/newsfirstlive-kannada/media/media_files/2026/03/03/rape-case-against-brains-doctor-2026-03-03-14-14-21.jpg)
ಆಸ್ಪತ್ರೆ ಡೈರೆಕ್ಟರ್ ತ್ರಿವಿಕ್ರಮರಾವ್ ಹಾಗೂ ಆಸ್ಪತ್ರೆ
ಆಸ್ಪತ್ರೆ... ನಿತ್ಯ ನೂರಾರು ಜೀವಗಳನ್ನ ಉಳಿಸೋ ದೇಗುಲ. ಸಾವಿನ ದವಡೆಯಲ್ಲಿದ್ದವರ ಕೈ ಹಿಡಿದು ಕಾಪಾಡೋ ಪವಿತ್ರ ಸ್ಥಳ. ಆದ್ರೆ, ನಗರದ ಪ್ರತಿಷ್ಟಿತ ಹಾಸ್ಪಿಟಲ್​ನ ನಿರ್ದೇಶಕರ ವಿರುದ್ಧವೇ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಕ್ಲೈಂಟ್ ಮೀಟಿಂಗ್ ಅಂತ ಆಸ್ಪತ್ರೆಯ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಬ್ರೈನ್ಸ್​​ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ... ಬೆಂಗಳೂರು ಅಷ್ಟೇ ಅಲ್ಲ, ವರ್ಲ್ಡ್​ ಫೇಮಸ್​. ಆದ್ರೆ, ಆಸ್ಪತ್ರೆಯ ಎಕ್ಸಿಕ್ಯೂಟಿವ್ ನಿರ್ದೇಶಕ ಮಾಡಬಾರದ ಕೆಲಸ ಮಾಡಿ ಈ ಹಾಸ್ಪಿಟಲ್​ನ ಘನತೆಗೆ ಮಸಿ ಬಳಿದಿದ್ದಾನೆ. ಈತನೇ ನೋಡಿ ಆ ಮಹಾಶಯ.. ತ್ರಿವಿಕ್ರಮ್ ರಾವ್..
/filters:format(webp)/newsfirstlive-kannada/media/media_files/2026/03/03/rape-case-against-brains-doctor-1-2026-03-03-14-17-24.jpg)
ಈತ ಮಾಡಿರೋ ದೌರ್ಜನ್ಯಕ್ಕೆ, ಕೀಚಕ ಕೃತ್ಯಕ್ಕೆ ಪಾಪ, ಜಯನಗರ ಅಶೋಕ ಪಿಲ್ಲರ್ ಬಳಿಯ ಇದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ.
ಕಿರುಕುಳ, ದೌರ್ಜನ್ಯ, ಅತ್ಯಾಚಾರ?
ಬ್ರೈನ್ಸ್​​ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ ಮಹಿಳೆ
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ಮಹಿಳೆ
ಮಾತನಾಡಿಸೋ ನೆಪದಲ್ಲಿ ಸಲುಗೆ ಬೆಳಿಸಿಕೊಂಡಿದ್ದ ಆಸ್ಪತ್ರೆ ಡೈರೆಕ್ಟರ್
ಕ್ಲೈಂಟ್, ಇನ್ವೆಸ್ಟರ್ ಮೀಟಿಂಗ್ ಅಂತ ಕರೆದೊಯ್ದು ಲೈಂಗಿಕ ಕಿರುಕುಳ
ಮೀಟಿಂಗ್ ನೆಪದಲ್ಲಿ ಸ್ಟಾರ್ ಹೊಟೇಲ್​​​ಗಳಿಗೆ ಕರೆದೂಯ್ದು ದೌರ್ಜನ್ಯ
MG ರಸ್ತೆಯ ಪ್ರತಿಷ್ಟಿತ ಖಾಸಗಿ ಹೋಟೆಲ್​​​ನಲ್ಲಿ ಅತ್ಯಾಚಾರ ಆರೋಪ
ಆಸ್ಪತ್ರೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿಕ್ರಮ್ ರಾವ್ ವಿರುದ್ಧ ಆರೋಪ
ಅತ್ಯಾಚಾರವೆಸಗಿ ಯಾರಿಗಾದ್ರೂ ಹೇಳಿದ್ರೆ ಕೆಲ್ಸದಿಂದ ತೆಗೆಯೋ ಬೆದರಿಕೆ
ಕೆಲಸಕ್ಕೆ ರಾಜೀನಾಮೆ ನೀಡಿ ಪೊಲೀಸ್​​​ಗೆ ದೂರು ನೀಡಿದ ಸಂತ್ರಸ್ತೆ
ತ್ರಿವಿಕ್ರಮ್ ರಾವ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು
ದೂರು ದಾಖಲಾಗ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್, ಆರೋಪಿ ಎಸ್ಕೇಪ್
ಬ್ರೈನ್ಸ್​​ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ರು. ಮಾತನಾಡಿಸೋ ನೆಪದಲ್ಲಿ ಆಸ್ಪತ್ರೆ ಡೈರೆಕ್ಟರ್ ಈ ತ್ರಿವಿಕ್ರಮ್​ ರಾವ್​ ಸಲುಗೆ ಬೆಳಿಸಿಕೊಂಡಿದ್ದ. ಹೀಗಿರುವಾಗ ಕ್ಲೈಂಟ್, ಇನ್ವೆಸ್ಟರ್ ಮೀಟಿಂಗ್ ಅಂತ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಮೀಟಿಂಗ್ ನೆಪದಲ್ಲಿ ಸ್ಟಾರ್ ಹೊಟೇಲ್​ಗೆ ಕರೆದೂಯ್ದು ದೌರ್ಜನ್ಯವೆಸಗಿರೋ ಆರೋಪವಿದೆ. MG ರಸ್ತೆಯ ಪ್ರತಿಷ್ಟಿತ ಖಾಸಗಿ ಹೋಟೆಲ್​​​ನಲ್ಲಿ ಅತ್ಯಾಚಾರವೆಸಗಿರೋ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ತ್ರಿವಿಕ್ರಮ್ ರಾವ್ ವಿರುದ್ಧ ಇಂತಹದ್ದೊಂದು ಗಂಭೀರ ಆರೋಪ ಕೇಳಿಬಂದಿದೆ. ಇಷ್ಟೇ ಅಲ್ಲಾ, ಅತ್ಯಾಚಾರವೆಸಗಿ ಯಾರಿಗಾದ್ರೂ ಹೇಳಿದ್ರೆ ಕೆಲ್ಸದಿಂದ ತೆಗೆಯೋ ಬೆದರಿಕೆ ಕೂಡ ಹಾಕಿದ್ದಾನಂತೆ. ಸದ್ಯ ಕೆಲಸಕ್ಕೆ ರಾಜೀನಾಮೆ ನೀಡಿ ತನ್ನ ಮೇಲಾದ ದೌರ್ಜನ್ಯದ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
ತ್ರಿವಿಕ್ರಮ್ ರಾವ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಈ ಕಾಮುಕ ದೂರು ದಾಖಲಾಗಿದ್ದು, ಗೊತ್ತಾಗ್ತಾಯಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಎಸ್ಕೇಪ್​ ಆಗಿದ್ದಾನಂತೆ. ಅದೇನೇ ಹೇಳಿ ಪೊಲೀಸರು ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಆಗ ಮಾತ್ರ ದುಡಿಯೋ ಹೆಣ್ಣು ಮಕ್ಕಳ ಮೇಲಾಗೋ ದೌರ್ಜನ್ಯಕ್ಕೆ ನ್ಯಾಯ ಸಿಕ್ಕಂತಾಗಲಿದೆ.
ಶಿವಕುಮಾರ್​, ನ್ಯೂಸ್​ಫಸ್ಟ್​​ ಬೆಂಗಳೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us