Advertisment

ಜಸ್ಟ್ ಕಾಲು ಟಚ್ ಆಗಿದ್ಕೆ ಚಾಕು ಇರಿದು ಮುಗಿಸಿಯೇ ಬಿಟ್ಟರು..!

ಕಾಲು ಟಚ್ ಆದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

author-image
Ganesh Kerekuli
bengaluru murder case
Advertisment
  • ಕಾಲು ಟಚ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
  • ಇಬ್ಬರು ಆರೋಪಿಗಳನ್ನ ಬಂಧಿಸಿದ ಪೊಲೀಸರು
  • ಮಾತು ಮಾತಿಗೆ ಬೆಳೆದ ಜಗಳ..ಸೇಡು ತೀರಿಸಿಕೊಂಡ ಮಂಜುನಾಥ

ಬೆಂಗಳೂರು: ಕಾಲು ಟಚ್ ಆದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಮತ್ತು ಭಾಗ್ಯರಾಜ್ ಬಂಧಿತ ಆರೋಪಿಗಳು. ಶಶಿಕುಮಾರ್ ಕೊ*ಯಾದ ದುರ್ದೈವಿ. 

Advertisment

ಏನಿದು ಪ್ರಕರಣ..? 

ಕಳೆದ ಮಾರ್ಚ್ 2 ರಾತ್ರಿ ಶಿವನಹಳ್ಳಿ ಪ್ರದೇಶದ ಗುರುರಾಘವೇಂದ್ರ ಹೋಟೆಲ್ ಬಳಿ ಕಾಲು ಟಚ್ ಆದ ವಿಚಾರಕ್ಕೆ ಶಶಿಕುಮಾರ್ ಹಾಗೂ ಮಂಜುನಾಥ್ ನಡುವೆ ವಾಗ್ವಾದ ಶುರುವಾಗಿದೆ. ಮಾತು ಮಾತಿಗೆ ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ.
ಆಗ ಶಶಿಕುಮಾರ್ ಮೇಲೆ ಸೇಡು ತೀರಿಸಿಕೊಳ್ಳಲು ಮಂಜುನಾಥ್ ತನ್ನ ಸಹೋದರ ಭಾಗ್ಯರಾಜ್​​ಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಈ ವೇಳೆ ಮತ್ತೆ ಶಶಿಕುಮಾರ್​ ಜೊತೆ ಇಬ್ಬರು ಕಿರಿಕ್ ಮಾಡಿದ್ದಾರೆ. ರೊಚ್ಚಿಗೆದ್ದ ಭಾಗ್ಯರಾಜ್ ಏಕಾಏಕಿ ಶಶಿಕುಮಾರ್ ಅವರ ಕತ್ತಿಗೆ ಚಾಕು ಇರಿದು ಹ*ತ್ಯೆ ಮಾಡಿದ್ದಾನೆ. 

ಇದನ್ನೂ ಓದಿ :ಇಂದಿರಾ ಆಹಾರ ಕಿಟ್‌ ವಿತರಣೆಗೆ 6,200 ಕೋಟಿ ರೂ. ನೀಡಿಕೆ : ತೊಗರಿ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆಯ ಕಿಟ್‌ ನೀಡಿಕೆಯ ಘೋಷಣೆ

ಬರ್ಬರವಾಗಿ ಹ*ತ್ಯೆ ಮಾಡಿದ ಬಳಿಕ ಇಬ್ಬರು ಅಲ್ಲಿಂದ ಪರಾರಿಯಾಗಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಪೊಲೀಸ್ ಠಾಣಾ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

friends dispute murder in bengaluru BANGALORE MURDER CASE Bengaluru Crime Bengaluru case
Advertisment
Advertisment
Advertisment