Advertisment

ಹೆಬ್ಬಾಳ ಮೇಲ್ಸೇತುವೆ ಹೊಸ ಲೂಪ್ ಕಾಮಗಾರಿ 15 ದಿನದಲ್ಲಿ ಪೂರ್ಣಕ್ಕೆ ಡೆಡ್ ಲೈನ್ : ಹೊಸ ಮೇಲ್ಸೇತುವೆ ನಿರ್ಮಾಣಕ್ಕೂ ಪ್ಲ್ಯಾನ್‌!

ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಲ್ಲಿ ಎಸ್ಟೀಮ್ ಮಾಲ್ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ದಾಟಲು ಮತ್ತೊಂದು ಲೂಪ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾಮಗಾರಿಯನ್ನು ಮುಂದಿನ 15 ದಿನದಲ್ಲಿ ಪೂರ್ಣಗೊಳಿಸಲು ಜಿಬಿಎ ಸೂಚನೆ ನೀಡಿದೆ. ಜೊತೆಗೆ ಹೊಸ ಮೇಲ್ಸೇತುವೆ ನಿರ್ಮಿಸುವ ಪ್ಲ್ಯಾನ್ ಕೂಡ ಇದೆ.

author-image
Chandramohan
New loop road at Hebbal flyover

ಎಸ್ಟೀಮ್ ಮಾಲ್ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೊಸ ಲೂಪ್ ರಸ್ತೆ ನಿರ್ಮಾಣ

Advertisment
  • ಎಸ್ಟೀಮ್ ಮಾಲ್ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೊಸ ಲೂಪ್ ರಸ್ತೆ ನಿರ್ಮಾಣ
  • ಲೂಪ್ ರಸ್ತೆ ನಿರ್ಮಾಣದಲ್ಲಿ ಗರ್ಡರ್ ಅಳವಡಿಕೆ ಮಾತ್ರ ಬಾಕಿ
  • ಎಸ್ಟೀಮ್ ಮಾಲ್ ನಿಂದ ಮಾನ್ಯತಾ ಟೆಕ್ ಪಾರ್ಕ್‌ ಕಡೆಗೆ ಹೊಸ ಪ್ಲೈಓವರ್ ನಿರ್ಮಾಣ

ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಿಂದ ಬೆಂಗಳೂರು ಸಿಟಿ ಪ್ರವೇಶಿಸುವವರಿಗೆ ಗುಡ್ ನ್ಯೂಸ್‌.  ಏರ್ ಪೋರ್ಟ್ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಮೂಲಕ ನಗರ ಪ್ರವೇಶಿಸುವವರಿಗೆ ಅನುಕೂಲಕ್ಕಾಗಿ ಮತ್ತೊಂದು ಲೂಪ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದನ್ನು ಇನ್ನೂ 15 ದಿನಗಳೊಳಗೆ ಕಾಮಗಾರಹಿ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ  ಆಯುಕ್ತ ಮಹೇಶ್ವರ್ ರಾವ್ ಸೂಚನೆ ನೀಡಿದ್ದಾರೆ. 
ಇದರಿಂದಾಗಿ ಏರ್ ಪೋರ್ಟ್, ಯಲಹಂಕ ಕಡೆಯಿಂದ ಬರುವವರು ಬೇಗನೇ ಹೆಬ್ಬಾಳ ಮೇಲ್ಸೇತುವೆ ದಾಟಿಕೊಂಡು ಮೇಖ್ರಿ ಸರ್ಕಲ್ ಮೂಲಕ ಬೆಂಗಳೂರು ಸಿಟಿ ಪ್ರವೇಶಿಸಬಹುದು.  ಶೀಘ್ರದಲ್ಲೇ ಹೆಬ್ಬಾಳ ಸುತ್ತಮುತ್ತಲಿನ ರಸ್ತೆಗಳು ಟ್ರಾಫಿಕ್  ಜಾಮ್  ಮುಕ್ತ ಆಗಲಿವೆ.  ಹೆಬ್ಬಾಳದಲ್ಲಿ ಇನ್ಮೇಲೆ ಹೆಚ್ಚಿನ ಸಂಚಾರ ದಟ್ಟಣೆ ಇರಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೇ, ಇದು ಎಷ್ಟರ ಮಟ್ಟಿಗೆ ನಿಜವಾಗುತ್ತೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. 
 ಈಗಾಗಲೇ ಕೆ.ಆರ್ ಪುರಂ ರಸ್ತೆಯಿಂದ ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ಸರ್ಕಲ್ ಕಡೆಗೆ  ತೆರಳುವ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗಿ ಉದ್ಘಾಟನೆಯಾಗಿದೆ.  ಇದೀಗ ಎಸ್ಟೀಮ್​​ ಮಾಲ್​ ನಿಂದ ಮೇಕ್ರಿ ಸರ್ಕಲ್​​, ವಿಧಾನಸೌಧ ಕಡೆಗೆ ಸರ್ವೀಸ್ ರಸ್ತೆಯಲ್ಲಿ ತೆರಳಲು ವಾಹನ ಸವಾರರಿಗೆ, ಕಾರ್ ಚಾಲಕರಿಗೆ, ಬಸ್ ಚಾಲಕರಿಗೆ  ನೂತನ ಲೂಪ್ ಕಾಮಗಾರಿ ಪೂರ್ಣಗೊಂಡರೇ ಸಾಕಷ್ಟು ಅನುಕೂಲವಾಗಲಿದೆ. ಹೊಸ ಲೂಪ್ ನಲ್ಲಿ ಎರಡು ಗರ್ಡರ್ ಅಳವಡಿಸುವ ಕಾರ್ಯ ಬಾಕಿ ಇದೆ.  ಮುಂದಿನ  15 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯ ಆಯುಕ್ತ ಮಹೇಶ್ವರ ರಾವ್​ ಸೂಚನೆ ನೀಡಿದ್ದಾರೆ.  ಬಿಡಿಎ ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ನೀಡಿದ್ದಾರೆ. 

Advertisment

New loop road at Hebbal flyover02



ಹೊಸ ಮೇಲ್ಸೇತುವೆಗೆ ಯೋಜನೆ..!
- ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್‌ನಿಂದ ಮಾನ್ಯತಾ ಟೆಕ್ ಪಾರ್ಕ್‌ವರೆಗೆ ಹೊಸ ಫ್ಲೈಓವರ್​​
- 1.4 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಪ್ಲಾನ್​​
- ಹೆಬ್ಬಾಳ ಸುತ್ತಮುತ್ತಲೂ ಝೀರೋ ಟ್ರಾಫಿಕ್​​ ಮಾಡುವ ಉದ್ದೇಶ
- ಹೊಸ ಫ್ಲೈಓವರ್​​​ ನಿರ್ಮಾಣ ಸಂಬಂಧ ಬಿಡಿಎ ಮತ್ತು ಜಿಬಿಎ ಅಧಿಕಾರಿಗಳು ಚರ್ಚೆ 
- ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚೆ ನಡೆಸ್ತಿರುವ ಬಿಡಿಎ
-  ಬಿಡಿಎಯಿಂದ ಕೈಗೆತ್ತಿಕೊಳ್ಳಲಾಗ್ತಿರುವ 1.4 ಕಿ.ಮೀ ಉದ್ದದ ಹೊಸ ಫ್ಲೈಒವರ್​​ 
- ಶೀಘ್ರ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ತಿರುವ ಬಿಡಿಎ

ಇನ್ನೂ ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್ ನಿಂದ ಮಾನ್ಯತಾ ಟೆಕ್ ಪಾರ್ಕ್ ವರೆಗೂ ಹೊಸ ಮೇಲ್ಸೇತುವೆ ನಿರ್ಮಿಸುವ ಪ್ಲ್ಯಾನ್ ಅನ್ನು ಕೂಡ ಬಿಡಿಎ ಮತ್ತು ಜಿಬಿಎ ರೂಪಿಸಿವೆ . ಬಿಡಿಎ 1.4 ಕಿ.ಮೀ. ಉದ್ದದ ಹೊಸ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಿದೆ. ಇದರಿಂದಾಗಿ ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತಲೂ ಜೀರೋ ಟ್ರಾಫಿಕ್ ಮಾಡುವ ಉದ್ದೇಶ ಕೂಡ ಇದೆ. ಹೆಬ್ಬಾಳ ಮೇಲ್ಸೇತುವೆಯೇ ಬೆಂಗಳೂರಿನ ಅತಿ ದೊಡ್ಡ ಟ್ರಾಫಿಕ್ ಜಾಮ್ ಸ್ಥಳವಾಗಿಬಿಟ್ಟಿತ್ತು. ಈ ಟ್ರಾಫಿಕ್ ಜಾಮ್ ಸ್ಥಳವನ್ನೇ ಟ್ರಾಫಿಕ್ ಜಾಮ್ ಮುಕ್ತವನ್ನಾಗಿ ಮಾಡಲು ಜಿಬಿಎ  ಮತ್ತು ಬಿಡಿಎ ಪ್ಲ್ಯಾನ್ ರೂಪಿಸಿ ಹೊಸ ಹೊಸಲೂಪ್ ರಸ್ತೆ ಮತ್ತು ಮೇಲ್ಸೇತುವೆ ನಿರ್ಮಿಸುತ್ತಿವೆ.  ಇದು ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ. 

New loop road at Hebbal flyover03



HEBBALA FLYOVER NEW LOOP ROAD CONSTRUCTION
Advertisment
Advertisment
Advertisment