/newsfirstlive-kannada/media/media_files/2025/11/17/road-sweeping-machine-rent-scam-2025-11-17-18-09-48.jpg)
ರಸ್ತೆ ಕಸ ಗುಡಿಸುವ ಯಂತ್ರ ಬಾಡಿಗೆಗೆ 613 ಕೋಟಿ ವೆಚ್ಚ!
ಇದು ಜಿಬಿಎನಲ್ಲಿ ನಡೆಯುತ್ತಿರೋ ಅತಿ ದೊಡ್ಡ ಹಗರಣ ಎಂದರೂ ತಪ್ಪಿಲ್ಲ. ಕಸ ಗುಡಿಸೋ ನೆಪದಲ್ಲಿ ಹಣ ಗುಡಿಸೋ ಕೆಲಸ ನಡೆಯುತ್ತಿದೆ. ಸರ್ಕಾರದ ಈ ಬೃಹತ್ ಲೂಟಿ ಪ್ಲಾನ್ ಸೂತ್ರದಾರರು ಯಾರು..? ನ್ಯೂಸ್​ಫಸ್ಟ್ ಗ್ರೇಟರ್ ಬೆಂಗಳೂರು ಅಥಾರಿಟಿಯ ಕರ್ಮಕಾಂಡವನ್ನು ಈಗ ಬಯಲು ಮಾಡ್ತಿದೆ.
ಸರ್ಕಾರ & ಜಿಬಿಎಗೆ ಈ ಐಡಿಯಾ ಕೊಟ್ಟುವರ್ಯಾರು..? ಎಂಬುದು ಗೊತ್ತಿಲ್ಲ. ಇದು ಕಂಟ್ರ್ಯಾಕ್ಟರ್ ಮಾಫಿಯಾಗೆ ಮಣೆನಾ..? ಅಭಿವೃದ್ದಿ ಸೂತ್ರನಾ? ಎಂಬುದನ್ನು ತಿಳಿದವರೇ ಹೇಳಬೇಕು. ಕಸ ಸಮಸ್ಯೆ ನಿವಾರಣೆಗೆ ದುಂದುವೆಚ್ಚಕ್ಕೆ ಸರ್ಕಾರ ಮುಂದಾಗಿರೋದ್ಯಾಕೆ..? ಎಂಬ ಪ್ರಶ್ನೆ ಉದ್ಭವವಾಗಿದೆ.
7 ವರ್ಷಗಳ ಅವಧಿಗೆ 46 ರಸ್ತೆ ಕಸ ಗುಡಿಸುವ ಯಂತ್ರಗಳ ಬಾಡಿಗೆಯಾಗಿ 613 ಕೋಟಿ ರೂಪಾಯಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ರಸ್ತೆಗಳ ಕಸ ಗುಡಿಸುವ ಯಂತ್ರಕ್ಕೆ 613 ಕೋಟಿ ಬಾಡಿಗೆ ನೀಡಲಾಗುತ್ತಿದೆ. ಮುಖ್ಯ ರಸ್ತೆ, ಉಪಮುಖ್ಯ ರಸ್ತೆ ಸ್ವಚ್ಚತೆಗಾಗಿ ಕಸಗುಡಿಸುವ ಯಂತ್ರಗಳ ಬಾಡಿಗೆಗೆ ಪಡೆಯಲಾಗುತ್ತಿದೆ. ಜನರ ತೆರಿಗೆ ದುಡ್ಡನ್ನ ಸರ್ಕಾರ ಪೋಲು ಮಾಡ್ತಿದ್ಯಾ..? ಇಂತಹ ನಿರ್ಧಾರಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ಯಾಕೆ..? ಕಮಿಷನ್ ಆಸೆಯೋ.. ಬೆಂಗಳೂರು ಸ್ಚಚ್ಚತೆ ಆದ್ಯತೆಯೋ..? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವವಾಗಿವೆ. ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೂ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡಲಾಗಿದೆ. ಈ ಅನುಮೋದನೆಯೇ ಈಗ ವಿವಾದವನ್ನು ಹುಟ್ಟು ಹಾಕಿದೆ. ಕಮೀಷನ್ ಹಣದ ಆಸೆಗಾಗಿ ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.
/filters:format(webp)/newsfirstlive-kannada/media/media_files/2025/11/17/road-sweeping-machine-rent-scam02-2025-11-17-18-12-10.jpg)
613 ಕೋಟಿ ಬಾಡಿಗೆ..! ಇದರ 10% ಹಣದಲ್ಲಿ ಹೊಸ ಮಶಿನ್​ಗಳನ್ನೇ ಖರೀದಿಸಬಹುದು..! ಒಂದು ಸಾಮಾನ್ಯ ಕಸ ಗುಡಿಸುವ ಯಂತ್ರದ ಬೆಲೆ 20 ರಿಂದ 40 ಲಕ್ಷ ರೂಪಾಯಿ ಮಾತ್ರ. ದೊಡ್ಡದಾದ ಸ್ವೀಪಿಂಗ್ ಮೆಷೀನ್ ಲಾರಿಗಳ ಬೆಲೆ 80 ರಿಂದ 90 ಲಕ್ಷ ರೂ. ಮಾತ್ರ. ಒಂದು ಸ್ವೀಪಿಂಗ್​​ ಮೆಶಿನ್​​​ ಬೆಲೆ 1 ಕೋಟಿ ಅಂದ್ರೂ 46 ಮೆಶಿನ್​ಗಳಿಗೆ 46 ಕೋಟಿ ರೂಪಾಯಿ ಆಗುತ್ತೆ.
ಒಂದು ಸ್ವೀಪಿಂಗ್​​ ಮೆಶಿನ್​​ ನಿರ್ವಹಣೆಗೆ ವರ್ಷಕ್ಕೆ 10 ಲಕ್ಷ ರೂ. ಅಂದ್ರೂ 46 ಲಾರಿಗಳಿಗೆ ವರ್ಷಕ್ಕೆ 4.6 ಕೋಟಿ ರೂಪಾಯಿ ಬಾಡಿಗೆ ನೀಡಬಹುದು. 46 ಲಾರಿಗಳ 7 ವರ್ಷ ನಿರ್ವಹಣೆಗೆ 32 ಕೋಟಿ 20 ಲಕ್ಷ ರೂಪಾಯಿ ಖರ್ಚಾಗುತ್ತೆ.
ಕಸಗುಡಿಸುವ ಯಂತ್ರಗಳ ಖರೀದಿ ಮೊತ್ತ 46 ಕೋಟಿ, ನಿರ್ವಹಣೆ ವೆಚ್ಚ 33 ಕೋಟಿ ಅಂದ್ರೂ 78 ಕೋಟಿ ರೂಪಾಯಿ ಮಾತ್ರ ಆಗುತ್ತೆ. ಹೀಗಿರುವಾಗ 613 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಡಿಗೆ ಪಡೆತೀರೋದ್ಯಾಕೆ..? ಇನ್ನೂಳಿದ ಹೆಚ್ಚುವರಿ 535 ಕೋಟಿ ದುಂದು ವೆಚ್ಚ ಮಾಡಲು ಸರ್ಕಾರ ಮುಂದಾಗಿರೋದ್ಯಾಕೆ..? ಈ ಹೆಚ್ಚುವರಿ 535 ಕೋಟಿ ತೆರಿಗೆ ಹಣ ಯಾರ ಜೇಬಿಗೆ..? ಈ ದುಂದುವೆಚ್ಚದ ಯೋಜನೆಗೆ ಸರ್ಕಾರವೇ ಉತ್ತರಿಸಬೇಕು.
Bengaluru has 26 sweeping machines lying unused in BBMP yards, yet this @INCKarnataka government, headed by our finance-loving DCM, now wants to blow ₹613 crore to rent 46 more at ₹1.9 crore per machine per year, even though the same machines cost only ₹1.3–3 crore to buy… pic.twitter.com/yIWErpy7r7
— Nikhil Kumar (@Nikhil_Kumar_k) November 17, 2025
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us