/newsfirstlive-kannada/media/media_files/2025/12/04/bangalotre-amulya-suicide-case-2025-12-04-17-44-06.jpg)
ಅಮೂಲ್ಯ ಹಾಗೂ ಗಂಡ ಅಭಿಷೇಕ್
ತಾಳಿ ಕಟ್ಟಿದವನಿಗೂ.. ತಾಳಿ ಕಟ್ಟಿಸಿಕೊಂಡವಳಿಗೂ.. ತಾಳ್ಮೆ ಒಂದಿದ್ರೆ ಜೀವಗಳು ಜೀವಂತವಾಗಿರುತ್ತೆ.. ತಾಳ್ಮೆ ಕಟ್ಟೆ ಒಡೆದ್ರೆ.. ಜೀವಗಳು ಆತ್ಮಗಳಾಗಿ ನೆನಪಷ್ಟೇ ಶಾಶ್ವತವಾಗಿ ಉಳಿಯುತ್ತೆ. ಇದಕ್ಕೆ ಮತ್ತೊಂದು ಸಾಕ್ಷಿ ಬೆಂಗಳೂರಿನಲ್ಲಾದ ಈ ದುರ್ಘಟನೆ.. ಸದ್ಯ ಈ ಪ್ರಕರಣ ಹೆಣ್ಣು ಹೆತ್ತ ಪೋಷಕರಲ್ಲಿ ಮತ್ತಷ್ಟು ಭಯ ಹೆಚ್ಚಿಸಿದೆ.
ಊರಿಗೆಲ್ಲಾ ತಾಳಿ ತೋರಿಸಿ.. ಗಟ್ಟಿಮೇಳದಲ್ಲಿ ಅಕ್ಷತೆ ಹಾಕಿಸಿ.. ಪಂಡಿತರ ಮಂತ್ರದ ಮೂಲಕ ಆಕೆ ಕೊರಳಿಗೆ ತಾಳಿ ಕಟ್ಟಿ.. ಆಕೆಯಲ್ಲಿ ಜೀವನದ ನಂಬಿಕೆ ಹುಟ್ಟಿಸಿದ್ದ.. ಆ ದಿನ ತಾಳಿ ಕಟ್ಟಿದ್ದ ಅದೇ ಕೊರಳು ಈ ದಿನ ನೇಣಿನ ಕುಣಿಕೆಯಲ್ಲಿತ್ತು.
ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆಗೆ ಶರಣು!
3 ತಿಂಗಳ ಹಿಂದೆ ಮದುವೆ.. ಗಂಡನ ಮನೆಯಲ್ಲೇ ಸೂಸೈಡ್!
ಅಭಿಷೇಕ್​ ಜೊತೆ ವಿವಾಹವಾಗಿ, ಮದುವೆ ಅನ್ನೋ ಅಮೂಲ್ಯವಾದ ಬಂದನಕ್ಕೆ ಕಾಲಿಟ್ಟ ಅಮೂಲ್ಯ ನರಳಿ.. ನರಳಿ ಪ್ರಾಣ ಬಿಟ್ಟಿದ್ದಾಳೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಮಾನ್ ನಗರದಲ್ಲಿ ಈ ಘಟನೆ ನಡೆದಿದೆ. ಮದುವೆ ಆಗಿ ಮೂರೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹಲವು ಅನುಮಾನಗಳನ್ನ ಹುಟ್ಟಿಸಿದೆ.
ಮೂರು ತಿಂಗಳ ಮದುವೆ!
ಮದುವೆಗೂ ಮುಂಚೆ ಪ್ರೀತಿಯಲ್ಲಿದ್ದ ಅಭಿಷೇಕ್-ಅಮೂಲ್ಯ
ಅಕ್ಕಪಕ್ಕದ ಏರಿಯಾದವರಾಗಿದ್ರಿಂದ ಇಬ್ಬರ ನಡುವೆ ಪ್ರೀತಿ
ಮೂರು ತಿಂಗಳ ಹಿಂದೆ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆ
ನಿನ್ನೆ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿರೋ ಅಮೂಲ್ಯ
ಅಮೂಲ್ಯ ಆತ್ಮಹತ್ಯೆಯ ನಿಖರ ಕಾರಣ ತಿಳಿದು ಬಂದಿಲ್ಲ
ಬೆಂಗಳೂರಿನ ಆಂದ್ರಹಳ್ಳಿಯಲ್ಲಿ ನಿವಾಸಿಯಾಗಿದ್ದ ಮೃತ ಅಮೂಲ್ಯ, ವಿದ್ಯಾಮಾನ್ ನಗರದಲ್ಲಿದ್ದ ಅಭಿಷೇಕ್ ಎಂಬುವನ್ನ ಪ್ರೀತಿಸಿ ಮದುವೆಯಾಗಿದ್ದರು. ಅಕ್ಕಪಕ್ಕದ ಏರಿಯಾದವರಾಗಿದ್ರಿಂದ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಅದ್ಧೂರಿಯಾಗಿ ಮದುವೆ ಆಗಿದ್ದರು. ಆದ್ರೆ, ನಿನ್ನೆ ಏಕಾಏಕಿ ಗಂಡ ಅಭಿಷೇಕ್​ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾಳೆ. ಅಮೂಲ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
/filters:format(webp)/newsfirstlive-kannada/media/media_files/2025/12/04/dowry-death-complaiant-2025-12-04-18-08-51.jpg)
ಆದ್ರೆ ಹೆತ್ತ ಕರುಳಿನ ನೋವು ಮುಗಿಲು ಮುಟ್ಟಿತ್ತು.. ಅಮೂಲ್ಯ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಅಭಿಷೇಕ್​ ಕುಟುಂಬಸ್ಥರೇ ಕಾರಣ ಅಂತ ಅಮೂಲ್ಯ ತಾಯಿಯ ಕಣ್ಣೀರು ಆರೋಪಿಸಿದೆ.
ಮಗಳನ್ನ ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದು, ಕಣ್ಣೀರಿಡುತ್ತಿದ್ದಾರೆ. ಸದ್ಯ, ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಶುರು ಮಾಡಿದ್ದಾರೆ. ತನಿಖೆ ಬಳಿಕವಷ್ಟೇ ಸತ್ಯಾ ಸತ್ಯತೆ ಹೊರ ಬರಬೇಕಿದೆ.. ಅದೇನೆ ಹೇಳಿ.. ಕೊರಗುತ್ತಲೋ.. ಕರಗುತ್ತಲೋ.. ಕಾಯುತ್ತಲೋ ಬದುಕಬೇಕು.. ಪ್ರಾಣ ಕಳೆದುಕೊಳ್ಳೋ ತಪ್ಪು ನಿರ್ಧಾರ ಕೈಗೊಳ್ಳಬಾರದು..
ಚಂದ್ರಶೇಖರ್​ ನ್ಯೂಸ್ ಫಸ್ಟ್​ ಕ್ರೈಂ ಬ್ಯುರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us