ಪುರುಷರೇ ಎಚ್ಚರ! ಮಹಾನಗರಗಳಲ್ಲಿ ಹುಡುಗಿಯರ ಮೂಲಕ ಹಗರಣ ನಡೆಸುವ ಪಬ್, ರೆಸ್ಟೋರೆಂಟ್ ಗಳೂ ಇವೆ : ಏನಿದು ವಂಚನೆ?

ಬೆಂಗಳೂರು, ದೆಹಲಿ, ಮುಂಬೈ, ಗುರುಗ್ರಾಮದ ಕೆಲವು ರೆಸ್ಟೋರೆಂಟ್ ಗಳು ಕಾಲೇಜು ಹುಡುಗಿಯರನ್ನು ನೇಮಿಸಿಕೊಂಡು ಶ್ರೀಮಂತ ಹುಡುಗರು, ಐಟಿ ಹುಡುಗರ ಹಿಂದೆ ಬಿಡುತ್ತಿವೆ. ಹುಡುಗರನ್ನು ಆ ರೆಸ್ಟೋರೆಂಟ್ ಗಳಿಗೆ ಕರೆದುಕೊಂಡು ಹೋಗಿ 50 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿಯವರೆಗೂ ಬಿಲ್ ಆಗುವಂತೆ ಹುಡುಗಿಯರು ನೋಡಿಕೊಳ್ಳುತ್ತಾರೆ. ಬಿಲ್ ನಲ್ಲಿ ಹುಡುಗಿಯರಿಗೂ ಕಮೀಷನ್ ಸಿಗುತ್ತೆ. ಇದೊಂದು ಹಗರಣ! ಎಚ್ಚರ ಪುರುಷರೇ, ಹುಡುಗರೇ!

author-image
Chandramohan
ಿFIVE STAR RESTAURANTS 02

ಬೆಂಗಳೂರಿನ ಪ್ರತಿಷ್ಠಿತ ರೆಸ್ಟೆೋರೆಂಟ್, ಪಬ್ ಗಳು

Advertisment
  • ಶ್ರೀಮಂತರು, ಐಟಿ ಮಂದಿಯನ್ನು ರೆಸ್ಟೋರೆಂಟ್ ಗೆ ಕರೆದೊಯ್ದು ಬಿಲ್ ಮಾಡಿಸುವ ಗ್ಯಾಂಗ್
  • 50 ಸಾವಿರದಿಂದ 1 ಲಕ್ಷದವರೆಗೂ ಬಿಲ್ ಮಾಡಿಸುವ ಹುಡುಗಿಯರ ಗ್ಯಾಂಗ್!
  • ಕೈಯಲ್ಲಿ ಕ್ಯಾಶ್ ಇಲ್ಲದಿದ್ದರೇ, ಕ್ರೆಡಿಟ್ ಕಾರ್ಡ್ ನಲ್ಲಿ ಪೇ ಮಾಡಿ ಹೊರಬರಬೇಕು!


ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಲಕ್ನೋದಂಥ ಮಹಾನಗರಗಳಲ್ಲಿ ಇತ್ತೀಚೆಗೆ ರೆಸ್ಟೋರೆಂಟ್ ಗಳಿಗೆ ಹೋಗಿ ಬಂದವರು ಇಂಗು ತಿಂದ ಮಂಗನಂತೆ ಆಗುತ್ತಿದ್ದಾರೆ. ಹುಡುಗರನ್ನು, ಶ್ರೀಮಂತರನ್ನು, ಐ.ಟಿ. ಉದ್ಯೋಗಿಗಳನ್ನು ಕೆಲ ಹುಡುಗಿಯರು ಫ್ರೆಂಡ್ ಷಿಪ್, ಡೇಟಿಂಗ್ ಹೆಸರಿನಲ್ಲಿ ತಮ್ಮ ಬಲೆಗೆ ಕೆಡವಿಕೊಳ್ಳುತ್ತಾರೆ. ಬಳಿಕ ಹೈ ಫೈ ರೆಸ್ಟೋರೆಂಟ್ ಗೆ ಊಟ, ತಿಂಡಿ, ಡ್ರಿಂಕ್ಸ್ ಗೆಂದು ಕರೆದೊಯ್ಯುತ್ತಾರೆ. ಅಲ್ಲಿ ಸಾವಿರಾರು ರೂಪಾಯಿ ಬಿಲ್ ಮಾಡಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಹುಡುಗಿಯರನ್ನು ರೆಸ್ಟೋರೆಂಟ್ ಗೆ ಕರೆದೊಯ್ದಿದ್ದ ಶ್ರೀಮಂತ ವ್ಯಕ್ತಿ, ಶ್ರೀಮಂತ ಮನೆತನದ ಹುಡುಗ, ಐ.ಟಿ. ಉದ್ಯೋಗಿ ಆ ಸಾವಿರಾರು ರೂಪಾಯಿ ಬಿಲ್ ನೀಡಿ, ಆ ರೆಸ್ಟೊರೆಂಟ್ ನಿಂದ ಹೊರ ಬರಬೇಕಾದ ಸ್ಥಿತಿ ನಿರ್ಮಿಸುತ್ತಾರೆ. 
ಒಂದೆರೆಡು ಪೆಗ್ ಹಾಕುವವರೆಗೂ ಹುಡುಗರು, ಪುರುಷರು ತಮ್ಮ ನಿಯಂತ್ರಣದಲ್ಲೇ ಇರುತ್ತಾರೆ. ಆದರೇ, ಆದಾದ ಬಳಿಕ ನಿಯಂತ್ರಣ ಕಳೆದುಕೊಂಡಂತೆ, ಬಿಲ್ ಕೂಡ ನಿಯಂತ್ರಣ ಇಲ್ಲದೇ ಸರನೇ ಏರಿಬಿಡುತ್ತೆ.  ಹುಡುಗರಿಗೂ ಏಕೆ ಹೀಗೆ ರೆಸ್ಟೋರೆಂಟ್, ಪಬ್  ಬಿಲ್ ಏರಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಲು ಒಂದೆರೆಡು ದಿನ ಬೇಕಾಗುತ್ತೆ. ತಮ್ಮ ಜೊತೆಗೆ ಬಂದಿದ್ದ ಗರ್ಲ್ ಫ್ರೆಂಡ್ ಮಹಿಮೆಯಿಂದ ಆ ಹೋಟೇಲ್, ರೆಸ್ಟೊರೆಂಟ್, ಪಬ್ ನ ಬಿಲ್ ಸಿಕ್ಕಾಪಟ್ಟೆ ಏರಿಬಿಟ್ಟಿರುತ್ತೆ. 
ರೆಸ್ಟೋರೆಂಟ್ , ಪಬ್ ನಲ್ಲಿ ಚೆನ್ನಾಗಿ ತಿಂದು, ಕುಡಿದು ಬಿಲ್ ಕೊಡಬೇಕಾದ್ದು, ಹುಡುಗಿಯರನ್ನು ಕರೆದುಕೊಂಡು ಹೋದ ಹುಡುಗರ ಜವಾಬ್ದಾರಿಯೇ ಆಗಿರುತ್ತೆ. ಹುಡುಗರೇ, ಪ್ರತಿಷ್ಠೆಗೆ ಬಂದು ರೆಸ್ಟೋರೆಂಟ್, ಪಬ್ ಬಿಲ್ ನೀಡಲು ಹೋದಾಗ, ಅವರಿಗೆ ಶಾಕ್ ಕಾದಿರುತ್ತೆ. ರೆಸ್ಟೋರೆಂಟ್ , ಪಬ್ ಬಿಲ್ 50 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೂ ಏರಿಬಿಟ್ಟಿರುತ್ತೆ. ಕೊಡದೇ ಇದ್ದರೇ, ಮರ್ಯಾದೆ ಹೋಗುತ್ತೆ. ರೆಸ್ಟೋರೆಂಟ್, ಪಬ್ ನವರ ಜೊತೆ ಬಿಲ್ ಸಿಕ್ಕಾಪಟ್ಟೆ ಆಗಿದೆ, ನಾನು ಇಷ್ಟು ತಿಂದಿಲ್ಲ, ಇಷ್ಟೊಂದು ಕುಡಿದಿಲ್ಲ ಎಂದು ಹೇಳಿದರೇ, ಕೇಳಲ್ಲ, ಬೌನ್ಸರ್ ಗಳನ್ನು ಬಿಟ್ಟು ಗ್ರಾಹಕ ಪ್ರಭುವಿಗೆ ಹೊಡೆಸುವ ಚಾನ್ಸ್ ಕೂಡ ಇರುತ್ತೆ.
ಹೀಗಾಗಿ ಬಿಲ್  ಏರಿದ ಮೇಲೆ ಅಲ್ಲಿಂದ ಹೊರ ಬರಬೇಕೆಂದರೇ, ಆ ಬಿಲ್ ಹಣವನ್ನು ಪಾವತಿ ಮಾಡಲೇಬೇಕು. ಹೀಗಾಗಿ ಜೇಬಿನಲ್ಲಿರುವ ಎಲ್ಲ ಹಣವನ್ನು ಕೊಟ್ಟು ಅಲ್ಲಿಂದ ಹೊರಗ ಬರಬೇಕು, ಇಲ್ಲವೇ ಕ್ರೆಡಿಟ್ ಕಾರ್ಡ್ ಬಳಸಿಯೋ ಹಣ ಕೊಡಬೇಕು. ಇಲ್ಲವೇ, ಸ್ನೇಹಿತರಿಂದ, ಮನೆಯವರಿಂದ ಹಣ ಹಾಕಿಸಿಕೊಂಡು ರೆಸ್ಟೊರೆಂಟ್ , ಪಬ್ ಗೆ ಹಣ ಪಾವತಿ ಮಾಡಿ ಅಲ್ಲಿಂದ ಹೊರಬರಬೇಕಾಗಿದೆ.  
ಬೆಂಗಳೂರು, ದೆಹಲಿ, ಮುಂಬೈನಂಥ ಮಹಾನಗರಗಳಲ್ಲಿ ಕೆಲ ಹುಡುಗಿಯರು ಡೇಟಿಂಗ್ ಆ್ಯಪ್ ನಲ್ಲಿ ತಮ್ಮ ಪ್ರೊಫೈಲ್ ಸೃಷ್ಟಿಸಿಕೊಂಡು ಹುಡುಗರನ್ನು, ಶ್ರೀಮಂತ ಮನೆತನದವರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಬಳಿಕ ಟೈಮ್ ಪಾಸ್, ರೋಮ್ಯಾನ್ಸ್ , ಕ್ವಾಲಿಟಿ ಟೈಮ್ ಕಳೆಯೋಣ ಅಂತ ಹೈ ಫೈ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ಸಿಕ್ಕಾಪಟ್ಟೆ ಬಿಲ್ ಮಾಡಿಬಿಡುತ್ತಾರೆ. ಹುಡುಗಿಯರು ಬಲೆಗೆ ಬಿದ್ದ ಹುಡುಗರು, ಪುರುಷರೇ ಇಲ್ಲಿ ಇಂಗು ತಿಂದ ಮಂಗನಂತೆ ಆಗುತ್ತಾರೆ.  ಹಾಗಾಗಿ ಪುರುಷರು, ಹುಡುಗರು, ಹೊಸ ಹುಡುಗಿಯರ ಜೊತೆ ಹೈ ಫೈ ರೆಸ್ಟೋರೆಂಟ್, ಪಬ್ ಗೆ ಹೋಗುವ ಮುನ್ನ ಹುಷಾರಾಗಿರಬೇಕು. ಆ ಹುಡುಗಿಯರ ಬಗ್ಗೆ ನಿಮಗೆ ನಂಬಿಕೆ ಇದ್ದರೇ, ಹೋಗಿ. ನಿಮ್ಮ ಜೇಬಿನ ಹಿತಾಸಕ್ತಿಯನ್ನು ಕಾಪಾಡುವ ಹುಡುಗಿಯರಾಗಿದ್ದರೇ, ತೊಂದರೆ ಇಲ್ಲ. ನಿಮ್ಮ ಜೇಬಿನ ಹಿತಾಸಕ್ತಿ ಕಾಪಾಡದೇ, ಕೆಲವೇ ನಿಮಿಷದಲ್ಲಿ ರಾಕೆಟ್ ವೇಗದಲ್ಲಿ ಬಿಲ್ ಮೊತ್ತ ಏರಿಸುವ ಹುಡುಗಿಯರು ಇದ್ದರೇ ಎಂಬ ಎಚ್ಚರದಲ್ಲಿ ಹುಡುಗರು, ಶ್ರೀಮಂತ ಮನೆತನದ ಪುರುಷರು ಇರಬೇಕಾದ ಅನಿವಾರ್ಯ ಪರಿಸ್ಥಿತಿ ಈಗ ಬಂದಿದೆ.
ಬೆಂಗಳೂರು, ಮುಂಬೈ, ದೆಹಲಿ, ಗುರುಗ್ರಾಮನ ಪೊಲೀಸ್ ಠಾಣೆಯಲ್ಲಿ ರೆಸ್ಟೋರೆಂಟ್, ಪಬ್ ಗಳಲ್ಲಿ ಹುಡುಗಿಯರ ಜೊತೆ ಹೋದಾಗ, ಬಿಲ್ ಗಗನದೆತ್ತರಕ್ಕೆ ಏರಿದ್ದ ಬಗ್ಗೆ  ಅನುಮಾನ ವ್ಯಕ್ತಪಡಿಸಿ ಅನೇಕ ಮಂದಿ ಈಗಾಗಲೇ ದೂರು ನೀಡಿದ್ದಾರೆ.  ಇದು ಹೈ ಫೈ ರೆಸ್ಟೊರೆಂಟ್, ಪಬ್ ಗಳು ಬ್ಯುಸಿನೆಸ್ ಇಲ್ಲದೇ ಖಾಲಿ ಹೊಡೆಯುವ ಬದಲು ಹುಡುಗಿಯರ ಮೂಲಕ ಬ್ಯುಸಿನೆಸ್ ವೃದ್ದಿಸಿಕೊಳ್ಳುವ ಹೊಸ ಐಡಿಯಾ ಕಂಡುಕೊಂಡಿವೆ. 


ಿFIVE STAR RESTAURANTS


ರೆಸ್ಟೊರೆಂಟ್, ಪಬ್ ಗಳಿಗೆ ತಮ್ಮ ಬ್ಯುಸಿನೆಸ್ ಆಗಬೇಕು. ಹಾಗಾಗಿ ಹುಡುಗಿಯರನ್ನೇ ತಮ್ಮ ಏಜೆಂಟರಾಗಿ ನೇಮಿಸಿಕೊಂಡಿರುತ್ತಾವೆ. ತಮ್ಮ ಲಾಭಾಂಶದಲ್ಲಿ ಹುಡುಗಿಯರಿಗೂ ರೆಸ್ಟೊರೆಂಟ್, ಪಬ್ ಗಳು ಕಮೀಷನ್ ನೀಡುತ್ತಾವೆ. ಈ ಕಮೀಷನ್ ಹಣದ ಆಸೆಗಾಗಿ ಹೈ ಫೈ ಹುಡುಗಿಯರು ಶ್ರೀಮಂತ ಹುಡುಗರು, ಶ್ರೀಮಂತ ವ್ಯಕ್ತಿಗಳು, ಐ.ಟಿ. ಉದ್ಯೋಗಿಗಳನ್ನು ತಮ್ಮ ಬಲೆಗೆ ಕೆಡವಿಕೊಂಡು ರೆಸ್ಟೊರೆಂಟ್, ಪಬ್ ಗಳಿಗೆ ಲಾಭ ಮಾಡಿಕೊಡುತ್ತಾರೆ. 
ಹುಡುಗಿಯರು- ರೆಸ್ಟೋರೆಂಟ್, ಪಬ್ ಗಳ ಮಧ್ಯೆ ಮೊದಲೇ ಒಪ್ಪಂದ ಏರ್ಪಟ್ಟಿರುತ್ತೆ. ತಮಗೆ ಲಾಭಾಂಶ ನೀಡುವ ರೆಸ್ಟೋರೆಂಟ್, ಪಬ್ ಗಳಿಗೆ ಹುಡುಗರನ್ನು ಹುಡುಗಿಯರು ಕರೆದೊಯ್ಯುತ್ತಾರೆ. ಆದರೇ, ಈ ಪವಿತ್ರ ಮೈತ್ರಿಯ ಕಥೆ ಗೊತ್ತಿಲ್ಲದೇ, ಹುಡುಗರು, ಶ್ರೀಮಂತರು ಬಲೆಗೆ ಬಿದ್ದ ಮಿಕಗಳಂತಾಗುತ್ತಾರೆ. 




ಪೊಲೀಸರಿಗೆ ಕೆಲವರು ದೂರು ನೀಡಿ, ರೆಸ್ಟೋರೆಂಟ್, ಪಬ್ ವಿರುದ್ಧ ತನಿಖೆ ಮಾಡಿಸಿದ್ದಾರೆ. ಆಗ ಹುಡುಗಿಯರನ್ನು ಬಳಸಿಕೊಂಡು  ಎಣ್ಣೆ ಏರಿಸಿದಂತೆ, ಬಿಲ್ ಸಿಕ್ಕಾಪಟ್ಟೆ  ಏರಿಸುವ ಮೋಸದ ಜಾಲ ಪತ್ತೆಯಾಗಿದೆ. ಹೀಗಾಗಿ ಹುಡುಗರು ಎಚ್ಚೆತ್ತುಕೊಳ್ಳಲಿ ಎಂದು ನಾವು ಇದನ್ನೆಲ್ಲಾ ಇಲ್ಲಿ ಹೇಳುತ್ತಿದ್ದೇವೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 


RESTAURANTS, PUBS BILL SCAM
Advertisment