/newsfirstlive-kannada/media/media_files/2025/08/22/bangalore-central-jail-2025-08-22-18-16-58.jpg)
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪ್ರತಿಭಟನೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜೈಲಿನಲ್ಲಿ ಇಷ್ಟು ದಿನಗಳ ಕಾಲ ಆಕ್ರಮವಾಗಿ ಸಿಗರೇಟ್, ಬೀಡಿ ಸಿಗುತ್ತಿತ್ತು. ಈಗ ನಿಯಮಗಳ ಬಿಗಿಯಾಗಿ ಜಾರಿಗೊಳಿಸಿ, ಸಿಗರೇಟ್, ಬೀಡಿ ಸಿಗದಂತೆ ಬ್ರೇಕ್ ಹಾಕಲಾಗಿದೆ. ಬೀಡಿ, ಸಿಗರೇಟ್ ಸಿಗದೇ ಇರೋದರಿಂದ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ಬೀಡಿ, ಸಿಗರೇಟ್ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳು ಊಟ, ತಿಂಡಿ ಬಿಟ್ಟು ಜೈಲು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಕಷ್ಟು ಆಕ್ರಮಗಳು ಬೆಳಕಿಗೆ ಬಂದಿದ್ದವು. ಜೈಲಿನಲ್ಲಿ ಮೊಬೈಲ್ ಕೂಡ ಕೈದಿಗಳ ಕೈಗೆ ಸಿಕ್ಕಿತ್ತು. ಜೊತೆ ಮದ್ಯದ ಬಾಟಲಿಗಳು ಕೂಡ ಪತ್ತೆಯಾಗಿದ್ದವು. ಜೈಲಿನಲ್ಲಿ ದೊಡ್ಡ ಕೇಸ್ ಕತ್ತರಿಸಿ ಬರ್ತ್ ಡೇ ಪಾರ್ಟಿ ಕೂಡ ಮಾಡಿದ್ದರು. ಜೈಲಿನ ಹೊರಗಡೆ ಸಿಗುವ ಎಲ್ಲ ವಸ್ತುಗಳು ಜೈಲಿನೊಳಗೆ ಸಿಗುತ್ತಿವೆ ಎಂಬುದು ಬಹಿರಂಗವಾಗಿತ್ತು.
ಇದಾದ ಬಳಿಕ ಜೈಲು ಸುಧಾರಣೆ ಇಲಾಖೆಯು, ಜೈಲಿನ ಮುಖ್ಯ ಅಧೀಕ್ಷಕರಾಗಿ ಅಂಶುಕುಮಾರ್ ರನ್ನು ನೇಮಿಸಿದೆ. ಅಂಶುಕುಮಾರ್ ಜೈಲಿನ ಎಲ್ಲ ಆಕ್ರಮಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಜೈಲಿನಲ್ಲಿ ಸಿಬ್ಬಂದಿಯಿಂದಲೇ ನಡೆಯುತ್ತಿದ್ದ ಬೀಡಿ, ಸಿಗರೇಟ್ ಮಾರಾಟವನ್ನು ಬಂದ್ ಮಾಡಿದ್ದಾರೆ.
ಜೈಲಿನ ಕೈಪಿಡಿ ಪ್ರಕಾರ ಬೀಡಿ ಹಾಗೂ ಸಿಗರೇಟ್ ಮಾರಾಟ ಕಾನೂನುಬಾಹಿರ. ಸಿಬ್ಬಂದಿಗಳ ಅಕ್ರಮದಿಂದ ನಿಷೇಧಿತ ವಸ್ತು ಜೈಲಿನಲ್ಲಿ ಸಿಗುತ್ತಿದ್ದವು. ಇದನ್ನ ನಿಯಂತ್ರಿಸಲು ವಿಶೇಷ ಶೋಧ ತಂಡ ರಚನೆ ಮಾಡಲಾಗಿತ್ತು. ವಿಶೇಷ ಶೋಧ ತಂಡ ತಪಾಸಣೆ ನಡೆಸಿ 50ಕ್ಕಿಂತ ಹೆಚ್ಚು ಮೊಬೈಲ್ ಗಳನ್ನ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ ಜೈಲಿನೊಳಗೆ ಮಾರಾಟವಾಗುತ್ತಿದ್ದ ಬೀಡಿ,ಸಿಗರೇಟ್ ಗೆ ಕಡಿವಾಣ ಹಾಕಿತ್ತು . ಇದರಿಂದ ಅಸಮಾಧಾನಗೊಂಡಿರುವ ಕೈದಿಗಳು, ಊಟ ತ್ಯಜಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬೀಡಿ, ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನೊಳಗಿರುವ ಆಡಳಿತ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ.
ಜೈಲಿನ ನಿಯಾಮವಳಿ ಬಗ್ಗೆ ತಿಳಿ ಹೇಳಿದರೂ ಕೈದಿಗಳು ತಮ್ಮ ಪಟ್ಟು ಸಡಿಲಿಸಿಲ್ಲ. ಜೈಲಿನ ಕೈಪಿಡಿ ಅನುಸಾರ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಕೈದಿಗಳಿಗೆ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2023/10/BGM_JAIL.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us