ಹೋಟೇಲ್ ಗಳಲ್ಲಿ ರಿಯಲ್ ಎಸ್ಟೇಟ್ ಚರ್ಚೆ - ಟೇಬಲ್ ಚಾರ್ಜ್ ವಿಧಿಸಲು ಹೋಟೇಲ್ ಗಳಿಂದ ಪರಿಶೀಲನೆ

ಬೆಂಗಳೂರಿನಲ್ಲಿ ಹೋಟೇಲ್ ಗಳಲ್ಲಿ ಕಾಫಿ, ಟೀ ಕುಡಿಯಲು ಹಾಗೂ ತಿಂಡಿ ತಿನ್ನಲು ಬಂದವರು ಬೇಗ ಕಾಫಿ, ತಿಂಡಿ ಮುಗಿಸಿ ಟೇಬಲ್ ಖಾಲಿ ಮಾಡುತ್ತಿಲ್ಲ. ಗಂಟೆಗಟ್ಟಲೇ ರಿಯಲ್ ಎಸ್ಟೇಟ್ ವಿಚಾರ ಚರ್ಚೆ ಮಾಡುತ್ತಿದ್ದಾರಂತೆ. ಹೀಗಾಗಿ ಟೇಬಲ್ ಚಾರ್ಜ್ ವಿಧಿಸಲು ಹೋಟೇಲ್ ಗಳು ಗಂಭೀರ ಚಿಂತನೆ ನಡೆಸುತ್ತಿವೆ.

author-image
Chandramohan
HOTEL TABLE CHARGE
Advertisment

ಸಿಲಿಕಾನ್ ಸಿಟಿ ಜನ ಮೊದಲೇ ಆಹಾರಪ್ರಿಯರು .ರಾಜಧಾನಿಯಲ್ಲಿ ಕೆಫೆ ಸಂಸ್ಕೃತಿ ಹಾಸು ಹೊಕ್ಕಾಗಿದೆ.  ಬೆಂಗಳೂರಿನ ಬಹುತೇಕ ಹೋಟೆಲ್ ಗಳು ಕೇವಲ ಕಾಫಿ ಕುಡಿಯುವ ಜಾಗಗಳಾಗಿ ಉಳಿಯದೇ, ಮೀಟಿಂಗ್ ಸ್ಪಾಟ್ ಗಳಾಗ್ತಿವೆ.ಇದರಿಂದಾಗಿ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರಿಗೆ ತೊಂದರೆಯಾಗ್ತಿದೆ. ಈ ನಿಟ್ಟಿನಲ್ಲಿ ಹೊಸ ಚಾರ್ಜ್ ಅಳವಡಿಕೆ ಬಗ್ಗೆ ಚರ್ಚೆ ನಡೆದಿದೆ.  ಏನು ಹೊಸ ನಿಯಮ ಅನ್ನೋ ಪುಲ್ ಡಿಟೆಲ್ಸ್ ಇಲ್ಲಿದೆ ನೋಡಿ...

ಬೆಂಗಳೂರಿನ ಎಲ್ಲಾ ಹೋಟೆಲ್‌ ಗಳಲ್ಲಿ ಹೊಸ ರೂಲ್ಸ್ ಜಾರಿ ಬಗ್ಗೆ ಚರ್ಚೆ...!
ಪಾರ್ಕಿಂಗ್ ಚಾರ್ಜ್ ನಂತೆ ಟೇಬಲ್ ಚಾರ್ಜ್ ಜಾರಿಯಾಗುತ್ತಾ...?

HOTEL TABLE CHARGE





 ಇತ್ತೀಚೆಗೆ ಬೆಂಗಳೂರಿನ ಹೋಟೆಲ್ ಒಂದರ ಗೋಡೆಯ ಮೇಲೆ  ಇಲ್ಲಿ ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ. ಒಂದು ವೇಳೆ ಮೀಟಿಂಗ್ 1 ಗಂಟೆಗಿಂತ ಹೆಚ್ಚು ನಡೆದರೇ,  ಪ್ರತಿ ಗಂಟೆಗೆ 1000 ರೂಪಾಯಿ ಶುಲ್ಕ ವಿಧಿಸಲಾಗುವುದು ಅಂತಾ ಬರೆಯಲಾಗಿತ್ತು. ಈ  ನೋಟಿಸ್‌ ಒಂದರ ಫೋಟೋ ಸಾಕಷ್ಟು ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಹೋಟೆಲ್ ನಲ್ಲಿ ನಡೆಯೋ ಮೀಟಿಂಗ್ ಸಮಯದ ಬಗ್ಗೆ ಸಾಕಷ್ಟು ಚರ್ಚೆಗಳು ಮುನ್ನೆಲ್ಲೆಗೆ ಬರತ್ತಿವೆ.  ನಗರದಲ್ಲಿ ಫೈವ್ ಸ್ಟಾರ್, ಥ್ರೀ ಸ್ಟಾರ್,  ಸಾಮಾನ್ಯ ಹೋಟೆಲ್ ಗಳು ಸೇರಿದಂತೆ ಸುಮಾರು 35 ಸಾವಿರಕ್ಕೂ ಹೆಚ್ಚು ಹೋಟೆಲ್ ಗಳಿವೆ. ಸಣ್ಣ ಹಾಗೂ ಮಧ್ಯಮವರ್ಗದ ಹೋಟೆಲ್ ಗಳು ಕೇವಲ ಊಟ-ಉಪಹಾರದ ತಿನ್ನುವ ತಾಣಗಳಾಗದೇ ಮೀಟಿಂಗ್ ಸ್ಪಾಟ್ ಗಳಾಗತ್ತಿವೆ. ಇಲ್ಲಿ ರಾಜಕೀಯ, ಭೂವ್ಯವಹಾರ, ರಿಯಲ್ ಎಸ್ಟೇಟ್, ಮದುವೆ,ಆಫೀಸ್ ವಿಷಯಗಳು ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತವೆ.  ಈ ವೇಳೆ ಮಾತನಾಡುತ್ತಾ ಗ್ರಾಹಕರು ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ.  ಇದರಿಂದ ನಂತರ ಬರುವ ಗ್ರಾಹಕರು ಹಾಗೂ ಹೋಟೆಲ್ ಅಸೋಸಿಯೇಷನ್ ನವರಿಗೆ ಸಾಕಷ್ಟು ತೊಂದರೆಯಾಗ್ತಿದೆಯಂತೆ.   ಪೀಕ್ ಅವರ್‌ಗಳಲ್ಲಿ ಬರುವ ಗ್ರಾಹಕರಿಗೆ ಕೂರಲು ಜಾಗವಿಲ್ಲದೆ ಅವರು ವಾಪಸ್ ಹೋಗುತ್ತಾರೆ.
ಈ ಬಗ್ಗೆ ಬೃಹತ್ ಬೆಂಗಳೂರು ಹೋಟೆಲ್ ಸಂಘಕ್ಕೆ ಹಲವು ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ.  ಜೊತೆಗೆ ಫೈವ್ ಸ್ಟಾರ್ ಹೋಟೆಲ್ ಗಳ ಲಾಬಿಯಲ್ಲಿ  ಕುಳಿತರೇ ಗಂಟೆಗೆ ಸಾವಿರ ರೂಪಾಯಿ ಹಾಗೂ ತಿನ್ನಲು ಆರ್ಡರ್ ಮಾಡಬೇಕು. ಅದರಂತೆ  ಬೆಂಗಳೂರಿನ ಎಲ್ಲಾ ಹೋಟೆಲ್ ಗಳಲ್ಲಿ ಪಾರ್ಕಿಂಗ್ ಚಾರ್ಜ್ ನಂತೆ ಟೇಬಲ್ ಚಾರ್ಜ್ ಹಾಕಲು ಸಲಹೆ ನೀಡುತ್ತಿದ್ದಾರೆ.  ಹೀಗಾಗಿ ನಗರದ ಸಣ್ಣ ,  ಮಧ್ಯಮ ವರ್ಗದ ಹೋಟೆಲ್ ಗಳಲ್ಲಿ ಟೀ,  ಕಾಫಿ, ಉಪಹಾರ ಹಾಗೂ ಊಟಕ್ಕೆ ಇಂತಿಷ್ಟು ಸಮಯ ನಿಗದಿಪಡಿಸಿ ಟೇಬಲ್ ಚಾರ್ಜ್ ಅಳವಡಿಸುವ ಬಗ್ಗೆ ಚರ್ಚೆ ನಡೆದಿದೆ.   ಎಲ್ಲರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಘ ಹೇಳುತ್ತಿದೆ. 
ಒಟ್ಟಿನಲ್ಲಿ, ಒಂದು ಕಾಫಿ ಕುಡಿದು ದಿನವಿಡೀ ಕಳೆಯುವ ಸಂಸ್ಕೃತಿಗೆ ಬೆಂಗಳೂರಿನ ಹೋಟೆಲ್‌ಗಳು ಈಗ ಫುಲ್ ಸ್ಟಾಪ್ ಹಾಡತ್ತಾವಾ ಕಾದು ನೋಡಬೇಕಿದೆ.

ಚಂದನ ಶೆಟ್ಟಿ, ನ್ಯೂಸ್ ಫಸ್ಟ್, ಬೆಂಗಳೂರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

NO MEETINGS ALLOWED IN HOTELS TABLE CHAREGE AT BANGALORE HOTELS
Advertisment