/newsfirstlive-kannada/media/media_files/2026/02/19/prakash-belavadi-awarded-byrappa-pratisthan-award-2026-02-19-12-58-25.jpg)
ಹೆಸರಾಂತ ರಂಗಕರ್ಮಿ ನಟ, ನಿರ್ದೇಶಕ ಮತ್ತು ಬರಹಗಾರ ಪ್ರಕಾಶ್ ಬೆಳವಾಡಿ ಅವರು 2026ನೇ ಸಾಲಿನ ‘ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ಗೆ ಪುರಸ್ಕೃತರಾಗಿದ್ದಾರೆ.
ಫೆಬ್ರವರಿ 21ರ ಶನಿವಾರದಂದು ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಬಹುಭಾಷಾ ಪಂಡಿತ ಪ್ರಧಾನ್ ಗುರುದತ್ತ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಟ ನಿರ್ದೇಶಕ ಹಾಗೂ ನಾಟಕಕಾರ ಎಸ್.ಎನ್ ಸೇತುರಾಂ ಅವರು ಆಗಮಿಸಲಿದ್ದಾರೆ. ಎಸ್ ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್ ಎನ್ ಸೇತುರಾಂ ಅವರು ಉಪಸ್ಥಿತರಿರಲಿದ್ದಾರೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಜಿ.ಎಲ್ ಶೇಖರ್ ತಿಳಿಸಿದ್ದಾರೆ.
/filters:format(webp)/newsfirstlive-kannada/media/media_files/2026/02/19/prakash-belavadi-2026-02-19-12-59-33.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us