/newsfirstlive-kannada/media/media_files/2025/11/22/siddapura-robberry-case-money-recovery-2025-11-22-17-41-21.jpg)
ಪೊಲೀಸರಿಂದ 7 ಕೋಟಿ ರೂ. ಹಣ ವಶಕ್ಕೆ
ಕೈಯಲ್ಲಿ ಕೋಟಿ ಕೋಟಿ ಹಣ, ಖರ್ಚು ಮಾಡಿದ್ದು ಕೇವಲ ಒಂದು ಲಕ್ಷ! ಬೆಂಗಳೂರು ನಗರದಲ್ಲಿ ಕಳೆದ ವಾರ ನಡೆದಿದ್ದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಆರೋಪಿಗಳು ಖರ್ಚು ಮಾಡಿರೋದು ಬರೀ ಒಂದು ಲಕ್ಷ ರೂಪಾಯಿ ಮಾತ್ರ. ದರೋಡೆ ಕೇಸ್ ಆರೋಪಿಗಳ ವಿಚಾರಣೆ ವೇಳೆ ಬರೀ ಒಂದು ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ಇದುವರೆಗೂ ದರೋಡೆಯಾಗಿದ್ದ 7.11 ಕೋಟಿ ರೂಪಾಯಿಯ ಪೈಕಿ 7 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ 10 ಲಕ್ಷ ರೂಪಾಯಿ ಮಾತ್ರ ಆರೋಪಿಗಳಿಂದ ವಶಪಡಿಸಿಕೊಳ್ಳೋದು ಬಾಕಿ ಇದೆ.
ದರೋಡೆ ಮಾಡಿದ ಬಳಿಕ ಆರೋಪಿಗಳು ಕಾರ್ ಗಳಲ್ಲಿ ಹೊಸಕೋಟೆ ಟೋಲ್ ಗೇಟ್ ತಪ್ಪಿಸಿ, ಬೇರೆ ಹಳ್ಳಿ ಮಾರ್ಗಗಳ ಮೂಲಕ ಆಂಧ್ರ, ತಮಿಳುನಾಡು ಕಡೆಗೆ ಹೋಗಿದ್ದಾರೆ. ಆದರೇ, ಪೊಲೀಸರು ಬೆನ್ನು ಬಿದ್ದಿದ್ದರಿಂದ ಎಲ್ಲಿಯೂ ನೆಲೆ ನಿಲ್ಲಲಾಗದೇ, ದರೋಡೆ ಮಾಡಿದ್ದ ಹಣವನ್ನು ಸಹ ಖರ್ಚು ಮಾಡಲಾಗದೇ ಹಾಗೆ ಇಟ್ಟುಕೊಂಡಿದ್ದರು. ಒಂದೆರೆಡು ಗಂಟೆ ಎಲ್ಲಿಯೂ ಆರೋಪಿಗಳು ನಿಂತಿಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪರಾರಿಯಾಗುವುದರಲ್ಲೇ ಕಾಲ ಕಳೆದಿದ್ದಾರೆ. ದರೋಡೆ ಮಾಡಿದ್ದ ಗ್ಯಾಂಗ್ ನಲ್ಲಿ ಏಳು ಮಂದಿ ಇದ್ದರು. ಏಳೂ ಮಂದಿಯೂ ಒಂದು ಲಕ್ಷ ರೂಪಾಯಿ ಹಣವನ್ನು ಮಾತ್ರ ಖರ್ಚು ಮಾಡಿದ್ದಾರೆ.
40 ಸಾವಿರ ಬೆಲೆಯ ಓನ್ ಪ್ಲಸ್ ಮೊಬೈಲ್, 20 ಸಾವಿರ ಬೆಲೆಯ ಮತ್ತೊಂದು ಮೊಬೈಲ್ ಫೋನ್ ಹಾಗೂ ಎಸ್ಕೇಪ್ ವೇಳೆ ಅಲ್ಲಿ ಇಲ್ಲಿ ನೆರವಾಗುವವರಿಗೆ ನೀಡಿದ ಒಂದಷ್ಟು ಹಣ,… ವಾಹನಕ್ಕೆ ಹತ್ತು ಸಾವಿರ ಮೌಲ್ಯದ ಡೀಸೆಲ್, ಊಟ ತಿಂಡಿ, ಮದ್ಯದ ಖರ್ಚು ವೆಚ್ಚ 25 ಸಾವಿರ ರೂಪಾಯಿ ಸೇರಿದಂತೆ ಒಂದು ಲಕ್ಷ ರೂಪಾಯಿ ಮಾತ್ರ ಖರ್ಚಾಗಿದೆ.
/filters:format(webp)/newsfirstlive-kannada/media/media_files/2025/11/23/robbery-2025-11-23-11-14-49.jpg)
ಆರೋಪಿಗಳ ವಿಚಾರಣೆ ವೇಳೆ ಹಣದ ಬಗ್ಗೆ ಈ ಮಾಹಿತಿಯನ್ನು ದರೋಡೆಕೋರರ ಗ್ಯಾಂಗ್ ಪೊಲೀಸರ ಎದುರು ಬಿಚ್ಚಿಟ್ಟಿದೆ. ಪೊಲೀಸ್ ತನಿಖೆ ವೇಗ, ಬಿಗಿ ಭದ್ರತೆ, ಅಲರ್ಟ್ ನಿಂದ ಖರ್ಚು ಮಾಡಲಾಗದೆ ಒದ್ದಾಟ ನಡೆಸಿದ್ದಾರೆ. ಈಗಾಗಲೇ ಎಲ್ಲಾ ಹಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ 10 ಲಕ್ಷ ರೂಪಾಯಿ ಹಣವನ್ನು ಮಾತ್ರ ವಶಪಡಿಸಿಕೊಳ್ಳೋದು ಬಾಕಿ ಇದೆ. ಆರೋಪಿಗಳಲ್ಲಿ ಒಬ್ಬ 10 ಲಕ್ಷ ರೂಪಾಯಿಯನ್ನು ತಾನು ಮಾಡಿದ್ದ ಸಾಲ ತೀರಿಸಲೆಂದು ತನ್ನ ಸಂಬಂಧಿಯೊಬ್ಬರಿಗೆ ನೀಡಿದ್ದಾನೆ. ಆದರೇ, ಈ ಸಂಬಂಧಿ ಇದು ದರೋಡೆಯ ಹಣ ಎಂದು ಗೊತ್ತಾದ ಮೇಲೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಆತನನ್ನು ಪತ್ತೆ ಹಚ್ಚಿ ಬಾಕಿ ಉಳಿದ 10 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲು ಪೊಲೀಸರು ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ 7.11 ಕೋಟಿ ರೂಪಾಯಿ ದರೋಡೆ ಕೇಸ್ ನಲ್ಲಿ ಶೇ.100 ರಷ್ಟು ಹಣವನ್ನು ವಶಪಡಿಸಿಕೊಳ್ಳಬೇಕೆಂದು ಇನ್ನೂ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/11/23/7-crore-robbery-5-2025-11-23-17-59-05.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us