Advertisment

ವ್ಯಕ್ತಿಯ ಜೀವ ತೆಗೆದ ಷೇರು ಮಾರುಕಟ್ಟೆ ವ್ಯವಹಾರ.. ಅಷ್ಟಕ್ಕೂ ಆಗಿದ್ದೇನು..?

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದ ಪರಿಣಾಮ ಸಾಲದ ಸುಳಿಗೆ ಸಿಲುಕಿ 50 ವರ್ಷದ ವ್ಯಕ್ತಿಯೊಬ್ಬರು ಹೆಬ್ಬಾಳ ರೈಲ್ವೆ ಹಳಿಯ ಬಳಿ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

author-image
Ganesh Kerekuli
bengaluru stock market
Advertisment
  • ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ.. ಲಾಸ್ ಆಗಿದಕ್ಕೆ ವ್ಯಕ್ತಿ ಆತ್ಮ ಹತ್ಯೆ
  • ಹೆಬ್ಬಾಳ ಬಳಿಯಲ್ಲಿರುವ ರೈಲ್ವೆ ಟ್ರ್ಯಾಕ್​ಗೆ ತಲೆಕೊಟ್ಟು ಸೂ*ಸೈಡ್
  • ಮೈತುಂಬಾ ಸಾಲ..ಆರ್ಥಿಕ ಹಿನ್ನಡೆಯಾಗಿ ಈ ನಿರ್ಧಾರ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಡಬಲ್​ ಆಗುತ್ತದೆ ಅಂತಾ ವ್ಯಕ್ತಿಯೊಬ್ಬ ಹೂಡಿಕೆ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿ ಕೊನೆಗೆ ಜೀವವನ್ನೇ ಬಿಟ್ಟ ದಾರುಣ ಘಟನೆ ನಡೆದಿದೆ. ಹಣದ ಆಸೆಗೆ ಹೂಡಿಕೆ ಮಾಡಿ ಇದೀಗ ಕುಟುಂಬಕ್ಕೆ ಆಧಾರವಾಗಿದ್ದ ಈ ವ್ಯಕ್ತಿ ಇಲ್ಲವಾಗಿದ್ದಾನೆ. 

Advertisment

ಏನಿದು ಪ್ರಕರಣ ?

ಇದನ್ನೂ ಒದಿ : ನೈಟ್ ಜಾಲಿ ರೈಡ್​ಗೆ ತೆರಳಿದ್ದಾಗ ಭೀಕರ ಅಪಘಾತ.. ಇಬ್ಬರು ಯುವಕರು ಬಲಿ

bengluru venkatesh

ಹಣ ಹೂಡಿಕೆ ಮಾಡಿ ಲಾಸ್ ಆಗಿ ಸಾಲ ಮಾಡಿಕೊಂಡ ವ್ಯಕ್ತಿಯೊಬ್ಬ ಹೆಬ್ಬಾಳ ಬಳಿಯಿರುವ ರೈಲ್ವೆ ಟ್ರ್ಯಾಕ್​ಗೆ ತಲೆಕೊಟ್ಟು ಸೂ*ಸೈಡ್ ಮಾಡಿಕೊಂಡ ಘಟನೆ ವರದಿಯಾಗಿದೆ. ಶ್ರೀರಾಂಪುರ ನಿವಾಸಿಯಾಗಿದ್ದ ವೆಂಕಟೇಶ್ ಮೃತಪಟ್ಟ ವ್ಯಕ್ತಿಯಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದ ಎನ್ನಲಾಗಿದೆ.

ಈ ವೇಳೆ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿ ಮೈತುಂಬಾ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ಹೆಚ್ಚಾಗಿ ಆರ್ಥಿಕ ಹಿನ್ನಡೆಯಾಗಿದ್ದರಿಂದ ಚಿಂತಿತನಾಗಿದ್ದ ವೇಂಕಟೇಶ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದ್ರಿಂದ ಮನನೊಂದು ಟ್ರೇನ್​ಗೆ ತಲೆಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Share market down SHARE MARKET TRADING bengaluru police Bengaluru News Bengaluru case Bengaluru
Advertisment
Advertisment
Advertisment