/newsfirstlive-kannada/media/media_files/2026/01/14/bangalore-kr-market-flower-sale-2-2026-01-14-13-09-26.jpg)
ವರ್ಷದ ಮೊದಲ ಹಬ್ಬಕ್ಕೆ ರಾಜಧಾನಿ ಸಜ್ಜಾಗಿದೆ. ಎಳ್ಳು ಬೆಲ್ಲ ಹಂಚಿ ಸಂಕ್ರಾಂತಿ ಬರಮಾಡಿಕೊಳ್ಳಲು ಸಿಟಿ ಜನ ರೆಡಿಯಾಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಾಳಿನ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜನರಿಂದ ಹೂವು ಹಣ್ಣು ಖರೀದಿ ಭರಾಟೆ ಜೋರಾಗಿದೆ. ಕೆ. ಆರ್. ಮಾರುಕಟ್ಟೆಯಲ್ಲಿ ಹೂವು ಹಣ್ಣು ಖರೀದಿ ಭರಾಟೆ ಜೋರಾಗಿದೆ. ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ಹೆಚ್ಚಳವಾಗಿದೆ.
ಎಷ್ಟಿದೆ ಹೂವು ಹಣ್ಣುಗಳ ಬೆಲೆ?
ಕನಕಾಂಬರ: 700-800 ರೂ.
ಕಾಕಡ: 500-600 ರೂ.
ಸೇವಂತಿ: 70 ರೂ.
ಗುಲಾಬಿ: 80 ರೂ.
ಚಂಡು: 30-40 ರೂ.
ಕಬ್ಬು ಜೋಡಿ: 150-250 ರೂ.
ಬೆಲ್ಲ (ಒಂದು ಕೆ.ಜಿ.): 80 ರೂ.
ಸೇಬು ಹಣ್ಣು: 160 ರೂ.
ದಾಳಿಂಬೆ ಹಣ್ಣು: 140 ರೂ.
ಕಡಲೆಕಾಯಿ: 100 ರೂ.
ಅವರೆಕಾಯಿ: 60 ರೂ.
ರೆಡಿಮೇಡ್ ಎಳ್ಳು ಬೆಲ್ಲಕ್ಕೂ ಡಿಮ್ಯಾಂಡ್ ಇದೆ.
ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಾಳಿನ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ.
ಬೆಂಗಳೂರಿನ ಕೆ. ಆರ್. ಮಾರುಕಟ್ಟೆಯಲ್ಲಿ ಜನಜಂಗುಳಿ ಜಾಸ್ತಿ ಇದೆ. ಹೂವು, ಹಣ್ಣು ಖರೀದಿಗೆ ಜನರು ಮುಂದಾಗಿದ್ದಾರೆ. ಮುಂಜಾನೆ 5 ಗಂಟೆಯಿಂದಲೂ ಖರೀದಿ ಭರಾಟೆ ನಡೆಯುತ್ತಿದೆ. ಹಬ್ಬಕ್ಕೆ ಹೂವು, ಹಣ್ಣು, ಕಡ್ಲೆಕಾಯಿ, ಗೆಣಸು, ಅವರೆಕಾಯಿಯನ್ನು ಜನರು ಖರೀದಿ ಮಾಡುತ್ತಿದ್ದಾರೆ. ಕೆ.ಆರ್. ಮಾರುಕಟ್ಟೆ, ಅವೆನ್ಯೂ ರಸ್ತೆ ತುಂಬಾ ಜನಜಂಗುಳಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us