/newsfirstlive-kannada/media/media_files/2025/11/19/banagalore-2nd-airport-2025-11-19-12-35-34.jpg)
ಬೆಂಗಳೂರಿನ 2ನೇ ಏರ್ ಪೋರ್ಟ್ ಗೆ ಬಿಐಎಎಲ್ ಅನುಮತಿ ಸುಲಭ
ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮೇಲಿನ ಒತ್ತಡ ಕಡಿಮೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ಸಮೀಪದಲ್ಲೇ ಮತ್ತೊಂದು ಏರ್ ಪೋರ್ಟ್ ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಮತ್ತೊಂದೆಡೆ ಪಕ್ಕದ ತಮಿಳುನಾಡು ರಾಜ್ಯ ಸರ್ಕಾರವು ಕೂಡ ಕರ್ನಾಟಕದ ಬೆಂಗಳೂರಿನ ಗಡಿಗೆ ಹೊಂದಿಕೊಂಡಂತೆ ಇರುವ ಹೊಸೂರಿನಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಲು ಹೊರಟಿದೆ. ಆದರೇ, ಈ ಏರ್ ಪೋರ್ಟ್ ನಿರ್ಮಾಣ ಮಾಡಲು 2033ರೊಳಗೆ ನಿರ್ಮಾಣ ಮಾಡುವುದಾದರೇ, ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ನಿಂದ ಒಪ್ಪಿಗೆ ಪಡೆಯಲೇಬೇಕು. 2033 ರವರೆಗೂ ಕೆಂಪೇಗೌಡ ಇಂಟರ್ ನ್ಯಾಷನ್ ಏರ್ ಪೋರ್ಟ್ ನ 150 ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಯಾವುದೇ ಏರ್ ಪೋರ್ಟ್ ಆರಂಭಿಸಲ್ಲ ಎಂದು ಬಿಐಎಎಲ್ ಜೊತೆಗೆ ಕೇಂದ್ರ ಸರ್ಕಾರ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಬೆಂಗಳೂರು ಏರ್ ಪೋರ್ಟ್ ನಿಂದ 150 ಕಿ.ಮೀ. ಒಳಗೆ ಹೊಸ ಏರ್ ಪೋರ್ಟ್ ಆರಂಭಿಸಲು ಬಿಐಎಎಲ್ ಒಪ್ಪಿಗೆ ಬೇಕೇ ಬೇಕು.
ಇನ್ನೂ ಈಗ ಬಂದಿರುವ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರವು ಉದ್ದೇಶಿತ ತಮಿಳುನಾಡಿನ ಹೊಸೂರು ಏರ್ ಪೋರ್ಟ್ ಅನ್ನು ಉಡಾನ್ ಯೋಜನೆಯಡಿ ಸಂಪರ್ಕಿಸುವ ಏರ್ ಪೋರ್ಟ್ ಗಳ ಪಟ್ಟಿಯಿಂದ ತೆಗೆದು ಹಾಕಿದೆ. ಆದರೇ, ತಮಿಳುನಾಡು ಸರ್ಕಾರವು ಹೊಸೂರು ಏರ್ ಪೋರ್ಟ್ ಗೆ ಉಡಾನ್ ಯೋಜನೆಯಡಿ ಹಣ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳುತ್ತಿಲ್ಲ ಎಂದು ಹೇಳಿದೆ. ಹೊಸೂರು ಸಿಟಿಯಿಂದ ಪೂರ್ವಭಾಗಕ್ಕೆ 2,300 ಎಕರೆ ಭೂ ಪ್ರದೇಶದ ಸೂಲಗಿರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ಲ್ಯಾನ್ ಅನ್ನು ತಮಿಳುನಾಡು ಸರ್ಕಾರ ಹಾಕಿಕೊಂಡಿದೆ. ಹೀಗಾಗಿ ಹೊಸೂರು ಏರ್ ಪೋರ್ಟ್ ಅನ್ನು 2033 ರೊಳಗೆ ನಿರ್ಮಿಸಲು ಸಾಧ್ಯವಿಲ್ಲ. ಹೊಸೂರು ಏರ್ ಪೋರ್ಟ್ ಉದ್ದೇಶಿತ ಸ್ಥಳ ಕೂಡ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಿಂದ 150 ಕಿ.ಮೀ. ವ್ಯಾಪ್ತಿಯೊಳಗಡೆಯೇ ಇದೆ. ಒಂದು ವೇಳೆ ತಮಿಳುನಾಡು ಸರ್ಕಾರವು ಹೊಸೂರು ಏರ್ ಪೋರ್ಟ್ ಅನ್ನು ಖಾಸಗಿ ಡೆವಲಪರ್ ಗಳ ಬಂಡವಾಳದಿಂದ ನಿರ್ಮಾಣ ಮಾಡಿದರೂ, ಅದು ಕಾರ್ಯಾರಂಭ ಮಾಡುವುದು 2038-40 ರ ವೇಳೆಗೆ ಸಾಧ್ಯವಾಗಬಹುದು.
/filters:format(webp)/newsfirstlive-kannada/media/media_files/2025/12/13/bangalore-2nd-airport-by-ksiidc-2025-12-13-16-23-47.jpg)
ಬೇಗನೇ ಹೊಸೂರು ಏರ್ ಪೋರ್ಟ್ ನಿರ್ಮಾಣ ಮಾಡಿ ಕಾರ್ಯಾರಂಭ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಆದರೇ, ಬೆಂಗಳೂರಿನ 2 ನೇ ಏರ್ ಪೋರ್ಟ್ ನ ಪರಿಸ್ಥಿತಿ ಈ ರೀತಿ ಇಲ್ಲ. ಏಕೆಂದರೇ, ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ನಲ್ಲಿ ಬಂಡವಾಳ ಹೂಡಿದ್ದು ಪಾಲುದಾರನಾಗಿದೆ. ಖಾಸಗಿ ಕಂಪನಿಯ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರವು ಶೇ. 13 ರಷ್ಟು ಬಂಡವಾಳ ಹೂಡಿದ್ದು ಪಾಲುದಾರನಾಗಿದೆ. ಫೈರ್ ಪಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಶೇ.64 ರಷ್ಟು ಬಂಡವಾಳ ಹೂಡಿದ್ದರೇ, ಸೀಮನ್ಸ್ ಪ್ರಾಜೆಕ್ಟ್ ವೆಂಚರ್ಸ್ ಶೇ.10 ರಷ್ಟು ಬಂಡವಾಳ ಹೂಡಿಕೆ ಮಾಡಿದೆ. ಇನ್ನೂ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಶೇ.13 ರಷ್ಟು ಬಂಡವಾಳ ಹೂಡಿದೆ.
ಕರ್ನಾಟಕ ರಾಜ್ಯ ಸರ್ಕಾರದಡಿ ಇರುವ ಕರ್ನಾಟಕ ಸ್ಟೇಟ್ ಇಂಡಸ್ಟ್ರೀಯಲ್ ಅಂಡ್ ಇನ್ ಪ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಕಾರ್ಪೋರೇಷನ್ ಶೇ.13 ರಷ್ಟು ಷೇರು ಬಂಡವಾಳ ಹೂಡಿದೆ. ಬಿಐಎಎಲ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಪಾಲುದಾರನಾಗಿದೆ. ನೀತಿ, ತೀರ್ಮಾನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅಭಿಪ್ರಾಯವೂ ಮುಖ್ಯವಾಗುತ್ತೆ.
ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬಿಐಎಎಲ್ ನಿಂದ ಅನುಮತಿ ಪಡೆಯುವುದು ಕಷ್ಟವಾಗಲ್ಲ. ಆದರೇ, ಹೊಸೂರು ಏರ್ ಪೋರ್ಟ್ ಗೆ ಬಿಐಎಎಲ್ ನಿಂದ ಅನುಮತಿ ಸಿಗದಂತೆ ನೋಡಿಕೊಳ್ಳುವ ಕೆಲಸವನ್ನು ಬಿಐಎಎಲ್ ನ ಪಾಲುದಾರನಾಗಿ ಕರ್ನಾಟಕ ರಾಜ್ಯ ಸರ್ಕಾರವು ಮಾಡಬಹುದು. ಹೀಗಾಗಿ ಹೊಸೂರು ಏರ್ ಪೋರ್ಟ್ ಕಾರ್ಯರೂಪಕ್ಕೆ ಬೇಗ ಬರೋದು ಕಷ್ಟ. ಆದರೇ, ಬೆಂಗಳೂರಿನ 2ನೇ ಏರ್ ಪೋರ್ಟ್ ಗೆ ಅನುಮತಿ ಪಡೆಯುವುದು ಸುಲಭ.
ಬೆಂಗಳೂರು ಏರ್ ಪೋರ್ಟ್ ಈಗಾಗಲೇ ದೇಶದಲ್ಲಿ 2ನೇ ಅತಿ ಹೆಚ್ಚಿನ ಪ್ರಯಾಣಿಕರನ್ನು ನಿಭಾಯಿಸುತ್ತಿರುವ ಏರ್ ಪೋರ್ಟ್ ಆಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಮುಂಬೈನ ಏರ್ ಪೋರ್ಟ್ ಅನ್ನು ಹಿಂದಿಕ್ಕಿದೆ.
ಹೀಗಾಗಿ ಹೊಸೂರು ಬಳಿ ಹೊಸ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿರ್ಮಾಣವಾಗುತ್ತೆ ಎಂಬ ತಮಿಳುನಾಡು ರಾಜ್ಯ ಸರ್ಕಾರದ ಮಾತು ನಂಬಿ ಸೈಟ್, ಮನೆ, ಪ್ಲ್ಯಾಟ್, ವಿಲ್ಲಾ ಮೇಲೆ ಹಣ ಹೂಡಿಕೆ ಮಾಡಿದರೇ, ಬೆಳವಣಿಗೆ ಆಗಲು 2040 ರವರೆಗೂ ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಹೊಸೂರು, ಬೆಂಗಳೂರಿನ ಸರ್ಜಾಪುರ, ಅತ್ತಿಬೆಲೆ ಭಾಗದಲ್ಲಿ ಏರ್ ಪೋರ್ಟ್ ಕಾರಣಕ್ಕಾಗಿ ಸೈಟ್, ಮನೆ, ವಿಲ್ಲಾ ಬೆಲೆ ಏರಿಕೆಯಾಗಲ್ಲ.
ಬೆಂಗಳೂರಿನ ಜನರು, ಕರ್ನಾಟಕದ ಜನರು ಬೆಂಗಳೂರಿನ 2ನೇ ಏರ್ ಪೋರ್ಟ್ ಸ್ಥಳದ ಆಯ್ಕೆ ಅಂತಿಮವಾದ ಬಳಿಕ ಆ ಸ್ಥಳದ ಸುತ್ತಮುತ್ತ ಸೈಟ್, ಮನೆ, ವಿಲ್ಲಾ, ಪ್ಲ್ಯಾಟ್ ಮೇಲೆ ಹೂಡಿಕೆ ಮಾಡುವುದು ಒಳ್ಳೆಯದು. ಸದ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ 2ನೇ ಏರ್ ಪೋರ್ಟ್ ಅನ್ನು ಕನಕಪುರ ರಸ್ತೆಯ ಸೋಮನಹಳ್ಳಿ ಅಥವಾ ಚೂಡನಹಳ್ಳಿ ಬಳಿ ನಿರ್ಮಿಸುವುದಕ್ಕೆ ಒಲವು ತೋರಿದ್ದಾರೆ. ಆದರೇ, ಅಂತಿಮವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 2ನೇ ಏರ್ ಪೋರ್ಟ್ ಸ್ಥಳವನ್ನು ಅಂತಿಮಗೊಳಿಸಬೇಕಾಗಿದೆ. ಜೊತೆಗೆ ಏರ್ ಪೋರ್ಟ್ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಬಂಡವಾಳ ಬೇಕಾಗುತ್ತೆ. ಯಾವುದಾದರೂ ಖಾಸಗಿ ಕಂಪನಿಗಳು ಬಂಡವಾಳ ಹೂಡಿದರೇ, ರಾಜ್ಯ ಸರಕಾರದ ಮೇಲಿನ ಬಂಡವಾಳದ ಹೊರೆ ಕಡಿಮೆಯಾಗುತ್ತೆ.
/filters:format(webp)/newsfirstlive-kannada/media/media_files/2025/12/02/bangalore-airport-pick-up-and-drop-point02-2025-12-02-15-33-09.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us