ಸಿ.ಜೆ.ರಾಯ್ ಚೇಂಬರ್ ನಲ್ಲಿ ರಾಶಿಗಟ್ಟಲೇ ಪೇಪರ್ : ರಾಯ್ ಕೈ ಬರಹದ ಪೇಪರ್ ಗಳಲ್ಲಿದೆ ಆತ್ಮಹತ್ಯೆ ರಹಸ್ಯ!!

ಕಳೆದ ವಾರ ಆತ್ಮಹತ್ಯೆಗೆ ಶರಣಾದ ಸಿ.ಜೆ.ರಾಯ್ ಕಚೇರಿಯ ಚೇಂಬರ್ ನಲ್ಲಿ ರಾಶಿಗಟ್ಟಲೇ ಪೇಪರ್ ಗಳು ಪೊಲೀಸರಿಗೆ ಸಿಕ್ಕಿವೆ. ರಾಯ್ ಅವರಿಗೆ ಪೇಪರ್ ನಲ್ಲಿ ಬರೆದಿಡುವ ಅಭ್ಯಾಸ ಇತ್ತಂತೆ. ಹೀಗಾಗಿ ಈ ಪೇಪರ್ ಗಳಿಂದಾನೇ ರಾಯ್ ಆತ್ಮಹತ್ಯೆಯ ರಹಸ್ಯ ಬಯಲಾಗುವ ವಿಶ್ವಾಸ ಪೊಲೀಸರಿಗೆ ಇದೆ.

author-image
Chandramohan
cj roy
Advertisment

ರಿಯಲ್ ಎಸ್ಟೇಟ್  ಉದ್ಯಮಿ ಹಾಗೂ ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ. ರಾಯ್ ಕಾಲ್ ಸಿಡಿಆರ್ ರಿಪೋರ್ಟ್ ಪೊಲೀಸರ ಕೈಗೆ ಸೇರಿದೆ. ಆದರೇ, ಸಿಡಿಆರ್‌ ರಿಪೋರ್ಟ್ ನಿಂದ ಆತ್ಮಹತ್ಯೆಯ ರಹಸ್ಯ ಬಹಿರಂಗವಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ನಿರಾಶೆಯಾಗಿದೆ. ಏಕೆಂದರೇ, ಸಿ.ಜೆ.ರಾಯ್ ಯಾರೊಂದಿಗೆ ಹೆಚ್ಚಾಗಿ ಡೈರೆಕ್ಟ್ ಕಾಲ್ ಮಾಡಿ ಮಾತನಾಡುತ್ತಿರಲಿಲ್ಲ. ಯಾರಿಗೆ ಆಗಲಿ, ವೆಬ್ ಕಾಲ್ ಮುಖಾಂತರವೇ ರಾಯ್ ಮಾತನಾಡುತ್ತಿದ್ದರು. ರಾಯ್, ಯಾರಿಗೆ ಕಾಲ್ ಮಾಡಿದ್ದರೂ, ಅದು ವೆಬ್ ಕಾಲ್  ಆಗಿರುತ್ತಿತ್ತು.   ಸದ್ಯ ಟೆಕ್ನಿಕಲ್ ತಂಡದಿಂದ ವೆಬ್ 'ಹಂಟಿಂಗ್' ಪ್ರಕ್ರಿಯೆ ಶುರುವಾಗಿದೆ.   URL ನಂಬರ್ ಮುಖಾಂತರ ಕಾಲ್ ಲಿಸ್ಟ್ ತೆಗೆಯಲು ಪ್ರಯತ್ನ ನಡೆಯುತ್ತಿದೆ. 

ಪುಟಗಟ್ಟಲೆ ಪೇಪರ್​​ಗಳೇ ಈಗ ಎಸ್‌ಐಟಿಗೆ   ಸಿಕ್ಕ ಎವಿಡೆನ್ಸ್​​​ಗಳು ಆಗಿವೆ.  ರಾಯ್ ಅವರ ಅದೊಂದು ಹ್ಯಾಬಿಟ್ ಈಗ ಮುಖ್ಯ ಸಾಕ್ಷಿಯಾಗಿದೆ. ಸಿ.ಜೆ. ರಾಯ್​​​ಗೆ ಏನೇ ನೆನಪಾದ್ರೂ ಪೇಪರ್​​​​​ಗಳಲ್ಲಿ ಬರೆದಿಡುತ್ತಿದ್ದರಂತೆ.  ರಫ್ ಆಗಿ ಬರೆದು ತನ್ನ ಟೇಬಲ್ ಮೇಲೇಯೇ ಇಡುತ್ತಿದ್ದರಂತೆ.   ತನ್ನ ಚೇಂಬರ್​​ಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲವಂತೆ ಸಿ.ಜೆ. ರಾಯ್. ಫೇಸ್ ರೆಕಾಗನೈಸ್ ಮೂಲಕ ಅವರ ಕೊಠಡಿ ಕೂಡ ಭದ್ರವಾಗಿತ್ತು. ಸಿ.ಜೆ.ರಾಯ್ ಹೊರತುಪಡಿಸಿ ಬೇರೆ ಯಾರಿಗೂ ಅವರ ಕೊಠಡಿಗೆ ಸುಲಭವಾಗಿ ಪ್ರವೇಶ ಇರಲಿಲ್ಲ. ಈ ವಿಶ್ವಾಸದ ಕಾರಣದಿಂದ ಮನಸ್ಸಿನಲ್ಲಿ ಹೊಳೆದ ಆಲೋಚನೆ, ಚಿಂತನೆ, ಮುಂದೇನು ಮಾಡಬೇಕು ಎನ್ನುವುದನ್ನೆಲ್ಲಾ ರಾಯ್ ಪೇಪರ್ ಗಳಲ್ಲಿ ತಮ್ಮ ಕೈಯಾರೆ ಬರೆದಿಡುತ್ತಿದ್ದರಂತೆ. ಹೀಗಾಗಿ ರಾಶಿಗಟ್ಟಲೆ ಪೇಪರ್​​ಗಳು ಅವರ ಚೇಂಬರ್ ನಲ್ಲಿದ್ದವು.   ಅದೇ ಪೇಪರ್ಸ್ ಸಾವಿಗೆ ಸ್ಪಷ್ಟ ಚಿತ್ರಣದ ಸುಳಿವು ನೀಡಲಿವೆಯಂತೆ .  ಸದ್ಯ ಪೇಪರ್ ವರ್ಕ್​ನಲ್ಲಿ  ಎಸ್​​ಐಟಿ ಅಧಿಕಾರಿಗಳು ಮುಳುಗಿದ್ದಾರೆ.  ಸಾವಿಗೆ ಕಾರಣ ಸಿಂಪಲ್ ಎಂದು ಎಸ್​​ಐಟಿ ಅಧಿಕಾರಿಗಳು ಹೇಳಿದ್ದಾರೆ. 
ಎಸ್​​ಐಟಿ ಹೇಳಿದ ಅ 'ಸಿಂಪಲ್' ಕಾರಣ ಏನು ಎಂಬುದೇ ಕುತೂಹಲವಾಗಿದೆ.  
ಒಂದು ವಾರದಲ್ಲಿ  ಉದ್ಯಮಿ ಸಿ.ಜೆ.ರಾಯ್ ಸಾವಿನ  ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಎಸ್​​ಐಟಿ ಅಧಿಕಾರಿಗಳು ಹೇಳಿದ್ದಾರೆ. 
ಬೆಂಗಳೂರು ಪೊಲೀಸರು ಇದುವರೆಗೂ ಸಾಕಷ್ಟು ನಿಗೂಢ ಕೇಸ್ ಗಳನ್ನೇ ಭೇಧಿಸಿದ ಖ್ಯಾತಿ ಹೊಂದಿದ್ದಾರೆ. ಈಗ ಸಿ.ಜೆ.ರಾಯ್ ಸೂಸೈಡ್ ಕೇಸ್ ಅನ್ನು ಆದಷ್ಟು ಬೇಗ ಭೇಧಿಸುವ ವಿಶ್ವಾಸದಲ್ಲಿ ರಾಜ್ಯ ಸರ್ಕಾರ ಇದೆ. ಎಸ್‌ಐಟಿ ಮುಖ್ಯಸ್ಥ ವಂಶಿಕೃಷ್ಣ, ಡಿಸಿಪಿ ಲೋಕೇಶ್ ಜಗಲಾಸರ್ ನೇತೃತ್ವದಲ್ಲಿ ತನಿಖೆ ತಂಡ ಹಗಲಿರುಳು ದುಡಿಯುತ್ತಿದ್ದು , ಆದಷ್ಟು ಬೇಗ ಆತ್ಮಹತ್ಯೆಯ ರಹಸ್ಯ ಬಯಲಾಗುವ ನಿರೀಕ್ಷೆ ಇದೆ.

SIT Formed to investigate cj roy death case




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CJ ROY DEATH NOTE SECRETS CJ Roy
Advertisment