/newsfirstlive-kannada/media/media_files/2025/12/01/drumstick-price-rise-2025-12-01-12-39-56.jpg)
ನುಗ್ಗೇಕಾಯಿ ಬೆಲೆ ಪ್ರತಿ ಕೆ.ಜಿ.ಗೆ 600 ರೂಪಾಯಿಗೆ ಏರಿಕೆ!
ನಟ ರವಿಚಂದ್ರನ್ ತಮ್ಮ ಸಿನಿಮಾವೊಂದರಲ್ಲಿ ಕಾಯಿ, ಕಾಯಿ ನುಗ್ಗೇಕಾಯಿ ಮಹಿಮೆಗೆ, ರಾತ್ರಿಪೂರ್ತಿ ನಿದ್ದೆ ಇಲ್ಲ ಕಣ್ಣಿಗೆ ಅಂತ ಹಾಡು ಹಾಡಿದ್ದನ್ನು ನಾವು ನೀವೆಲ್ಲಾ ಕೇಳಿದ್ದೇವೆ. ನುಗ್ಗೇಕಾಯಿ ಬಗ್ಗೆ ನಟ ರವಿಚಂದ್ರನ್ ಸಿನಿಮಾ ಹಾಡು ಕೇಳಿ ಜನರು ಎಂಜಾಯ್ ಮಾಡಿದ್ದರು. ನುಗ್ಗೇಕಾಯಿ ಹಾಡು ಅನ್ನು ಜನರು ಇಂದಿಗೂ ಗುನುಗುನಿಸುತ್ತಿದ್ದಾರೆ.
ಆದರೇ, ಈಗ ನುಗ್ಗೇಕಾಯಿ ಹೆಸರು ಕೇಳಿದರೇ, ಬೆಚ್ಚಿಬೀಳುವಂಥ ಸ್ಥಿತಿ ನಿರ್ಮಾಣವಾಗಿದೆ. ಮನೆ ಮನೆಗಳಲ್ಲಿ ಅಡುಗೆಗೆ ನುಗ್ಗೇ ಕಾಯಿ ಬೇಕೇ ಬೇಕು. ವೆಜಿಟೇರಿಯನ್ ಹೆಚ್ಚಾಗಿ ನುಗ್ಗೇಕಾಯಿ ಬಳಸುತ್ತಾರೆ.
ಆದರೇ, ಕರ್ನಾಟಕದಲ್ಲಿ ನುಗ್ಗೇಕಾಯಿ ಬೆಲೆ ದಾಖಲೆಯ ಬೆಲೆಗೆ ಏರಿಕೆಯಾಗಿ ಜನರಿಗೆ ಶಾಕ್ ನೀಡಿದೆ. ಈ ಹಿಂದೆ ಈರುಳ್ಳಿ ಕಣ್ಣೀರು ತರಿಸುತ್ತೆ ಅಂತ ಜನರು, ಗೃಹಿಣಿಯರು ದೂರುತ್ತಿದ್ದರು. ಆದರೇ, ಈಗ ಈರುಳ್ಳಿ ಸ್ಥಾನವನ್ನು ನುಗ್ಗೇಕಾಯಿ ಆವರಿಸಿಕೊಂಡಿದೆ. ಈ ಭಾರಿ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿದೆ. ಆದರೇ, ನುಗ್ಗೇಕಾಯಿ ಬೆಲೆ ಅಕ್ಷರಶಃ ಗಗನಕ್ಕೇರಿದೆ. ಪ್ರತಿ ಕೆ.ಜಿ. ನುಗ್ಗೇಕಾಯಿ ಬೆಲೆ ಬರೋಬ್ಬರಿ 500 ರೂಪಾಯಿ ಗಡಿ ದಾಟಿ ಪ್ರತಿ ಕೆ.ಜಿ.ಗೆ ಆರು ನೂರು ರೂಪಾಯಿಗೆ ಏರಿಕೆಯಾಗಿದೆ. ಇದನ್ನು ಕೇಳಿ ಗ್ರಾಹಕರು ಅಂತೂ ಕಂಗಾಲಾಗಿದ್ದಾರೆ. ತಮ್ಮ ಬಜೆಟ್ ಇತಿಮಿತಿಯಲ್ಲೇ ಅಡುಗೆ ಮನೆ ಖರ್ಚು ವೆಚ್ಚ ನಿಭಾಯಿಸುವ ಗೃಹಿಣಿಯರಂತೂ ನುಗ್ಗೇಕಾಯಿ ಮುಟ್ಟದೇ ದೂರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಜೋಡಿ ನುಗ್ಗೇಕಾಯಿ ಬೆಲೆ 100 ರೂಪಾಯಿ ಆಗಿದೆ!. ನುಗ್ಗೇಕಾಯಿ ಸಹವಾಹವೇ ಬೇಡ ಎಂದು ಜನರು, ಗ್ರಾಹಕರು ದೂರ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಟಮೋಟೋ ಬೆಲೆ ಅರ್ಧ ಶತಕ ಭಾರಿಸಿದೆ. ಉಳಿದ ತರಕಾರಿಗಳು ನಿಧಾನವಾಗಿ ಶತಕ ಭಾರಿಸುತ್ತಿವೆ. ಬೆಂಗಳೂರಿಗೆ ಈ ಹಿಂದೆ ಪ್ರತಿದಿನ 100 ಟನ್ ನುಗ್ಗೆಕಾಯಿ ಪೂರೈಕೆ ಆಗುತ್ತಿತ್ತು. ಆದರೆ ಇದೀಗ ವಾತಾವರಣ ಬದಲಾವಣೆಯಿಂದ ನುಗ್ಗೆಕಾಯಿ ಬೆಳೆ ಸರಿಯಾಗಿ ಬಂದಿಲ್ಲವಂತೆ. ಹಾಗಾಗಿ ಪ್ರತಿದಿನ ನಗರಕ್ಕೆ 30 ರಿಂದ 40 ಟನ್ ಮಾತ್ರ ನುಗ್ಗೆಕಾಯಿ ಪೂರೈಕೆ ಆಗುತ್ತಿದೆ. ಹೋಲ್ ಸೇಲ್ ನಲ್ಲಿ ಪ್ರತಿ ಕೆ.ಜಿ. ನುಗ್ಗೇಕಾಯಿ 500 ರುಪಾಯಿಗೆ ಮಾರಾಟವಾಗುತ್ತಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಪ್ರತಿ ಕೆ.ಜಿ.ಗೆ 600 ಗೆ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಶೇಕಡ 60% ರಷ್ಟು ನುಗ್ಗೆಕಾಯಿ ಪೂರೈಕೆ ಕುಸಿತ ಕಂಡಿದೆ. ತಮಿಳುನಾಡಿನಿಂದ ನುಗ್ಗೆಕಾಯಿ ಪೂರೈಕೆ ಬರುವವರೆಗೂ ದರದಲ್ಲಿ ಕಡಿಮೆ ಆಗುವುದಿಲ್ಲ ಎಂದು ವರ್ತಕರು ಹೇಳುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ರೈತರು ಹೆಚ್ಚಾಗಿ ನುಗ್ಗೇಕಾಯಿ ಬೆಳೆ ಬೆಳೆದಿದ್ದು, ಜನವರಿ, ಫೆಬ್ರವರಿಯಲ್ಲಿ ಒಂದಷ್ಟು ಬೆಲೆ ಕಡಿಮೆ ಆಗಲಿದೆ ಅಂತಾ ಹೋಲ್ ಸೇಲ್ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಇತ್ತ ಒಂದು ಕೆ.ಜಿ ನುಗ್ಗೆಕಾಯಿ 500 ರಿಂದ 600 ರುಪಾಯಿ ಆಗಿರುವ ಕಾರಣದಿಂದ ಗ್ರಾಹಕರು ನುಗ್ಗೆಕಾಯಿ ಖರೀದಿಸಲು ಮುಂದಾಗುತ್ತಿಲ್ಲ. ಬೆಲೆ ಏರಿಕೆ ಎಫೆಕ್ಟ್ ನಿಂದಾಗಿ ಕೆಆರ್ ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಸಿಗುತ್ತಿಲ್ಲ. ವ್ಯಾಪಾರಸ್ಥರು ಯಾರೂ ನುಗ್ಗೆಕಾಯಿ ಮಾರಾಟ ಮಾಡುತ್ತಿಲ್ಲ. ನುಗ್ಗೆಕಾಯಿಗೆ ಅಷ್ಟು ದೊಡ್ಡ ಬಂಡವಾಳ ಹಾಕುವ ಧೈರ್ಯವನ್ನು ವ್ಯಾಪಾರಸ್ಥರು ಮಾಡುತ್ತಿಲ್ಲ. ಒಂದೆರೆಡು ಅಂಗಡಿಯಲ್ಲಿ ಮಾತ್ರ ನುಗ್ಗೆಕಾಯಿ ಸಿಗುತ್ತಿದೆ.
/filters:format(webp)/newsfirstlive-kannada/media/media_files/2025/12/01/drumstick-price-rise-02-2025-12-01-12-42-43.jpg)
40 ಕೆಜಿ ನುಗ್ಗೆಕಾಯಿ ಮೂಟೆ 18 ಸಾವಿರ ರೂಪಾಯಿ ಆಗಿದೆ. ಹೋಲ್ ಸೇಲ್ ನಲ್ಲೇ ಕೆಜಿಗೆ 450-500ರೂ ವರೆಗೂ ಇದೆ . ಗ್ರಾಹಕರಿಗೆ ಕೆಜಿಗೆ 550-600ರೂ ಮಾರಾಟ ಮಾಡಬೇಕಾಗಿದೆ . ಆದರೆ, ಜನ ಅಷ್ಟು ದುಡ್ಡು ಕೊಟ್ಟು ನುಗ್ಗೆಕಾಯಿ ಖರೀದಿ ಮಾಡುತ್ತಿಲ್ಲ. ಸಾಲ ಮಾಡಿ ಬಂಡವಾಳ ಹಾಕಿದ್ದೇನೆ . ಆದರೆ, ಬೆಲೆ ಕೇಳಿ ಯಾರೂ ಖರೀದಿ ಮಾಡುತ್ತಿಲ್ಲ ಎಂದು ವ್ಯಾಪಾರಿ ಅನಂತ್ ಹೇಳಿದ್ದಾರೆ. ನಾನು ಧೈರ್ಯ ಮಾಡಿ ಬಂಡವಾಳ ಹಾಕಿಬಿಟ್ಟೆ. ನಿನ್ನೆನೂ ನುಗ್ಗೆಕಾಯಿ ಮಾರಾಟ ಮಾಡಿದ್ದೆ . ಮೂರು ಸಾವಿರ ವ್ಯಾಪಾರ ಆಯ್ತು. ಇವತ್ತು ಮಾರಾಟ ಮಾಡ್ತಿದ್ದೇನೆ. ಯಾರೂ ಖರೀದಿ ಮಾಡುತ್ತಿಲ್ಲ. ನುಗ್ಗೇಕಾಯಿ ಪೂರೈಕೆಯಾಗುತ್ತಿಲ್ಲ, ತಮಿಳುನಾಡಿನಿಂದ ಜಾಸ್ತಿ ನುಗ್ಗೇಕಾಯಿ ಬರುತ್ತಿತ್ತು. ಆದರೆ, ಈ ಸಲ ಪೂರೈಕೆ ಆಗುತ್ತಿಲ್ಲ. ಮಳೆ ಬಂತು, ನುಗ್ಗೆಕಾಯಿ ಬೆಳೆದಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಯಾರೋ ಒಬ್ಬೊಬ್ಬರು ನುಗ್ಗೆಕಾಯಿ ತಿನ್ನಲೇಬೇಕು ಅಂತ ತಗೊಂಡು ಹೋಗುತ್ತಿದ್ದಾರೆ ಎಂದು ಕೆ.ಆರ್.ಮಾರುಕಟ್ಟೆ ವ್ಯಾಪಾರಿ ಅನಂತ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/01/drumstick-price-rise-03-2025-12-01-12-45-56.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us