ಮಾಂಸಪ್ರಿಯರಿಗೆ ಚಳಿಗಾಲ ತಂದ ಆಘಾತ.. ಜೇಬು ಸುಡ್ತಿದೆ ಚಿಕನ್, ಮಟನ್, ಮೊಟ್ಟೆ ರೇಟ್..!

ಚಳಿಗಾಲದ ಮಧ್ಯೆ ನಾನ್​ವೆಜ್​ ಪ್ರಿಯರಿಗೆ ಬಿಗ್​ಶಾಕ್​ ಎದುರಾಗಿದೆ. ಒಂದು ಕೆಜಿ ಮಟನ್​ಗೆ 900 ರೂಪಾಯಿಯಿಂದ 1ಸಾವಿರ ರೂಪಾಯಿ ದರ ಇದೆ. ದಿನ ನಿತ್ಯದ ವಸ್ತುಗಳ ರೇಟ್ ಹೆಚ್ಚಳದ ನಡುವೆ, ಅಪರೂಪಕ್ಕೆ ಚಿಕನ್, ಮಟನ್ ತಿನ್ನೋಣ ಅಂದ್ರೂ ರೇಟು ಹೆಚ್ಚು ಅಂತಿದ್ದಾರೆ ಜನ!

author-image
Ganesh Kerekuli
nonveg
Advertisment

ಬೆಂಗಳೂರು: ಚಳಿಗಾಲದ ಮಧ್ಯೆ ನಾನ್​ವೆಜ್​ ಪ್ರಿಯರಿಗೆ ಬಿಗ್​ಶಾಕ್​ ಎದುರಾಗಿದೆ. ಒಂದು ಕೆಜಿ ಮಟನ್​ಗೆ 900 ರೂಪಾಯಿಯಿಂದ 1ಸಾವಿರ ರೂಪಾಯಿ ದರ ಇದೆ. ಚಿಕನ್ ರೇಟ್​ ಕೂಡ ಹೆಚ್ಚಾಯ್ತು, ಹಿಂಗಾದ್ರೆ ಹೆಂಗೆ ಅಂತ ಜನರು ಕಂಗಾಲಾಗಿದ್ದಾರೆ. ಡಿಮ್ಯಾಂಡ್ ಹೆಚ್ಚಾಗಿ, ಸಪ್ಲೈ ಕಮ್ಮಿಯಾಗಿದೆ. ಈ ವೇಳೆ ದರ ಕೂಡ ಜಾಸ್ತಿಯಾಗಿದೆ. ಮಟನ್ ಮಾತ್ರ ಅಲ್ಲ, ಚಿಕನ್, ಮೊಟ್ಟೆ ದರದಲ್ಲೂ ಭಾರೀ ಏರಿಕೆಯಾಗಿದೆ.

ಹೇಗಿದೆ ಬೆಲೆ ಏರಿಕೆ..?

ಯಾವುದು?  

ಹಿಂದಿನ ದರ

ಈಗಿನ ದರ

ಮಟನ್ ದರಕೆ.ಜಿಗೆ 650-750ರೂ 900ರೂ.-1000 ರೂ
ಚಿಕನ್ ದರ  ಕೆ.ಜಿಗೆ 250 ರೂ.280-300ರೂ.    
ಮೊಟ್ಟೆ ದರಒಂದು ಮೊಟ್ಟೆಗೆ 5.5 ರೂ  ಒಂದು ಮೊಟ್ಟೆಗೆ 7.10/8 ರೂ.

ನಾನ್ ವೆಜ್ ರೇಟ್ ಜಾಸ್ತಿಯಾಗಿರೋದು ಯಾಕೆ? 

  • ಚಳಿಗಾಲದಲ್ಲಿ ನಾನ್​ವೆಜ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚಳ
  • ಕಾಲ್ ಸೂಪ್, ಬಿರಿಯಾನಿ ತಿನ್ನುವವವರ ಸಂಖ್ಯೆಯೂ ಕೊಂಚ ಹೆಚ್ಚೇ ಇದೆ 
  • ಇದರಿಂದ ಚಳಿಗಾಲದಲ್ಲಿ ಡಿಮ್ಯಾಂಡ್ ಹೆಚ್ಚಳ, ಅದಕ್ಕೆ ತಕ್ಕಂತೆ ಸಪ್ಲೈ ಇಲ್ಲ 
  • ಮತ್ತೊಂದ್ಕಡೆ, ಈ ಕಾಲದಲ್ಲಿ ಮೇಕೆ, ಕುರಿಯ ಬೆಳವಣಿಗೆ ಕೂಡ ಕಮ್ಮಿ ಇರುತ್ತೆ
  • ಹೀಗಾಗಿ ಮೇಕೆ ಕುರಿ ಮೇಕೆಯನ್ನ ಮಾರಾಟ ಮಾಡೋದು ಕೊಂಚ ತಗ್ಗುತ್ತೆ
  • ಪ್ರಮುಖವಾಗಿ ಚಳಿಗಾಲದಲ್ಲಿ ಬಹುಬೇಗ ಪ್ರಾಣಿಗಳಿಗೆ ರೋಗ ಹರಡುತ್ತೆ
  • ಇದ್ರಿಂದಲೂ ಮಾರುಕಟ್ಟೆಗೆ ಮಾಂಸದ ಸಾಗಾಟ ಇಳಿಕೆಯಾಗಿರೋ ಸಾಧ್ಯತೆ

ಇದನ್ನೂ ಓದಿ: ಹೊಸ ವರ್ಷದಲ್ಲಿ ಮೊಬೈಲ್ ಬಳಕೆದಾರರಿಗೆ ಕಾದಿದೆ ಬಿಗ್ ಶಾಕ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chicken Nonveg meat rate
Advertisment