/newsfirstlive-kannada/media/media_files/2025/10/28/tejaswi-surya-and-dk-shivakumar-2025-10-28-14-14-26.jpg)
ಬೆಂಗಳೂರು ನಗರದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ ಟನಲ್ ರಸ್ತೆ ನಿರ್ಮಾಣ ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ. ಹೆಬ್ಬಾಳ, ಮೇಖ್ರಿ ಸರ್ಕಲ್, ಬಸವೇಶ್ವರ್ ಸರ್ಕಲ್ ಹಾಗೂ ಲಾಲ್ ಬಾಗ್ ಬಳಿ ಟನಲ್( ಸುರಂಗ ರಸ್ತೆಯ) ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ನೀಡಬೇಕೆಂದು ಡಿಪಿಆರ್ ನಲ್ಲಿ ಪ್ಲ್ಯಾನ್ ಮಾಡಲಾಗಿದೆ. ಆದರೇ, ಈ ಸುರಂಗ ರಸ್ತೆ( ಟನಲ್ ರೋಡ್) ನಿರ್ಮಾಣ ಹಾಗೂ ಲಾಲ್ ಬಾಗ್ ನಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ನೀಡುವುದಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಲಾಲ್ ಬಾಗ್ ನಲ್ಲಿ ಆರು ಎಕರೆ ಜಾಗ ಅಲ್ಲ, ಆರು ಇಂಚು ಜಾಗವನ್ನೂ ಕೂಡ ಸುರಂಗ ರಸ್ತೆಗೆ ನಾವು ನೀಡಲ್ಲ. ಸುರಂಗ ರಸ್ತೆಯಿಂದ ಲಾಲ್ ಬಾಗ್ ಹಾಳಾಗುತ್ತೆ. ಅದಕ್ಕೆ ನಾವು ಅವಕಾಶ ಕೊಡಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಲಾಲ್ ಬಾಗ್ ಇರುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರವು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತೆ. ತೇಜಸ್ವಿ ಸೂರ್ಯ ಟನಲ್ ರಸ್ತೆಗೆ ವಿರೋಧದ ಬಳಿಕ ಡಿಸಿಎಂ ಡಿಕೆಶಿ ಹಾಗೂ ತೇಜಸ್ವಿ ಸೂರ್ಯ ನಡುವೆ ಟಾಕ್ ಫೈಟ್ ಕೂಡ ನಡೆದಿತ್ತು. ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆದಿದ್ದರು. ಬಳಿಕ ತೇಜಸ್ವಿ ಸೂರ್ಯ , ನೇರವಾಗಿ ಡಿಸಿಎಂ ಡಿಕೆಶಿ ಭೇಟಿಗೆ ಸಮಯಾವಕಾಶ ಕೋರಿದ್ದರು. ಇಂದು ಡಿಸಿಎಂ ಡಿಕೆಶಿ ಭೇಟಿಗೆ ತೇಜಸ್ವಿ ಸೂರ್ಯಗೆ ಸಮಯಾವಕಾಶ ನೀಡಿದ್ದರು.
ಇಂದು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಸಂಸದ ತೇಜಸ್ವಿ ಸೂರ್ಯ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಟನಲ್ ರಸ್ತೆ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ, ಸಂಸದ ತೇಜಸ್ವಿ ಸೂರ್ಯ ವಾದ ಮಾಡಿ ಮಾತುಕತೆ ನಡೆಸಿದ್ದಾರೆ. ಟನಲ್ ರಸ್ತೆಯ ಬದಲು ಬೇರೆ ಯಾವ ರೀತಿಯ ಕ್ರಮಗಳಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಬಹುದು ಎಂಬ ಬಗ್ಗೆ ತೇಜಸ್ವಿ ಸೂರ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ವಿವರಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/28/tejaswi-surya-and-dk-shivakumar02-2025-10-28-14-17-51.jpg)
ಡಿಸಿಎಂ ಶಿವಕುಮಾರ್ ಭೇಟಿಯ ಬಳಿಕ ಸಂಸದ ತೇಜಸ್ವಿ ಸೂರ್ಯ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಡಿ.ಕೆ. ಶಿವಕುಮಾರ್ ಅವರ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದೆ.
ಬೆಂಗಳೂರು ಟ್ರಾಫಿಕ್ , ಗುಂಡಿ ಸಮಸ್ಯೆ ಬಗ್ಗೆ ವಿಸ್ತೃತವಾದ ಚರ್ಚೆ ಆಯ್ತು. ಬಹಳ ಸೌಹಾರ್ದಯುತವಾಗಿ ಚರ್ಚೆ ಆಯಿತು. ಶಾಂತವಾಗಿ ನಾನು ಕೊಟ್ಟ ಪ್ರಸೆಂಟೇಶನ್ ಆಲಿಸಿದ್ರು. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ವಿಶೇಷವಾಗಿ ಟನಲ್ ರೋಡ್ ಕುರಿತು ಚರ್ಚೆ ಮಾಡಿದೆ. ಟ್ರಾಫಿಕ್ ಕಡಿಮೆ ಆಗಬೇಕು ಅಂದ್ರೆ ನಮ್ಮ ರಸ್ತೆಗಳಲ್ಲಿರುವ ವೆಹಿಕಲ್ ಗಳ ಸಂಖ್ಯೆ ಕಡಿಮೆಯಾಗಬೇಕು. ಶೇ.70 ರಷ್ಟು ಜನ ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವಂತೆ ಮಾಡಬೇಕು. 300 ಕಿ.ಮೀ ಮೆಟ್ರೋ ಸಂಪರ್ಕ ಮಾಡಿಕೊಡಬೇಕು. 3 ನಿಮಿಷಕ್ಕೊಂದು ಮೆಟ್ರೋ ಸಿಗುವಂತೆ ಮಾಡಬೇಕು. ಜನ ಇರುವ ಜಾಗದಿಂದ 5 ನಿಮಿಷ ನಡೆದುಕೊಂಡು ಹೋದರೇ ಮೆಟ್ರೋ ಸ್ಟೇಷನ್ ಸಿಗಬೇಕು. ಮಾಸ್ಟರ್ ಪ್ಲ್ಯಾನ್ ನಲ್ಲಿರುವಂತೆ 300 ಕಿ.ಮೀ ಸಬ್ ಅರ್ಬನ್ ರೈಲು ಕೂಡ ಬೆಂಗಳೂರಿಗೆ ಅವಶ್ಯಕತೆ ಇದೆ . ಸಬ್ ಅರ್ಬನ್ ರೈಲು ಮತ್ತು ಮೆಟ್ರೋ ಎರಡು ಕಂಪ್ಲೀಟ್ ಆದ್ರೆ 600 ಕಿ.ಮೀ ಸಾರ್ವಜನಿಕ ಸಾರಿಗೆ ಸಿಗುತ್ತೆ. ಇದರಿಂದ ಟ್ರಾಫಿಕ್ ಕಡಿಮೆ ಆಗುತ್ತೆ ಅನ್ನೋ ಸಲಹೆ ಕೊಟ್ಟಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us