/newsfirstlive-kannada/media/media_files/2025/11/08/flight-flying-over-bangalore-2025-11-08-17-55-12.jpg)
ಬೆಂಗಳೂರಿನ ಜೆ.ಪಿ.ನಗರದ ಮೇಲೆ ರೌಂಡ್ ಹಾಕುತ್ತಿರುವ ವಿಮಾನ
ನಿನ್ನೆ ದೆಹಲಿ, ಮುಂಬೈನ ಏರ್ ಟ್ರಾಫಿಕ್ ಕಂಟ್ರೋಲ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೇ, ಇವತ್ತು ಬೆಂಗಳೂರು ಏರ್ ಪೋರ್ಟ್ ನಲ್ಲಿ ಏನು ಸಮಸ್ಯೆಯಾಗಿದೆಯೋ ಗೊತ್ತಿಲ್ಲ, ಇಲ್ಲವೇ ವಿಮಾನದಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಎದುರಾಗಿದೆಯೋ ಗೊತ್ತಿಲ್ಲ. ವಿಮಾನವೊಂದು ಬೆಂಗಳೂರು ನಗರದ ಮೇಲೆ ರೌಂಡ್ಸ್ ಹಾಕುತ್ತಿದೆ. ಬೆಂಗಳೂರಿನ ಜೆ.ಪಿ.ನಗರದ ಬಳಿ ವಿಮಾನವೊಂದು ಆಕಾಶದಲ್ಲಿ ರೌಂಡ್ಸ್ ಹಾಕುತ್ತಿದೆ. ವಿಮಾನ ತಾನು ಹೋಗಬೇಕಾದ ಸ್ಥಳದತ್ತ ಹೋಗೋದು ಸಾಮಾನ್ಯ . ಆದರೇ, ವಿಮಾನವೊಂದು ಕಳೆದ ಒಂದೂವರೆ ಗಂಟೆಯಿಂದ ಜೆ.ಪಿ.ನಗರದ ಸುತ್ತವೇ ರೌಂಡ್ ಹೊಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹತ್ತಕ್ಕೂ ಹೆಚ್ಚು ಭಾರಿ ಜೆ.ಪಿ.ನಗರದ ಸುತ್ತವೇ ರೌಂಡ್ ಹೊಡೆದಿದೆ. ಇದು ಏರ್ ಇಂಡಿಯಾ ಸಂಸ್ಥೆಯ ವಿಮಾನ ಎಂದು ಹೇಳಲಾಗುತ್ತಿದೆ. AXB 558 B738 ವಿಮಾನ ಎಂದು ಹೇಳಲಾಗುತ್ತಿದೆ. ಜೆಪಿ ನಗರದ ಜನರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us