/newsfirstlive-kannada/media/media_files/2025/12/31/mg-road-new-year-celebrations-2-2025-12-31-12-13-11.jpg)
ಬೆಂಗಳೂರಿನಲ್ಲಿ ಇಂದು ಎಣ್ಣೆ ಪ್ರಿಯರಿಗೆ ರಾಜಾತಿಥ್ಯ!
ಬೆಂಗಳೂರಿನಲ್ಲಿ ಇಂದು ಎಣ್ಣೆ ಪ್ರಿಯರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ರಾಜ್ಯ ಸರ್ಕಾರ, ಪೊಲೀಸರಿಂದ ರಾಜಾತಿಥ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಂಗಳೂರಿನಲ್ಲಿ ಎಣ್ಣೆ ಪ್ರಿಯರಿಗೆ ಏನೇನು ಸೌಲಭ್ಯ ಇವೆ ಗೊತ್ತಾ?
ಎಣ್ಣೆ ಹೊಡೆದ ಮೇಲೆ ರಸ್ತೆಯಲ್ಲಿ ತೂರಾಡಿ ಬಿದ್ದರೇ ಮನೆಗೆ ಕಳಿಸಲು ಸರ್ಕಾರದಿಂದಲೇ ವಾಹನದ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಎಣ್ಣೆ ಹೊಡೆದ ಮೇಲೆ ಆರೋಗ್ಯ ಕೈ ಕೊಟ್ಟರೇ, ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಗಳು ರೆಡಿ ಆಗಿ ಇರುತ್ತಾವೆ. ಎಣ್ಣೆ ಹೊಡೆದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್ ಮೆಂಟ್ ನೀಡಲಾಗುತ್ತೆ. ನೋ ಬೆಡ್ ಚಾರ್ಜ್.
ಇನ್ನೂ ಬೆಂಗಳೂರಿನಲ್ಲಿ ಎಣ್ಣೆ ಹೊಡೆದು ಮನೆಗೆ ಹೋಗಲಾಗದೇ, ತಾವು ಇರುವ ಜಾಗದಲ್ಲೇ ವಿಶ್ರಾಂತಿ ಮಾಡಲು ವ್ಯವಸ್ಥೆ ಕೂಡ ಮಾಡಲಾಗಿದೆ. ಬೆಂಗಳೂರಿನಲ್ಲಿ ಸುಮಾರು 15 ಸ್ಥಳಗಳಲ್ಲಿ ರೆಸ್ಟಿಂಗ್ ಪ್ಲೇಸ್ ಗಳನ್ನು ಗೃಹ ಇಲಾಖೆ ನಿರ್ಮಿಸಿದೆ. ನಶೆ ಇಳಿಯುವವರೆಗೂ ರೆಸ್ಟಿಂಗ್ ಪ್ಲೇಸ್ ನಲ್ಲಿ ಇದ್ದು ಬಳಿಕ ಮನೆಗೆ ತೆರಳಬಹುದು. ಇನ್ನೂ ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೂ ಇಂದು ಬಾರ್ ಗಳು ಓಪನ್ ಇದ್ದು ಮದ್ಯಪ್ರಿಯರ ಬಾಟಲಿ ಬೇಡಿಕೆಯನ್ನು ಪೂರೈಸಲಿವೆ. ಎಣ್ಣೆ ಹೊಡೆಯಲು ಕೊರತೆಯಾಗದಂತೆ ರಾತ್ರಿ 1 ಗಂಟೆಯವರೆಗೂ ಬಾರ್ ಗಳಿಗೆ ಹೋಗಿ ಎಣ್ಣೆ ಬಾಟಲಿ ಖರೀದಿಸಿ ಮನೆ, ಪಾರ್ಟಿಗಳಿಗೆ ತೆಗೆದುಕೊಂಡು ಹೋಗಬಹುದು.
/filters:format(webp)/newsfirstlive-kannada/media/media_files/2025/12/31/mg-road-new-year-celebrations-1-2025-12-31-12-13-41.jpg)
ಬಹುಶಃ ರಾಜ್ಯದಲ್ಲಿ ಎಣ್ಣೆ ಪ್ರಿಯರಿಗೆ ಎಲ್ಲ ವ್ಯವಸ್ಥೆ ಮಾಡಿ ಗೌರವದಿಂದ ನಡೆಸಿಕೊಳ್ಳೋದು ನ್ಯೂ ಹಿಯರ್ ಸಲಬ್ರೇಷನ್ ವೇಳೆ ಮಾತ್ರ. ಏಕೆಂದರೇ, ರಾಜ್ಯ ಸರ್ಕಾರದ ಅತಿ ದೊಡ್ಡ ಆದಾಯ ಸಂಗ್ರಹದ ಮೂಲವೇ ಅಬಕಾರಿ ಇಲಾಖೆ!. ಅಬಕಾರಿ ಇಲಾಖೆಗೆ ಲಿಕ್ಕರ್ ಮಾರಾಟದಿಂದಲೇ ಹೆಚ್ಚಿನ ಆದಾಯ ಬರುತ್ತೆ. 2025-26 ರಲ್ಲಿ ರಾಜ್ಯದ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ ಆದಾಯ ಸಂಗ್ರಹದ ಗುರಿ ನೀಡಲಾಗಿದೆ. ನೋಂದಾಣಿ, ಮುದ್ರಾಂಕ ಇಲಾಖೆ, ವಾಣಿಜ್ಯ ಇಲಾಖೆಗೆ ಹೋಲಿಸಿದರೇ, ಅಬಕಾರಿ ಇಲಾಖೆಯಿಂದ ಉತ್ತಮ ಆದಾಯ ಸಂಗ್ರಹವಾಗುತ್ತಿದೆ. ಆದಾಯ ಸಂಗ್ರಹದಲ್ಲಿ ಟಾರ್ಗೆಟ್ ತಲುಪುತ್ತಿರುವುದು ಅಬಕಾರಿ ಇಲಾಖೆ ಮಾತ್ರ. ಅಬಕಾರಿ ಇಲಾಖೆಯ ಆದಾಯವೇ ರಾಜ್ಯ ಸರ್ಕಾರದ ಪ್ರಮುಖ ಆದಾಯದ ಮೂಲ. ಹೀಗಾಗಿ ಎಣ್ಣೆ ಪ್ರಿಯರನ್ನು ಹೊಸ ವರ್ಷಾಚರಣೆ ವೇಳೆ ಗೌರವದಿಂದ ನಡೆಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೊಸ ವರ್ಷಕ್ಕೆ ಈ ಗೌರವ, ಸೌಲಭ್ಯ, ರಾಜ ಮರ್ಯಾದೆ ಸೀಮಿತವಾಗದೇ ವರ್ಷಪೂರ್ತಿ ಇರಲಿ ಅನ್ನೋದು ಎಣ್ಣೆಪ್ರಿಯರ ಬೇಡಿಕೆ!!.
/filters:format(webp)/newsfirstlive-kannada/media/media_files/2025/12/31/mg-road-new-year-celebrations-2025-12-31-12-14-15.jpg)
ಬೆಂಗಳೂರಿನಲ್ಲಿ ವಿಶೇಷವಾಗಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಜಯನಗರ, ಶಿವಾಜಿನಗರ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ, ಪಾರ್ಟಿಗಳು ಜೋರಾಗಿ ನಡೆಯುತ್ತಾವೆ. ಈ ಭಾಗದಲ್ಲೇ ಮದ್ಯಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪಾರ್ಟಿಗಳನ್ನು ಮಾಡುತ್ತಾರೆ.
ಎಣ್ಣೆ ಪ್ರಿಯರ ರಕ್ಷಣೆಗಾಗಿಯೇ ಬೆಂಗಳೂರಿನಲ್ಲಿ ಇಂದು ಹೆಚ್ಚಿನ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ಯುವತಿಯರ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ರಸ್ತೆಗಳಿಗೆ ನಿಯೋಜಿಸಲಾಗುತ್ತಿದೆ. ನಗರದ ಮೂಲೆ ಮೂಲೆಯಲ್ಲೂ ಪೊಲೀಸರ ಸರ್ಪಗಾವಲು ಇರಲಿದೆ.
ಬೆಂಗಳೂರನಲ್ಲಿ ಇಂದು ಜನರ ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ಬೆಂಗಳೂರನಲ್ಲಿ 6 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಿದ್ದು, ಕಮ್ಯಾಂಡ್ ಕಂಟ್ರೋಲ್ ರೂಮು ಮೂಲಕ ಜನರ ಮೇಲೆ, ಜನದಟ್ಟಣೆಯ ಮೇಲೆ ಪೊಲೀಸರು ನಿಗಾವಹಿಸಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us