/newsfirstlive-kannada/media/media_files/2026/03/03/siddapura-police-station-have-5-crore-rs-2026-03-03-13-52-17.jpg)
ಕಳ್ಳರ ಭಯಕ್ಕೆ ಪ್ರತಿನಿತ್ಯ ಪೊಲೀಸ್ ಠಾಣೆಯೇ ಕೆಲ ಗಂಟೆಗಳ ಕಾಲ ಕ್ಲೋಸ್ ಆಗುವ ಅಚ್ಚರಿಯ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ನಡೆಯುತ್ತಿದೆ. ತಡರಾತ್ರಿ ಆದ್ರೆ ಸಾಕು ಬೆಂಗಳೂರಿನಲ್ಲಿ ಆ ಪೊಲೀಸ್ ಠಾಣೆಯ ಗೇಟ್ ಕ್ಲೋಸ್ ಆಗುತ್ತೆ. ರಾತ್ರಿ 2 ಘಂಟೆಯ ನಂತರ ಪೊಲೀಸ್ ಠಾಣೆಯ ಗೇಟ್ ಅನ್ನು ಪೊಲೀಸರು ಕಾಯುತ್ತಾರೆ.
ಹಾಗಾದ್ರೆ ಪೊಲೀಸ್ ಠಾಣೆ ಕ್ಲೋಸ್ ಮಾಡುತ್ತಿರೋದಕ್ಕೆ ಕಾರಣ ಆದ್ರು ಏನು..? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಓದಿ.
ಪ್ರತಿದಿನ ಯಾವ ಪೊಲೀಸ್ ಸ್ಟೇಷನ್ ಹಾಗಾದ್ರೆ ಕ್ಲೋಸ್ ಆಗುತ್ತಿದೆ ಗೊತ್ತಾ.! ಇದು ಇಡೀ ಬೆಂಗಳೂರನ್ನೆ ಬೆಚ್ಚಿ ಬೀಳಿಸಿದ್ದ ಸಿದ್ದಾಪುರ 7 ಕೋಟಿ ರಾಬರಿ ಕೇಸ್. ರಾಬರಿ ಆದ ಹಣವನ್ನೆಲ್ಲಾ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ರಿಕವರಿ ಮಾಡಿದ್ದರು. ನಾಲ್ಕೈದು ತಂಡಗಳಿಂದ ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ರಿಕವರಿ ಆದ ಹಣವನ್ನೆಲ್ಲಾ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿಯೇ ಪೊಲೀಸರು ಇರಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆ ಯಲ್ಲೇ ರಾಬರಿಯಾಗಿದ್ದ ಐದು ಕೋಟಿಗೂ ಅಧಿಕ ಹಣ ಇದೆ. ಇದರಿಂದ ಪ್ರತಿದಿನ ಭಯದಲ್ಲಿಯೇ ಪೊಲೀಸ್ ಠಾಣೆಯಲ್ಲಿಯೇ ನೈಟ್ ಬೀಟ್ ಸಿಬ್ಬಂದಿಗಳು ಇರುವಂತಾಗಿದೆ. ಯಾವುದೇ ಪ್ರಾಪರ್ಟಿಯನ್ನು ಸೀಜ್ ಮಾಡಿದ ನಂತರ PF ಹಾಕಿ ಅದನ್ನು ಕೋರ್ಟ್ ಗೆ ಕಳಿಸಲಾಗುತ್ತದೆ. ಈ ಪ್ರಕರಣದಲ್ಲಿಯೂ ಸಹ ರಾಬರಿಯಾಗಿದ್ದ ಹಣವನ್ನೆಲ್ಲಾ ರಿಕವರಿ ಮಾಡಿ ಇದೀಗ ಸೀಜ್ ಮಾಡಲಾಗಿದೆ. ಅದಕ್ಕೆ ಕಾನೂನಾತ್ಮಕವಾಗಿ PF ಸಹ ಹಾಕಿ ಕೋರ್ಟ್ ಗೆ ಅಪ್ಲಿಕೇಶನ್ ಸಹ ಪೊಲೀಸರು ಕಳಿಸಿದ್ದಾರೆ. ಈಗ ಇದು ನಮ್ಮದೇ ಹಣ ಎಂದು CMS ಕಂಪನಿಯ ಅಧಿಕಾರಿಗಳು ಕೋರ್ಟ್ ಮೊರೆ ಹೋಗಬೇಕು. ಕೋರ್ಟ್ ಗೆ CMS ಅಧಿಕಾರಿಗಳು ಅಪ್ಲಿಕೇಶನ್ ಹಾಕಬೇಕು. ನಂತರ ಕೋರ್ಟ್ ಅದನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ಹಣ ನೀಡುವಂತೆ ಪೊಲೀಸರಿಗೆ ನೊಟೀಸ್ ನೀಡುತ್ತೆ. ಆದ್ರೆ ಈ ಪ್ರಕರಣದಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಹೀಗಾಗಿ ಅಷ್ಟು ದೊಡ್ಡ ಮಟ್ಟದ ಹಣ ಇರುವುದರಿಂದ ಪೊಲೀಸ್ ಠಾಣೆಯಲ್ಲಿ ರಾತ್ರಿ ವೇಳೆಯಲ್ಲಿ ಗೇಟ್ ಕ್ಲೋಸ್ ಮಾಡಲಾಗುತ್ತಿದೆ. ಯಾವುದೇ ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ಠಾಣೆಗೆ ಬಂದರೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತೆ. ಒಂದು ವೇಳೆ ಸಾರ್ವಜನಿಕರು ದೂರು ನೀಡಲು ಠಾಣೆಗೆ ಬಂದರೆ ಮಾತ್ರ ಒಳಗೆ ಬಿಡಲಾಗುತ್ತಿದೆ.
/filters:format(webp)/newsfirstlive-kannada/media/media_files/2026/03/03/siddapura-police-station-have-5-crore-rs-1-2026-03-03-13-54-29.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us