/newsfirstlive-kannada/media/media_files/2025/12/05/ksdl-sandal-oil-purchase-scam-2025-12-05-18-28-29.jpg)
ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (KSDL) ದಲ್ಲಿ ಬಳಸುವ ಕಚ್ಚಾ ತೈಲದ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಆರೋಪಿಸಿದ್ದಾರೆ. ಈ ಬಗ್ಗೆ ತಾವು 800 ಪೇಜು ವರದಿಯನ್ನು ಪಡೆದಿದ್ದೇನೆ. 1918ರಲ್ಲಿ ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ ಸಂಸ್ಥೆ ಜಾರಿಗೆ ಬಂದಿತ್ತು. ಸಾಬೂನು ಮತ್ತು ಮಾರ್ಜಕ ತಯಾರಿಕೆಯಲ್ಲಿ ಬಳಸುವ ಕಚ್ಚಾ ತೈಲವಾಗಿ ಶ್ರೀಗಂಧ ತೈಲ ಸರಬರಾಜುವಿನಲ್ಲಿ ಭ್ರಷ್ಟಾಚಾರ ಆಗಿದೆ . ಬೇರೆ ಕಂಪನಿಗೆ ಅವಕಾಶ ನೀಡದೇ ಒಂದೇ ಕಂಪನಿಗೆ ಟೆಂಡರ್ ಗೆ ಅವಕಾಶ ನೀಡಿದ್ದಾರೆ. ಕರ್ನಾಟಕ ಅರೋಮಸ್- Karnataka Aromas ಕಂಪನಿಗೆ ಎರಡು 9 ಸಲ ಟೆಂಡರ್ ಕೊಟ್ಟಿದ್ದಾರೆ . ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ. 2019 ರಲ್ಲಿಯೇ ಈ Karnataka Aromas ಕಂಪನಿ ಬ್ಲಾಕ್ ಲಿಸ್ಟ್ ನಲ್ಲಿತ್ತು . ನಾನು ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು 2022, 2023 ರಲ್ಲಿ ಪತ್ರ ಬರೆದಿದ್ದೆ . ಆಗ ಒಂದು ಕೆ.ಜಿ ಗೆ ಸ್ಯಾಂಡಲ್ ಆಯಿಲ್ ಗೆ 2, 24,655 ರೂಪಾಯಿ ಇತ್ತು. ನಾನು ಪತ್ರ ಬರೆದ ನಂತರ 2025ರಲ್ಲಿ ಸ್ಯಾಂಡಲ್ ಆಯಿಲ್ ಬೆಲೆ ಕೆ.ಜಿ.ಗೆ 93, 116 ರೂಪಾಯಿ ಮಾಡಿದ್ದಾರೆ.
ಅಂದರೆ ಹಿಂದಿನ ಬೆಲೆಗಿಂತ ಕೆ.ಜಿ ಗೆ 1.2 ಲಕ್ಷ ರೂಪಾಯಿ ಕಡಿಮೆ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ . ಈವರೆಗೆ 11,000 ಕೆ.ಜಿ ಸ್ಯಾಂಡಲವುಡ್ ಆಯಿಲ್ ಅನ್ನು ಪ್ರತಿ ಕೆ.ಜಿ.ಗೆ 1.2 ಲಕ್ಷ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಿದ್ದಾರೆ . ಇದರಿಂದ ಕಂಪನಿಗೆ ಸುಮಾರು 132 ಕೋಟಿಗೂ ಹೆಚ್ಚು ನಷ್ಟ ಉಂಟು ಮಾಡಿದೆ . ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ. ಆದರೇ, ಯಾವುದೇ ಉತ್ತರ ಬಂದಿಲ್ಲ.
1700 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿತ್ತು . 11 ಕಂಪನಿಗಳ ಜೊತೆಗೆ ಟೆಂಡರ್ ಕರೆಯಲಾಗಿತ್ತು . ಇದರ ಬಗ್ಗೆ ಪತ್ರ ಬರೆದರೂ ಸಿಎಂರಿಂದ ಯಾವುದೇ ಉತ್ತರ ಬರೆದಿಲ್ಲ . ಇದಕ್ಕೆ ಸಂಬಂಧಿಸಿದಂತೆ SIT ಮೂಲಕ ಆದರೂ ತನಿಖೆ ಮಾಡಿಸಬೇಕು . ಸುಮಾರು 11 ಟೆಂಡರ್ ಗಳ ಪೈಕಿ 1,700 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿತ್ತು . ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ . 1000 ಕೋಟಿಗೂ ಹೆಚ್ಚು ರೂಪಾಯಿ ಅವ್ಯವಹಾರ ಆಗಿದೆ. ಕೈಗಾರಿಕೆ ಇಲಾಖೆಯಡಿ ಬರುವ ಕೆಎಸ್‌ಡಿಎಲ್ ಹಾಗೂ ಸರ್ಕಾರದ ಮೇಲೆ ನೇರ ಆರೋಪವನ್ನು ಕೆ.ಆರ್ ಪೇಟೆ ಶಾಸಕ ಹೆಚ್.ಟಿ ಮಂಜು ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/12/05/ksdl-sandal-oil-purchase-scam02-2025-12-05-18-31-16.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us