/newsfirstlive-kannada/media/media_files/2025/10/25/cylinder-death-2-2025-10-25-12-55-10.jpg)
ಬೆಂಗಳೂರು:ಬೆಂಗಳೂರಿನ ಕೆ.ಆರ್ ಪುರಂ ವ್ಯಾಪ್ತಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ವೃದ್ಧೆಯೊಬ್ಬರು ಪ್ರಾಣ ಬಿಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.
ಕೆ.ಆರ್ ಪುರಂನಲ್ಲಿ ಇಂದು ಬೆಳಗ್ಗೆ 7:15 ರ ಸುಮಾರಿಗೆ ನಡೆದ ದುರ್ಘಟನೆಯಲ್ಲಿ ವೃದ್ಧೆ ಅಕ್ಕಯ್ಯಮ್ಮ (80) ಸಾವನ್ನಪ್ಪಿದ್ದು, ಮನೆ ಸಂಪೂರ್ಣ ಛಿದ್ರವಾಗಿದೆ. ಸ್ಪೋಟದ ತೀವ್ರತಗೆ ಹಿಂದಿನ ಮನೆಯ ಮಹಿಳೆಗೂ ಗಾಯಗಳಾಗಿದ್ದು, ಅಕ್ಕ-ಪಕ್ಕದ ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಈ ದುರಂತದಿಂದಾಗಿ ಚಂದನಾ (22), ಶೇಖರ್ (52) ಹಾಗೂ ಕಿರಣ್ ಕುಮಾರ್ (25) ಸ್ಥಿತಿ ಗಂಭೀರವಾಗಿದ್ದು, ಅಸ್ಪತ್ರೆಗೆ ದಾಖಲಿಸಿಲಾಗಿದೆ.
/filters:format(webp)/newsfirstlive-kannada/media/media_files/2025/10/25/cylinder-death-3-2025-10-25-12-55-44.jpg)
ಇನ್ನೂ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವೃದ್ಧೆಯ ಶವವನ್ನು ಅಗ್ನಿ ಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೈಟ್​ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಇಂದು ಬೆಳಗ್ಗೆ ನಡೆದ ಘಟನೆಯಲ್ಲಿ ಅಕ್ಕಯಮ್ಮ ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಇನ್ನುಳಿದ ಮೂವರಿಗೂ ಗಾಯಗಳಾಗಿದ್ದು, ಮನೆ ಸಂಪೂರ್ಣ ಜಖಂ ಆಗಿದೆ. ಮೇಲ್ನೋಟಕ್ಕೆ ಸಿಲಿಂಡರ್ ಬ್ಲಾಸ್ಟ್​ನಂತೆ ಕಂಡುಬರುತ್ತಿದೆ. ತಜ್ಞರ ಮಾಹಿತಿ ಬಳಿಕ ಸ್ಪಷ್ಟ ಮಾಹಿತಿ ದೊರೆಯುತ್ತದೆ ಎಂದು ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us