ನೆಲಮಂಗಲದಲ್ಲಿ ಪ್ಲಾಸ್ಟಿಕ್‌ ಗನ್‌ ತೋರಿಸಿ ರಾಬರಿ.. ಸಿನಿಮಾ ಸ್ಟೈಲ್‌ನಲ್ಲಿ ಬಂದು ಚಿನ್ನಾಭರಣ ದರೋಡೆ..

ದಾಸನಪುರದ 'ರಾಮ್ ದೇವ್ ಜ್ಯುವೆಲ್ಲರಿ' ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಒಡವೆ ಅಂಗಡಿಯೊಳಗೆ ನುಗ್ಗಿದ್ದಾರೆ. ತಾವು ತಂದಿದ್ದ ಪ್ಲಾಸ್ಟಿಕ್ ಗನ್ ತೋರಿಸಿ ಮಾಲೀಕರನ್ನು ಹೆದರಿಸಿ ದರೋಡೆಗೆ ಯತ್ನಿಸಿದ್ದಾರೆ.

author-image
Ganesh Kerekuli
robbery
Advertisment

ನೆಲಮಂಗಲ: ಪ್ಲಾಸ್ಟಿಕ್ ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿರುವ ಘಟನೆ ನೆಲಮಂಗಲ ತಾಲೂಕಿನ ದಾಸನಪುರದಲ್ಲಿ ನಡೆದಿದೆ. ಅಂಗಡಿ ಮಾಲೀಕ ತೀವ್ರ ಪ್ರತಿರೋಧ ಒಡ್ಡಿದ ಕಾರಣ, ದರೋಡೆಕೋರರು ಕೈಗೆ ಸಿಕ್ಕ ಚಿನ್ನಾಭರಣ ಹಾಗೂ ನಗದಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ವಿವರ

ದಾಸನಪುರದ 'ರಾಮ್ ದೇವ್ ಜ್ಯುವೆಲ್ಲರಿ' ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಒಡವೆ ಅಂಗಡಿಯೊಳಗೆ ನುಗ್ಗಿದ್ದಾರೆ. ತಾವು ತಂದಿದ್ದ ಪ್ಲಾಸ್ಟಿಕ್ ಗನ್ ತೋರಿಸಿ ಮಾಲೀಕರನ್ನು ಹೆದರಿಸಿ ದರೋಡೆಗೆ ಯತ್ನಿಸಿದ್ದಾರೆ.

ಮಾಲೀಕನ ಪ್ರತಿರೋಧ - ಕಳ್ಳರ ಎಸ್ಕೇಪ್

ದರೋಡೆಕೋರರು ಗನ್ ತೋರಿಸುತ್ತಿದ್ದಂತೆಯೇ ಎದೆಗುಂದದ ಅಂಗಡಿ ಮಾಲೀಕರು, ತಕ್ಷಣವೇ ಚೋರರ ವಿರುದ್ಧ ತಿರುಗಿ ಬಿದ್ದು ಪ್ರತಿರೋಧ ತೋರಿದ್ದಾರೆ. ಮಾಲೀಕನ ಧೈರ್ಯ ಕಂಡು ಗಾಬರಿಗೊಂಡ ದರೋಡೆಕೋರರು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗದೆ, ಸಿಕ್ಕಿದ್ದನ್ನು ಬಾಚಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಅಂಗಡಿಯಲ್ಲಿದ್ದ ಸುಮಾರು 27 ಗ್ರಾಂ ತೂಕದ ಚಿನ್ನದ ಸರ ಹಾಗೂ 50 ಸಾವಿರ ರೂಪಾಯಿ ನಗದನ್ನು ಕಸಿದುಕೊಂಡು ಕಿದೀಮರು ಬೈಕ್‌ನಲ್ಲಿ ನಾಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ:

ವಿಷಯ ತಿಳಿಯುತ್ತಿದ್ದಂತೆಯೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಜ್ಯುವೆಲ್ಲರಿ ಅಂಗಡಿಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ಪ್ಲಾಸ್ಟಿಕ್ ಗನ್ ತೋರಿಸಿ ಬೆದರಿಕೆ ಹಾಕಿದ ಕಿರಾತಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಹೊಸ ನಗರದಿಂದ ಬೆಂಗಳೂರಿಗೆ ಬರ್ತಿದ್ದ ಬಸ್‌ಗೆ ಭೀಕರ ಬೆಂಕಿ.. 40 ಪ್ರಯಾಣಿಕರಿದ್ದ ಖಾಸಗಿ ವಾಹನ ಸುಟ್ಟು ಭಸ್ಮ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Robbery
Advertisment