/newsfirstlive-kannada/media/media_files/2025/12/29/bmrcl-time-extended-2025-12-29-18-22-17.jpg)
ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ನೀಡಿದೆ. ಹೊಸ ವರ್ಷ ಆಚರಣೆ ಮಾಡುವ ಜನರ ಅನುಕೂಲಕ್ಕಾಗಿ ಮಧ್ಯರಾತ್ರಿಯವರೆಗೂ ಮೆಟ್ರೋ ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಇದರಿಂದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧೆಡೆ ಹೊಸ ವರ್ಷ ಆಚರಣೆ ಮಾಡುವವರು, ಮಧ್ಯರಾತ್ರಿಯೂ ತಮ್ಮ ಮನೆಗೇ ಸೇಫಾಗಿ ತಲುಪಲು ಸಾಧ್ಯ. ಯಾವ್ಯಾವ ಮಾರ್ಗಗಳಲ್ಲಿ ಮೆಟ್ರೋ ಸೇವೆಯ ಸಮಯ ವಿಸ್ತರಣೆಯಾಗಿದೆ ಎಂಬ ವಿವರ ಇಲ್ಲಿದೆ ಓದಿ.
ಹೊಸ ವರ್ಷದ ಸಂಭ್ರಮಕ್ಕೆ ಮೆಟ್ರೋ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.
31 ಡಿಸೆಂಬರ್ 2025 (ಮಂಗಳವಾರ) ರಾತ್ರಿ & 1 ಜನವರಿ 2026 (ಬುಧವಾರ) ಬೆಳಗ್ಗೆ ವಿಶೇಷ ವೇಳಾಪಟ್ಟಿ
ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯ ವಿಸ್ತರಣೆ
ಕೊನೆಯ ರೈಲು ಸಮಯ ವಿಸ್ತರಣೆ ಮಾಡಿದ ಬಿಎಂಆರ್ ಸಿಎಲ್
ನೇರಳೆ ಮಾರ್ಗ (Purple Line)
ಬೈಯಪ್ಪನಹಳ್ಳಿ → ಕೆಂಗೇರಿ ಕೊನೆಯ ರೈಲು : ರಾತ್ರಿ 1:45 ಗಂಟೆ
ಕೆಂಗೇರಿ → ಬೈಯಪ್ಪನಹಳ್ಳಿ ರೈಲು ರಾತ್ರಿ 2 ಗಂಟೆ
ಹಸಿರು ಮಾರ್ಗ (Green Line)
ಮೆಜೆಸ್ಟಿಕ್ → ನಾಗಸಂದ್ರ ಕೊನೆಯ ರೈಲು ರಾತ್ರಿ 2 ಗಂಟೆ
ನಾಗಸಂದ್ರ → ಮೆಜೇಸ್ಟಿಕ್ ಕೊನೆಯ ರೈಲು ರಾತ್ರಿ 2 ಗಂಟೆ
ಹಳದಿ ಮಾರ್ಗ (Yellow Line)
ಆರ್‌ವಿ ರಸ್ತೆ → ಬೊಮ್ಮಸಂದ್ರ ಕೊನೆಯ ರೈಲು ರಾತ್ರಿ 3:10 ಗಂಟೆ
ಬೊಮ್ಮಸಂದ್ರ → ಆರ್‌ವಿ ರಸ್ತೆ ಕೊನೆಯ ರೈಲು ರಾತ್ರಿ 1:30 ಗಂಟೆ
ಕೊನೆಯ ಮೆಟ್ರೋ ರೈಲುಗಳು ರಾತ್ರಿ 2:45ರ ತನಕ ಕಾರ್ಯಾಚರಣೆ
1 ಜನವರಿ 2026ರಂದು ಬೆಳಗ್ಗೆ 11:30ರವರೆಗೆ ವಿಶೇಷ ಸೇವೆ ಲಭ್ಯ
ಡಿಸೆಂಬರ್ 31ರಾತ್ರಿ ಎಂಜಿ ರೋಡ್ ಮೆಟ್ರೋ ನಿಲ್ದಾಣ ಬಂದ್
ರಾತ್ರಿ 10ಗಂಟೆಯಿಂದ ಎಂಟ್ರಿ ಅಂಡ್ ಎಕ್ಸಿಟ್ ಬಂದ್
ಹೆಚ್ಚಿನ ಜನ ಸೇರುವುದರಿಂದ ಎಂ.ಜಿ. ರಸ್ತೆ ಸ್ಟೇಷನ್ ಕ್ಲೋಸ್
ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ ಕಾರ್ಯನಿರ್ವಹಿಸುತ್ತದೆ
ಡಿಸೆಂಬರ್ 31ನೇ ತಾರೀಖು ರಾತ್ರಿ 11 ಗಂಟೆಯಿಂದ ಹಸಿರು ಮತ್ತು ನೇರಳೆ ಮಾರ್ಗದಲ್ಲಿ 8 ನಿಮಿಷದ ಅಂತರದಲ್ಲಿ ರೈಲು ಸಂಚಾರ
ಹಳದಿ ಮಾರ್ಗದಲ್ಲಿ 15 ನಿಮಿಷದ ಅಂತರದಲ್ಲಿ ರೈಲು ಸಂಚಾರ
ಮೆಜೆಸ್ಟಿಕ್ ನಲ್ಲಿ ಕೊನೆಯ ರೈಲು 2.45ಕ್ಕೆ ಇರಲಿದೆ
ಜನ ಹೆಚ್ಚು ಸೇರುವುದರಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಕೌಂಟರ್ ನಲ್ಲಿ ಟಿಕೆಟ್ ಸಿಗಲ್ಲ
ಈ ಸಮಯದಲ್ಲಿ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ ನಲ್ಲಿ ಕೌಂಟರ್ ಕ್ಲೋಸ್
ಕ್ಯೂ ಆರ್ ಕೋಡ್ ಬಳಸಿ ಪ್ರಯಾಣ ಮಾಡಬೇಕು.
/filters:format(webp)/newsfirstlive-kannada/media/post_attachments/wp-content/uploads/2025/02/Namma-Metro-fare-Hike.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us