ಮುಂದಿನ ತಿಂಗಳು ಮತ್ತೆ ನಮ್ಮ ಮೆಟ್ರೋ ದರ ಏರಿಕೆ ಸಾಧ್ಯತೆ! ಶೇ.5 ರಷ್ಟು ದರ ಏರಿಕೆ ಸಾಧ್ಯತೆ

ಬೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋ ಮುಂದಿನ ತಿಂಗಳು ಮತ್ತೊಮ್ಮೆ ದರ ಏರಿಕೆ ಮಾಡಲಿದೆ. ಈ ವರ್ಷ ಶೇ..5 ರಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲೇ ಶೇ.70 ರಷ್ಟು ಟಿಕೆಟ್ ದರವನ್ನು ಬಿಎಂಆರ್‌ಸಿಎಲ್ ಏರಿಸಿತ್ತು. ಈಗ ಮತ್ತೊಮ್ಮೆ ದರ ಏರಿಕೆಗೆ ಸಜ್ಜಾಗಿದೆ.

author-image
Chandramohan
ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ; ಪ್ರಯಾಣಿಕರ ಜೇಬಿಗೆ ಬೀಳಲಿದೆ ಭಾರೀ ಕತ್ತರಿ
Advertisment


ಫೆಬ್ರವರಿಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ಶಾಕ್ ನೀಡುವುದು ಶತಃಸಿದ್ದ.  ನಮ್ಮ ಮೆಟ್ರೋ ದರ ಮತ್ತೊಮ್ಮೆ ಏರಿಕೆ ಮಾಡಲಾಗುತ್ತಿದೆ.   ನಮ್ಮ ಮೆಟ್ರೋ ದರ ಏರಿಕೆ ಬಿಎಂಆರ್‌ಸಿಎಲ್‌ ಪ್ಲಾನ್ ಮಾಡಿದೆ. ವರ್ಷದ ಬಳಿಕ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ಫೆಬ್ರವರಿಗೆ ನಮ್ಮ ಮೆಟ್ರೋ ದರ ಏರಿಕೆ ಸಾಧ್ಯತೆ  ಇದೆ.  ಪ್ರತಿ ವರ್ಷ ದರ ಏರಿಕೆ ಮಾಡಬೇಕು ಎಂದು FFC (FARE FIXINGS Committee)ಸಲಹೆ ಕೊಟ್ಟಿದೆ.   ಪ್ರತಿ ವರ್ಷ ಗರಿಷ್ಠ ಶೇ.5ರಷ್ಟು ದರ  ಹೆಚ್ಚಿಸಲು ಫೇರ್​​ ಫಿಕ್ಸೇಶನ್​​ ಕಮಿಟಿ (FFC) ಶಿಫಾರಸ್ಸು ಮಾಡಿದೆ.   ಕಳೆದ ಸಲ ಫೆಬ್ರವರಿಯಲ್ಲಿ  ಬಿಎಂಆರ್‌ಸಿಎಲ್‌ ದರ ಏರಿಕೆ ಮಾಡಿತ್ತು. 
ದರ ಏರಿಕೆ ಮಾಡಿ,  ವರ್ಷ ಪೂರೈಸಿದ ಹಿನ್ನೆಲೆಯಲ್ಲಿ  ಮತ್ತೆ ಫೆಬ್ರವರಿಗೆ ದರ ಏರಿಕೆ ಲೆಕ್ಕಾಚಾರ ಹಾಕಿದೆ. ಆದರೆ ಈ ವರ್ಷ ಫ್ರೆಬ್ರವರಿಗೆ ಎಷ್ಟು ಪರ್ಸೆಂಟ್ ದರ ಏರಿಕೆ ಆಗುತ್ತೆ ಎಂಬುದು ಪ್ರಶ್ನೆಯಾಗಿದೆ.  ನಿಯಮಾನುಸಾರ ಕಾಯ್ದೆಯ ಪ್ರಕಾರ ದರ ಏರಿಕೆ ಪ್ರಸ್ತಾವನೆಯನ್ನು ನಮ್ಮ ಮೆಟ್ರೋ, ಕೇಂದ್ರ- ರಾಜ್ಯ ಸರ್ಕಾರಗಳಿಗೆ ಸಲ್ಲಿಕೆ ಮಾಡುತ್ತೆ.   2025 ರಲ್ಲಿ 71% ದರ ಏರಿಕೆ ಮಾಡಿ ಪ್ರಯಾಣಿಕರ ಕೆಂಗಣ್ಣಿಗೆ ಬಿಎಂಆರ್‌ಸಿಎಲ್ ಗುರಿಯಾಗಿತ್ತು.   ಈಗ ಮತ್ತೆ ಫೆಬ್ರವರಿಗೆ ದರ ಏರಿಕೆ ಆಗುವ ಸಾಧ್ಯತೆ ಇದೆ.

ಅಬ್ಬಾ! ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ ಗ್ರೌಂಡ್ ಫ್ಲೋರ್‌ನಿಂದ ಫಸ್ಟ್ ಫ್ಲೋರ್‌ವರೆಗೂ ಕ್ಯೂ; ಕಾರಣವೇನು?



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Namma metro PINK LANE METRO
Advertisment