/newsfirstlive-kannada/media/media_files/2026/02/11/bidadi-murder-2026-02-11-15-59-36.jpg)
ಕೆಮ್ಮೋದು ತಪ್ಪಾ! ಕೆಮ್ಮಿದ್ರೆ ದಂಡ ಹಾಕ್ತಾರಾ? ಅಥವಾ ಹಲ್ಲೆ ಮಾಡ್ತಾರಾ? ಇಲ್ಲ ಕೊಲೆ ಮಾಡ್ತಾರಾ? ಯಾಕ್​ ಹೀಗೆ ಹೇಳ್ತಿದ್ದೀನಿ ಅಂತ ಅಂದ್ಕೋಬೇಡಿ..ಇಲ್ಲೇ ಇರೋದು ನೋಡಿ ಕಥೆ.. ಇಲ್ಲೊಂದು ಕಡೆ ಜೋರಾಗಿ ಕೆಮ್ಮಿದ್ದಕ್ಕೆ ಒಬ್ಬನ ಜೀವನೇ ಹೋಗಿದೆ.. ಕೇಳೋಕೆ ಶಾಕಿಂಗ್​ ಅನಿಸಿದ್ರೂ ಇದುವೇ ಸತ್ಯ.!
ಗಂಡನ ಕಿರಿಕಿರಿ ಆದ್ರೆ ಕೆಮ್ಮು ಬರುತ್ತೆ.. ಕಫ ಕಟ್ಟಿದ್ರೂ ಕೆಮ್ಮು ಬರೋದು ಸಹಜ.. ಮನುಷ್ಯ ಅಂದ್ಮೇಲೆ ಆರೋಗ್ಯ ಏರುಪೇರಾಗೋದು ಮಾಮೂಲಿ.. ಆದ್ರೆಲ್ಲಿ ಕೆಮ್ಮಿದ್ದ ಅನ್ನೋ ಒಂದೇ ಕಾರಣಕ್ಕೆ ಇಲ್ಲೊಬ್ಬನ ಜೀವಾನೇ ಹೋಗಿದೆ...
ಜೋರಾಗಿ ಕೆಮ್ಮಿದ್ದಕ್ಕೆ ಯುವಕನನ್ನ ಕೊಂದೇ ಬಿಟ್ಟ ರಾಕ್ಷಸ!
ಮನಸೋ ಇಚ್ಛೆ ಹಲ್ಲೆ.. ಚಿಕಿತ್ಸೆ ಫಲಿಸದೇ ವ್ಯಕ್ತಿಯ ಅಂತ್ಯ
ಸಣ್ಣ ವಿಚಾರಕ್ಕೂ ಮನುಷ್ಯ ಎಷ್ಟು ವಿಕೃತನಾಗಬಲ್ಲ ಅನ್ನೋದಕ್ಕೆ ರಾಮನಗರದಲ್ಲಿ ನಡೆದಿರೋ ಈ ಆಘಾತಕಾರಿ ಘಟನೆಯೇ ಸಾಕ್ಷಿ.. ಶಾಕಿಂಗ್​ ಅನಿಸಿದ್ರೂ ಇದುವೇ ಸತ್ಯ.. ಹೆಸ್ರು.. ವಿನೋದ್ ಕುಮಾರ್ ಜೈನ್.. ವಯಸ್ಸು 33 ವರ್ಷ.. ಮೂಲತಃ ರಾಜಸ್ಥಾನದವನು. ಬಿಡದಿಯ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ.. ತಾನಾಯ್ತು ತನ್ನ ಪಾಡಾಯ್ತು ಅಂತಿದ್ದ ಜೈನ್​ ಇವತ್ತು ಜೋರಾಗಿ ಕೆಮ್ಮಿದ ಅನ್ನೋ ಕ್ಷುಲಕ ಕಾರಣಕ್ಕಾಗಿ ಕೊಲೆಯಾಗಿ ಹೋಗಿದ್ದಾನೆ..
ಕೆಮ್ಮಿದ್ದಕ್ಕೆ ಕೊಲೆನಾ?
ರಾಮನಗರ ವಾಜರಹಳ್ಳಿ ಬಾಡಿಗೆ ಮನೆಯಲ್ಲಿ ವಿನೋದ್​ ವಾಸ
ಕೆಲ್ಸ ಮುಗಿಸಿ ಬಂದಿದ್ದ ವಿನೋದ್​ ನಿನ್ನೆ ರಾತ್ರಿ ಜೋರಾಗಿ ಕೆಮ್ಮುತ್ತಿದ್ದ
ಈ ವಿಚಾರ ಪಕ್ಕದ ಮನೆಯಲ್ಲಿ ವಾಸವಿದ್ದ ಹೊಂಬಯ್ಯನಿಗೆ ಕಿರಿಕಿರಿ
ಸಿಟ್ಟಿಗೆದ್ದ ಹೊಂಬಯ್ಯ, ವಿನೋದ್​ ರೂಮ್​ ಬಳಿ ಬಂದು ಪ್ರಶ್ನಿಸಿದ್ದ
ಜೋರಾಗಿ ಕೆಮ್ಮಿ ನಮಗೆ ತೊಂದರೆ ಕೊಡುತ್ತೀಯಾ ಅಂತ ಕಿರಿಕ್​​
ಬಳಿಕ ಹೊಂಬಯ್ಯ, ಆತನ ಕುಟುಂಬಸ್ಥರು ವಿನೋದ್ ಮೇಲೆ ಹಲ್ಲೆ
ಒಂಟಿಯಾಗಿದ್ದ ವಿನೋದ್‌ನನ್ನು ಅಟ್ಟಾಡಿಸಿ, ಮನಸೋ ಇಚ್ಛೆ ಥಳಿತ
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನೋದ್
ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸ್ತಿದ್ದ ವಿನೋದ್​​
ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ವಿನೋದ್ ಕುಮಾರ್ ಜೈನ್
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ವಾಜರಹಳ್ಳಿ ಗ್ರಾಮದ ಬಾಡಿಗೆ ಮನೆಯೊಂದ್ರಲ್ಲಿ ವಿನೋದ್​ ವಾಸವಾಗಿದ್ದ.. ಎಂದಿನಂತೆ ಕೆಲ್ಸ ಮುಗಿಸಿ ಮನೆಗೆ ಬಂದಿದ್ದ ವಿನೋದ್​ ನಿನ್ನೆ ರಾತ್ರಿ ಮನೆಯಲ್ಲಿ ಜೋರಾಗಿ ಕೆಮ್ಮುತ್ತಿದ್ದ ಎನ್ನಲಾಗಿದೆ.. ಇದೇ ವಿಚಾರ ಪಕ್ಕದ ಮನೆಯಲ್ಲಿ ವಾಸವಿದ್ದ ಹೊಂಬಯ್ಯ ಎಂಬಾತನಿಗೆ ಕಿರಿಕಿರಿ ಉಂಟು ಮಾಡಿದ್ದು, ಕೆಮ್ಮಿದ್ದಕ್ಕೆ ಸಿಟ್ಟಿಗೆದಿದ್ದ.. ಅಲ್ದೆ ಆತನ ರೂಮ್​​ ಬಳಿ ಬಂದಿದ್ದ ಇದೇ ಹೊಂಬಯ್ಯ..ಮೊದ್ಲು ಪದೇ ಪದೇ ಜೋರಾಗಿ ಕೆಮ್ಮಿ ನಮಗೆ ತೊಂದರೆ ಕೊಡುತ್ತೀಯಾ? ಅಂತ ಕಿರಿಕ್ ತೆಗೆದಿದ್ದ.. ಬಳಿಕ ಆರೋಪಿ ಹೊಂಬಯ್ಯ ಹಾಗೂ ಆತನ ಕುಟುಂಬಸ್ಥರು ವಿನೋದ್ ಮೇಲೆ ಏಕಾಏಕಿ ಮುಗಿಬಿದ್ದಿದ್ರು... ಒಂಟಿಯಾಗಿದ್ದ ವಿನೋದ್‌ನನ್ನು ಅಟ್ಟಾಡಿಸಿ, ಮನಸೋ ಇಚ್ಛೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನೋದ್‌ನನ್ನು ತಕ್ಷಣವೇ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿನೋದ್ ಕುಮಾರ್ ಜೈನ್, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಹೊಂಬಯ್ಯ ಮತ್ತು ಆತನ ಕುಟುಂಬಸ್ಥರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಬ್ಬ ಅನ್ಯರಾಜ್ಯದ ಯುವಕನ ಮೇಲೆ ಈ ರೀತಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಜೀವ ತೆಗೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ..
ಏನೇ ಹೇಳಿ ಸಣ್ಣ ಕೆಮ್ಮಿನ ವಿಚಾರಕ್ಕೆ ಶುರುವಾದ ಜಗಳ ಈಗ ಕೊಲೆಯಲ್ಲಿ ಅಂತ್ಯವಾಗಿದ್ದು, ಉತ್ತರ ಭಾರತದ ಯುವಕನ ಕುಟುಂಬ ಈಗ ಬೀದಿಗೆ ಬಿದ್ದಿದೆ.
ಮೋಹನ್​​, ರಾಮನಗರ ನ್ಯೂಸ್​​ಫಸ್ಟ್​ ಬೆಂಗಳೂರು
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us