/newsfirstlive-kannada/media/media_files/2026/02/27/nikhil-and-dixon-rape-case-at-party-2026-02-27-18-19-33.jpg)
ಆರೋಪಿ ನಿಖಿಲ್ , ಡಿಕ್ಸನ್
ಬೆಂಗಳೂರಿನಲ್ಲಿ ಕಾಲೇಜು ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಆರೋಪಿ ನಿಖಿಲ್ ನೇ ಯುವತಿಯೇ ನನ್ನ ಮೈ ಮೇಲೆ ಬಿದ್ದಳು. ನಾನೇನು ಮಾಡಿಲ್ಲ, ಆಕೆಯ ಕಡೆಯವರೇ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಆದರೇ, ಪೊಲೀಸರ ತನಿಖೆ, ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ನಿಖಿಲ್ ಓರ್ವ ಸಾಮಾನ್ಯ ವ್ಯಕ್ತಿಯೂ ಅಲ್ಲ, ಸಾಮಾನ್ಯ ಆರೋಪಿಯೂ ಅಲ್ಲ. ಈತ ಕ್ರೈಮ್ ಗಳ ಮಾಸ್ಟರ್ ಮೈಂಡ್ ಎಂಬ ಸತ್ಯ ಬೆಳಕಿಗೆ ಬಂದಿದೆ. ನಿಖಿಲ್ ಗೆ ಸಹಾಯ ಮಾಡಿದ್ದವನೇ ಡಿಕ್ಸನ್.
ನಿಖಿಲ್ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವನು. ಡಿಕ್ಸನ್ ಪಶ್ಚಿಮ ಬಂಗಾಳ ರಾಜ್ಯದವನು. ನಿಖಿಲ್ ಗೆ ಡಿಕ್ಸನ್ ರೀತಿಯಲ್ಲೇ ಮೂರು ನಾಲ್ಕು ಹುಡುಗರು ಆತನ ಗ್ಯಾಂಗ್ ನಲ್ಲಿ ಇದ್ದರು. ನಿಖಿಲ್ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಮತ್ತು ಕಾರ್ ವಾಶಿಂಗ್ ಸೆಂಟರ್ ನಡೆಸುತ್ತಿದ್ದ. ನಿಖಿಲ್ ತನ್ನ ಗ್ಯಾಂಗ್ ನ ಹುಡುಗರಿಗೆ ಆಗ್ಗಾಗ್ಗೆ ಹುಡುಗಿಯರನ್ನು ಕರೆಸುವುದಕ್ಕೆ ಹೇಳುತ್ತಿದ್ದ. ಡಿಕ್ಸನ್ & ಟೀಮ್ ಕಾಲೇಜು ಹುಡುಗಿಯರ ಜೊತೆಗೆ ಸ್ನೇಹ ಬೆಳೆಸುತ್ತಿದ್ರು.
ಇನ್ಸಾಟಾಗ್ರಾಮ್ ನಲ್ಲಿ ಹುಡುಗಿಯರ ಜೊತೆ ಗೆಳೆತನ ಬೆಳೆಸುತ್ತಿದ್ದರು. ನಗರದ ಪ್ರತಿಷ್ಠಿತ ಕಾಲೇಜು ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಕಾಲೇಜು ಯುವತಿಯರಿಗೆ ಪಾರ್ಟಿ ಇದೆ ಬನ್ನಿ, ಎಂಜಾಯ್ ಮಾಡೋಣ ಎಂದು ಕರೆಯುತಿದ್ದರು. ಯುವತಿಯರು ಪಾರ್ಟಿಗೆ ಬರಲು ಒಪ್ಪಿದಾಗ ನಿಖಿಲ್ ಗೆ ಮಾಹಿತಿ ನೀಡುತ್ತಿದ್ದರು. ನಿಖಿಲ್ ಜಕ್ಕೂರು ಬಳಿ ಇರುವ ವಿಲ್ಲಾದಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಪಾರ್ಟಿಗೆ ಬಂದ ಯುವತಿಯರಿಗೆ ಸೆಕ್ಸ್ ಮಾಡಲು ಸಹಕರಿಸುವಂತೆ ಹೇಳುತ್ತಿದ್ದರು. ಕೆಲವು ಹುಡುಗಿಯರು ಒಪ್ಪಿ ಎಂಜಾಯ್ ಮಾಡ್ತಿದ್ರು. ಇನ್ನು ಕೆಲವು ಯುವತಿಯರು ಒಪ್ಪುತ್ತಿರಲಿಲ್ಲ. ಯುವತಿಯರು ಒಪ್ಪದೇ ಇದ್ದಾಗ ಕುಡಿಸುವುದು ಮತ್ತು ಡ್ರಗ್ಸ್ ನೀಡುವುದು ಅಥವಾ ಮತ್ತು ಬರುವ ಮಾತ್ರೆ ಕುಡಿಸುವ ಕೆಲಸವನ್ನು ಆರೋಪಿಗಳು ಮಾಡುತ್ತಿದ್ದರು.
ಯುವತಿಯರು ಅರೆಪ್ರಜ್ಞಾವಸ್ಥೆಯಲ್ಲಿ ಇದ್ದಾಗ ಆರೋಪಿಗಳು ಅತ್ಯಾಚಾರ ಮಾಡುತ್ತಿದ್ದರು. ಬೆಳಗ್ಗೆ ಮಾತಾಡಿದಾಗ ಎಲ್ಲರೂ ಕುಡಿದ ನಶೆಯಲ್ಲಿ ಇದ್ದೆವು, ಏನಾಗಿದೆ ಗೊತ್ತಿಲ್ಲಾ ಎನ್ನುವ ರೀತಿಯಲ್ಲಿ ಆರೋಪಿಗಳು ಮಾತನಾಡುತ್ತಿದ್ದರು. ಕೆಲ ಹೆಣ್ಣುಮಕ್ಕಳು ಮರ್ಯಾದೆಗೆ ಹೆದರಿ ವಾಪಸ್ಸು ಹೋಗುತ್ತಿದ್ದರು.
ಆದ್ರೆ ಈ ಬಾರಿ ಓರ್ವ ಯುವತಿ ಮಾತ್ರ ಧೈರ್ಯವಾಗಿ ದೂರು ನೀಡಿದ್ದಾರೆ. ಹೀಗಾಗಿ ಈ ಭಾರಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿ ನಿಖಿಲ್, ಡಿಕ್ಸನ್ ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
/filters:format(webp)/newsfirstlive-kannada/media/media_files/2026/02/27/nikhil-and-dixon-rape-case-at-party-1-2026-02-27-18-21-12.jpg)
ಇನ್ನೂ ಆರೋಪಿ ನಿಖಿಲ್ ಗೆ ಪ್ರಭಾವಿಗಳ ಸಂಪರ್ಕ ಇದೆ. ನಿಖಿಲ್ ಪಾರ್ಟಿ ಆಯೋಜನೆ ಮಾಡುತ್ತಿದ್ದಿದ್ದು ಕೂಡ ಓರ್ವ ಪ್ರಭಾವಿ ವ್ಯಕ್ತಿಗೆ ಸೇರಿದ ವಿಲ್ಲಾದಲ್ಲಿ ಎಂಬ ಮಾಹಿತಿ ಲಭ್ಯವಾಗಿದೆ. ಆ ವಿಲ್ಲಾ ಓರ್ವ ಐಪಿಎಸ್ ಅಧಿಕಾರಿಗೆ ಸೇರಿದ ವಿಲ್ಲಾ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಇನ್ನೂ ನಿಖಿಲ್ ವಿರುದ್ಧ ರೇಪ್ ಕೇಸ್ ದಾಖಲಾದ ನಂತರವೂ ಪ್ರಭಾವಿ ವ್ಯಕ್ತಿಗಳು ತನಿಖೆ ನಡೆಸುತ್ತಿದ್ದ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ನಿಖಿಲ್ ಒಳ್ಳೆಯವನು. ಸ್ವಲ್ಪ ನೋಡಿಕೊಂಡು ತನಿಖೆ ಮಾಡಿ ಅನ್ನೋ ಮಾತುಗಳನ್ನು ಪ್ರಭಾವಿ ವ್ಯಕ್ತಿಗಳು ಪೊಲೀಸರಿಗೆ ಹೇಳಿದ್ದಾರೆ ಎಂಬ ಆರೋಪವೂ ಇದೆ.
ಈಗ ತನಿಖೆ ವೇಳೆ ನಿಖಿಲ್ ನಿಜ ಸ್ವರೂಪ ಬಯಲಾಗಿದೆ. ಈಗ ಅದೇ ಪ್ರಭಾವಿ ವ್ಯಕ್ತಿಗಳ ಮಾತಿನ ಧಾಟಿ ಕೂಡ ಬದಲಾಗಿದೆ. ಕಾನೂನು ಪ್ರಕಾರ, ತನಿಖೆ ನಡೆಸಿ ಎಂದು ಅದೇ ಪ್ರಭಾವಿ ವ್ಯಕ್ತಿಗಳು ಪೊಲೀಸರಿಗೆ ಹೇಳಿದ್ದಾರೆ. ಇದುವರೆಗೂ 19 ಜನ ಸಂತ್ರಸ್ಥ ಯುವತಿಯರು ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಎಲ್ಲ 19 ಮಂದಿಯಿಂದಲೂ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅಮೃತಹಳ್ಳಿ ಠಾಣಾ ಪೊಲೀಸರು ನಿರ್ಧರಿಸಿದ್ದಾರೆ.
ನಿಖಿಲ್ ಮತ್ತು ಡಿಕ್ಸನ್ ನನ್ನು ಅಮೃತಹಳ್ಳಿ ಠಾಣಾ ಪೊಲೀಸರು ಈಗಾಗಲೇ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಆರೋಪಿ ನಿಖಿಲ್ ವಿರುದ್ಧ ಯುವತಿ ಹೇಳಿಕೆ ನೀಡಿದ್ದಾಳೆ. ಸದ್ಯ ಪೊಲೀಸರು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಹಲವು ಯುವತಿಯರ ಮೇಲೆ ನಿಖಿಲ್ ಅಂಡ್ ಗ್ಯಾಂಗ್ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನೂ ಇದೇ ರೇಪ್ ಕೇಸ್ ನಲ್ಲಿ ದೂರು ನೀಡಿರುವ ಸಂತ್ರಸ್ಥ ಯುವತಿ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಸುಲಿಗೆಯ ದೂರು ಅನ್ನು ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಗೆ ನಿಖಿಲ್ ನೀಡಿದ್ದಾನೆ. ಆ ಕೇಸ್ ನ ತನಿಖಾ ವರದಿಯನ್ನು ನೀಡುವಂತೆ ಅಮೃತಹಳ್ಳಿ ಠಾಣಾ ಪೊಲೀಸರು, ಮಲ್ಲೇಶ್ವರ ಪೊಲೀಸ್ ಠಾಣೆಯ ಪೊಲೀಸರಿಗೆ ಕೇಳಿದ್ದಾರೆ. ಸುಲಿಗೆ ಮತ್ತು ರೇಪ್ ಕೇಸ್ ನ ಎರಡೂ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ವಿಲ್ಲಾದ ಸಂಪೂರ್ಣ ಸಿಸಿಟಿವಿ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೊಬೈಲ್ ಪೋನ್ ಗಳನ್ನ ಸೀಜ್ ಮಾಡಿದ್ದು, ಡಾಟಾ ರಿಟ್ರೀವ್ ಗೆ ಕಳಿಹಿಸಲಾಗಿದೆ. ಪಾರ್ಟಿಯ ಸಂಪೂರ್ಣ ವಿಡಿಯೋಗಳನ್ನು ಬಂಧಿತರು ತಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿದ್ದರು. ಹೀಗಾಗಿ ಮೊಬೈಲ್ ವಿಡಿಯೋಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮೂವರು ಯುವತಿಯರು ಹಾಗೂ ಓರ್ವ ಯುವಕನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. … ಬಂಧಿತ ಇಬ್ಬರನ್ನ ಹೊರತುಪಡಿಸಿ ಐದು ಮಂದಿಯನ್ನು ಇವತ್ತು ವಿಚಾರಣೆ ಮಾಡಿ ಹೇಳಿಕೆ ಪಡೆಯಲಾಗಿದೆ. ಈ ಕೇಸ್ ನಲ್ಲಿ ಎರಡು ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ.
ಇನ್ನೂ ಆರೋಪಿ ಡಿಕ್ಸನ್ ತಾಯಿ ಈ ಕೇಸ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗ ಏನೂ ತಪ್ಪು ಮಾಡಿಲ್ಲ. ಪೊಲೀಸರು ನನ್ನ ಮಗನನ್ನು ಆರೆಸ್ಟ್ ಮಾಡಿದ್ದಾರೆ. ಅವರೆಲ್ಲಾ ಸ್ನೇಹಿತರು. ಏನಾಗುತ್ತಿದೆ ಅಂತ ಗೊತ್ತಿಲ್ಲ ಎಂದಿದ್ದಾರೆ.
ಎಷ್ಟೇ ಆದರೂ, ಹೆತ್ತವರಿಗೆ ಹೆಗ್ಗಣ್ಣನೂ ಮುದ್ದು ಎನ್ನುತ್ತಾರಲ್ಲ, ಹಾಗೆಯೇ ಇದೆ ಡಿಕ್ಸನ್ ತಾಯಿಯ ಹೇಳಿಕೆ.
/filters:format(webp)/newsfirstlive-kannada/media/media_files/2026/02/27/nikhil-and-dixon-rape-case-at-party-2-2026-02-27-18-23-59.jpg)
ಘಟನೆ ಬಗ್ಗೆ ಸಂತ್ರಸ್ಥ ಯುವತಿ ಹೇಳಿದ್ದೇನು ಗೊತ್ತಾ?
ಇನ್ನೂ ಸಂತ್ರಸ್ಥ ಯುವತಿ ಈ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ಡಿಕ್ಸನ್ ಜನವರಿ ತಿಂಗಳಲ್ಲಿ ಇನ್ಸ್ ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದು, ಮೇಸೇಜ್ ಮಾಡಿದ್ದಾನೆ. ಸತತ ಒಂದು ವಾರಗಳ ಕಾಲ ಮೇಸೇಜ್ ಮಾಡಿದ್ದು, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಾನು ನಿನ್ನ ಜೊತೆ ಇರುತ್ತೇನೆ. ನಿನ್ನ ಜೊತೆ ಡೇಟ್ ಮಾಡುತ್ತೇನೆ ಎಂದೆಲ್ಲಾ ಮೇಸೇಜ್ ಮಾಡಿದ್ದ. ಬಳಿಕ ವಿಲ್ಲಾಗೆ ಪಾರ್ಟಿಗೆ ಕರೆದೊಯ್ದಿದ್ದ.ಆ ಪಾರ್ಟಿಯಲ್ಲಿ ಡಿಕ್ಸನ್ ಹಾಗೂ ಆತನ ಸ್ನೇಹಿತ ನಿಖಿಲ್ ಇಬ್ಬರೂ ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ಮಾಧ್ಯಮಗಳ ಮುಂದೆ ಹೇಳಿದ್ದಾಳೆ. ನಿಖಿಲ್ ಮತ್ತು ಡಿಕ್ಸನ್ ಇಬ್ಬರೂ ಏನೋ ಕೊಟ್ಟಿದ್ದರು. ಅದು ಏನೆಂದು ನನಗೆ ಗೊತ್ತಿಲ್ಲ. ಆದಾದ ಬಳಿಕ ಏನಾಯಿತು ಎಂದು ನನಗೆ ಗೊತ್ತಿಲ್ಲ. ನನಗೆ ಪ್ರಜ್ಞೆ ಇರಲಿಲ್ಲ. ಬಳಿಕ ಎಚ್ಚರವಾದಾಗ, ನಾನು ಅರೆಬರೆ ಬಟ್ಟೆಯಲ್ಲಿದ್ದೆ ಎಂದು ಸಂತ್ರಸ್ಥ ಯುವತಿ ಹೇಳಿದ್ದಾರೆ.
ವಿಲ್ಲಾದಲ್ಲಿ ಪಾರ್ಟಿ ಮಾಡಿದ್ದೇವು. ಊಟ ಮಾಡಿದ್ದೇವು. ಡ್ಯಾನ್ಸ್ ಮ್ಯೂಸಿಕ್ ಎಂದು ಇದ್ದೇವು. ನಂತರ ಅವರು ತನ್ನ ಜೊತೆಗೆ ಕೆಟ್ಟದಾಗಿ ನಡೆದುಕೊಂಡರು . ಅವರು ತನ್ನ ಮೇಲೆ ಮಲ್ಲೇಶ್ವರಂ ಠಾಣೆಯಲ್ಲಿ ದೂರು ಕೊಟ್ಟಿರುವುದು ಎಲ್ಲಾ ಸುಳ್ಳು. ನಾನು ಅವನ ಹತ್ತಿರ ಹಣ ಕೇಳಿಲ್ಲ. ನಾನೇ ಅವನಿಗೆ ಪೇ ಮಾಡಿದ್ದೆೇನೆ. ಅಮೃತ ಹಳ್ಳಿಯ ವಿಲ್ಲಾ ದಲ್ಲಿ ಡ್ರಗ್ಸ್ ಸಹ ಇತ್ತು. ನಾನು ಬೇಡ ಎಂದರೂ ಕೇಳಿಲ್ಲ . ನನ್ನ ಬಾಯಿಗೆ ಏನನ್ನೊ ಹಾಕಿದ್ರು. ನನಗೆ ಇನ್ನು ಹತ್ತೊಂಬತ್ತು ವರ್ಷ. ನಾನು ಡಿಕ್ಸನ್ ನನ್ನು ನಂಬಿ ಹೋಗಿದ್ದೆ.ಅವನು ರಿಲೇಷನ್ ಶಿಪ್ ಶುರುವಾಗುವ ಮೊದಲೇ ಹೀಗೆ ಮಾಡಿದ. ನಾನು ಬೇರೆನು ಕೇಳಲ್ಲ.. ನನಗೆ ನ್ಯಾಯ ಬೇಕು ಎಂದು ಸಂತ್ರಸ್ಥ ಯುವತಿ ಹೇಳಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us