Advertisment

ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೇಪ್‌!! ಸೀನಿಯರ್ ವಿದ್ಯಾರ್ಥಿನಿ ಮೇಲೆ ಜ್ಯೂನಿಯರ್ ವಿದ್ಯಾರ್ಥಿಯಿಂದ ರೇಪ್‌

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೇಪ್ ನಡೆದಿದೆ. ಲಂಚ್ ಬ್ರೇಕ್ ನಲ್ಲಿ ಸೀನಿಯರ್ ವಿದ್ಯಾರ್ಥಿನಿಯ ಮೇಲೆ ಜ್ಯೂನಿಯರ್ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದಾನೆ.

author-image
Chandramohan
BANGALORE COLLEGE RAPE

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ರೇಪ್!

Advertisment
  • ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ರೇಪ್!
  • ಕಾಲೇಜು ಕ್ಯಾಂಪಸ್ ನಲ್ಲೇ ಲಂಚ್ ಬ್ರೇಕ್ ನಲ್ಲಿ ರೇಪ್ ಕೃತ್ಯ
  • ಹನುಮಂತನಗರ ಠಾಣೆ ಪೊಲೀಸರಿಂದ ಆರೋಪಿ ಜೀವನ್ ಬಂಧನ


ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. 
ಕಾಲೇಜಿನ ವಿದ್ಯಾರ್ಥಿಯಿಂದಲೇ ತನ್ನ ಸೀನಿಯರ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. ಜೂನಿಯರ್ ನಿಂದ ಸೀನಿಯರ್ ವಿದ್ಯಾರ್ಥಿನಿ ಮೇಲೆ  ಅತ್ಯಾಚಾರ ನಡೆದಿದೆ. 
ಆರೋಪಿ ಹಾಗೂ ಸಂತ್ರಸ್ಥೆ ಒಂದೇ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು.  ಜೀವನ್ ಬಂಧಿತ ಎಂಜಿನಿಯರಿಂಗ್ ವಿದ್ಯಾರ್ಥಿ.   ಆರೋಪಿ ಜೀವನ್ ಕೆಲ ಸಬ್ಜೆಕ್ಟ್ ಗಳಲ್ಲಿ ಫೇಲಾಗಿದ್ದಾನಂತೆ. ಇದರಿಂದಾಗಿ ಸೀನಿಯರ್ ವಿದ್ಯಾರ್ಥಿನಿಯ ಜೊತೆ ನೋಟ್ಸ್ ಪಡೆದು ಫ್ರೆಂಡ್ ಷಿಪ್ ಮಾಡಿಕೊಂಡಿದ್ದಾನೆ. ಆ ಸಲುಗೆಯಲ್ಲೇ ಆಕೆಯ ಜೊತೆ ಆಗ್ಗಾಗ್ಗೆ ಮಾತನಾಡುತ್ತಿದ್ದ. ಆಕೆಯಿಂದ ಪಡೆದಿದ್ದ ನೋಟ್ಸ್ ಗಳನ್ನು ವಾಪಸ್ ಕೊಡುವ ನೆಪದಲ್ಲಿ ಕರೆದು ರೇಪ್ ಮಾಡಿದ್ದಾನೆ. 
ಕಳೆದ ಮೂರು ತಿಂಗಳ ಹಿಂದೆ ಪರಿಚಿತಳಾಗಿದ್ದ ಸೀನಿಯರ್‌ ವಿದ್ಯಾರ್ಥಿನಿಯ ಮೇಲೆ ಕಾಲೇಜು ಕ್ಯಾಂಪಸ್ ನಲ್ಲೇ ಅತ್ಯಾಚಾರ ಎಸಗಿದ್ದಾನೆ.  ಕಾಲೇಜಿನಲ್ಲೇ ತನ್ನ ಸೀನಿಯರ್' ಮೇಲೆ  ಅತ್ಯಾಚಾರ ಎಸಗಿರೋ ಜೂನಿಯರ್ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.  ಕಾಲೇಜಿನ ವಾಶ್ ರೂಂ ಗೆ ಎಳೆದೊಯ್ದು ಸೀನಿಯರ್ ವಿದ್ಯಾರ್ಥಿನಿ ಮೇಲೆ ಆರೋಪಿ   ಅತ್ಯಾಚಾರ ಎಸಗಿದ್ದಾನೆ.  ಸದ್ಯ ಆರೋಪಿಯನ್ನ ಬಂಧಿಸಿ  ಪೊಲೀಸರು ಜೈಲಿಗಟ್ಟಿದ್ದಾರೆ.  ಬೆಂಗಳೂರಿನ  ಹನುಮಂತನಗರ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿದೆ. 

Advertisment

ಎಂಜಿನಿಯರಿಂಗ್ ಕೋರ್ಸ್ ನ  7 ನೇ ಸೆಮಿಸ್ಟರ್ ನಲ್ಲಿ ಸಂತ್ರಸ್ಥ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಳು. 
ಐದನೇ ಸೆಮಿಸ್ಟರ್  ನಲ್ಲಿ ಆರೋಪಿ ವಿದ್ಯಾರ್ಥಿ ಜೀವನ್ ಓದುತ್ತಿದ್ದ.  ಅಕ್ಟೋಬರ್ 10 ರಂದು ಕಾಲೇಜಿಗೆ ಯುವತಿ ತೆರಳಿದ್ದಳು.  ಲಂಚ್ ಬ್ರೇಕ್ ನಲ್ಲಿ ಯುವತಿಯನ್ನ ಭೇಟಿ ಮಾಡಲು  ಆರೋಪಿ ಬಂದಿದ್ದ. 
ಪದೇ ಪದೇ ವಿದ್ಯಾರ್ಥಿನಿಗೆ ಆರೋಪಿ ಜೀವನ್ ಪೋನ್ ಕಾಲ್ ಮಾಡುತ್ತಿದ್ದ.  ಈ ವೇಳೆ ಕಾಲೇಜಿನ ಡೌನ್ ಸ್ಟೇರ್ಸ್ ಬಳಿ ಜೀವನ್ ನನ್ನು ಸಂತ್ರಸ್ಥ ವಿದ್ಯಾರ್ಥಿನಿ ಭೇಟಿಯಾಗಿದ್ದಳು.  ನಂತರ ಕಾಲೇಜಿನ ಬೇರೊಂದು ಬ್ಲಾಕ್ ಗೆ  ಹೋಗೋಣ, ನಿನ್ನ ಜೊತೆ ಮಾತನಾಡಬೇಕು ಎಂದು ಜೀವನ್ ಹೇಳಿದ್ದ. ಕಾಲೇಜಿನ ಏಳನೇ ಮಹಡಿಗೆ ತನ್ನ ಸೀನಿಯರ್ ವಿದ್ಯಾರ್ಥಿನಿಯನ್ನ ಜೀವನ್ ಕರೆದೊಯ್ದಿದ್ದ.  ಈ ವೇಳೆ ತನ್ನ ಜೆರ್ಸಿಯನ್ನ ಕೊಟ್ಟು ವಿದ್ಯಾರ್ಥಿನಿ ಗೆ ಮುತ್ತಿಡಲು  ಆರೋಪಿ ಜೀವನ್ ಯತ್ನಿಸಿದ್ದ.  ಇದನ್ನು ನಿರಾಕರಿಸಿದ್ದ ವಿದ್ಯಾರ್ಥಿನಿ ಆರನೇ ಮಹಡಿ ಬಳಿ ಬರುತ್ತಿದ್ದಾಗ ಬಲವಂತವಾಗಿ ಪುರುಷರ  ವಾಶ್ ರೂಂ ಗೆ ಎಳೆದೊಯ್ದಿದ್ದ.  ನಂತರ ತನ್ನ ಬಟ್ಟೆ ಬಿಚ್ಚಿ ಸೀನಿಯರ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಕ್ಟೋಬರ್ 10 ರ ಮಧ್ಯಾಹ್ನ ಲಂಚ್ ಬ್ರೇಕ್ ಸಮಯದಲ್ಲಿ  ಸೀನಿಯರ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ.  ಕಾಲೇಜಿನಿಂದ ಮನೆಗೆ ತೆರಳಿದ ನಂತರ ಪೋಷಕರಿಗೆ ವಿಷಯ ತಿಳಿಸಿ ಹನುಮಂತನಗರ ಠಾಣೆಗೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.  ದೂರಿನ ಅನ್ವಯ ಜೀವನ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ.  ಆರೋಪಿ ವಿದ್ಯಾರ್ಥಿ ಜೀವನ್  ನನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ. 

BANGALORE COLLEGE RAPe station03



ರೇಪ್ ಕೃತ್ಯ ಎಸಗಿದ ಬಳಿಕ ಆರೋಪಿ ಜೀವನ್, ಸಂತ್ರಸ್ಥ ವಿದ್ಯಾರ್ಥಿನಿಗೆ ನೀನು ಗರ್ಭೀಣಿಯಾಗದಂತೆ ತಡೆಯಲು ಮಾತ್ರೆ ಏನಾದರೂ ಬೇಕಾ ಎಂದು ಕೂಡ ಕೇಳಿದ್ದಾನೆ. ಇದನ್ನು ಸಂತ್ರಸ್ಥೆ ಈಗ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಯ ವಿರುದ್ಧ ಬಿಎನ್‌ಎಸ್ ಸೆಕ್ಷನ್ 64 ರಡಿ ರೇಪ್ ಕೇಸ್ ದಾಖಲಾಗಿದೆ. 

BANGALORE COLLEGE RAPe station02


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Senior student raped by junior at Engineering College
Advertisment
Advertisment
Advertisment