ನಿರ್ಮಾಣದ ಪ್ಲ್ಯಾನಿಂಗ್, ಡಿಸೈನ್ ಮತ್ತು ನಿರ್ಮಾಣದಲ್ಲಿ ಲಕ್ಷ್ಮಣ್ ಸಿಂಗ್ ಅವರಿಗೆ ಅನುಭವ ಇದೆ.
 ಈ ಎಲ್ಲ ಅನುಭವವನ್ನು ಈಗ ಬಳಸಿಕೊಂಡು ಕೆ-ರೈಡ್‌ನ ಮಹತ್ವಾಕಾಂಕ್ಷೆ ಯೋಜನೆಯಾದ ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸುವ ಮಹತ್ವದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಈಗ ಲಕ್ಷ್ಮಣ್ ಸಿಂಗ್ ಅವರಿಗೆ ನೀಡಿದೆ.
ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯೂ ಪರಿಹಾರವಾಗುತ್ತೆ ಎಂಬ ನಿರೀಕ್ಷೆ ಜನ ಸಾಮಾನ್ಯರು ಮತ್ತು ತಜ್ಞರಲ್ಲಿದೆ. ಹೀಗಾಗಿ ಆದಷ್ಟು ಬೇಗ ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯನ್ನು ಪ್ಲ್ಯಾನಿಂಗ್ ನಲ್ಲಿರುವಂತೆ ಜಾರಿಗೊಳಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

K RIDE FULL TIME MD LAXMAN SINGH TOOK CHARGE
Advertisment
Advertisment
Advertisment