/newsfirstlive-kannada/media/media_files/2026/01/01/new-year-bengaluru-2026-01-01-00-43-13.jpg)
ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಪಬ್ ಒಂದರಲ್ಲಿ ಗಲಾಟೆ ಆಗಿದೆ. ಕೆಲವು ಕಿಡಿಗೇಡಿ ಯುವಕರು ಪಬ್‌ನ ಮಹಿಳಾ ಸಿಬ್ಬಂದಿ ಜೊತೆ ಗಲಾಟೆ ಮಾಡಿದ್ದಾರೆ. ಕುಡಿದು ಬಂದ ಯುವಕರು ಅನುಚಿತ ವರ್ತನೆ ಮಾಡಿದ್ದಾರೆ.
ಕೂಡಲೇ ಎಚ್ಚೆತ್ತ ಸಿಬ್ಬಂದಿ ಪಬ್‌ನ ಇತರೆ ಸಿಬ್ಬಂದಿ ಯುವಕರನ್ನು ಪ್ರಶ್ನಿಸಿದ್ದಾರೆ. ನಂತರ ಪರಿಸ್ಥಿತಿ ತಿಳಿಗೊಂಡಿದೆ. ಆದರೆ ಸಂಭ್ರಮದ ನಡುವೆ ಹಠಾತ್ ಗಲಾಟೆ ಮಾಡಿದ್ದರಿಂದ ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಂದ್ಹಾಗೆ ಚರ್ಚ್ ಸ್ಟ್ರೀಟ್ ನ ಫ್ಲೋ ಪಬ್‌ನಲ್ಲಿ ಗಲಾಟೆ ಆಗಿದೆ.
ಹೊಸ ವರ್ಷಾಚರಣೆಯ ಸಂಭ್ರಮ ಸವಿಯಲು ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೆಡ್ ರಸೆ, ಇಂದಿರಾ ನಗರದಲ್ಲಿ ಸಿಕ್ಕಾಪಟ್ಟೆ ಜಮಾಯಿಸಿದ್ದರು. ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಪಟಾಕಿ ಸಿಡಿಡಿ, ಡಿಜೆಗೆ ಡ್ಯಾನ್ಸ್ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದರು.
ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲಿ RBI ನಿಂದ ಕೆಟ್ಟ ಸುದ್ದಿ.. ಜನರಿಗೆ ಯಾವುದೇ ಪರಿಹಾರವಿಲ್ಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us