/newsfirstlive-kannada/media/media_files/2025/08/21/bmtc-electric-buses-2025-08-21-17-26-13.jpg)
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಂದ ಪದೇ ಪದೇ ಅಪಘಾತ
ಅಪಘಾತದಲ್ಲಿ 10 ವರ್ಷದ ಮಗು ಸಾವು!
ಮಿಲಿಯನಿಯಂ ಸ್ಕೂಲ್‌ನ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದ ತನ್ವೀ ಕೃಷ್ಣ (10) ಇಂದು ಬೆಳಗ್ಗೆ ಶಾಲೆಗೆ ಹೋಗುತ್ತಿದ್ದರು. ತನ್ನ ತಾಯಿ ಹರ್ಷಿತಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದರು. ಹರ್ಷಿತಾ ಸ್ಕೂಟರ್ ಚಾಲನೆ ಮಾಡುತ್ತಿದ್ದರು. ಈ ವೇಳೆ ಮಾರುತಿನಗರದ ಬಳಿ ದ್ವಿಚಕ್ರ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿದ್ದು, ಈ ವೇಳೆ ಬಾಲಕಿ ತನ್ವೀ ಕೃಷ್ಣ ರಸ್ತೆಗೆ ಬಿದ್ದಿದ್ದಾಳೆ. ತಕ್ಷಣ ಹಿಂದಿನಿಂದ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಬಾಲಕಿ ತಲೆ ಮೇಲೆ ಹರಿದಿದೆ. ಬಿಎಂಟಿಸಿ (ನೋಂದಣಿ ಸಂಖ್ಯೆ: KA57 F:5375) ಚಕ್ರ ಬಾಲಕಿಯ ತಲೆ ಮೇಲೆ ಹರಿದಿದೆ. ಈ ರಭಸಕ್ಕೆ ತನ್ವೀ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಾಯಿ ಹರ್ಷಿತಾ ಮತ್ತು ಜೊತೆಗಿದ್ದ ಮತ್ತೊಂದು ಮಗುವಿಗೆ ಯಾವುದೇ ಅಪಾಯ ಆಗಿಲ್ಲ, ಆದರೆ ತಮ್ಮ ಮಗನನ್ನು ಕಣ್ಣೆದುರೇ ಕಳೆದುಕೊಂಡು ತಾಯಿ ಗೋಳಾಡಿದ್ದಾರೆ. ನಾಳೆ ತನ್ವಿಯ ಹುಟ್ಟುಹಬ್ಬ ಇತ್ತು. ಹುಟ್ಟು ಹಬ್ಬದ ಹಿಂದಿನ ದಿನ ತನ್ವಿ ನಡುರಸ್ತೆಯಲ್ಲಿ ಬಿಎಂಟಿಸಿ ಬಸ್ ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಹೆತ್ತ ತಾಯಿಯ ಎದುರು ಬಾಲಕಿ ತನ್ವಿ ಪ್ರಾಣ ಕಳೆದುಕೊಂಡಿದ್ದು ಎಂಥವರ ಮನ ಕುಲಕುವಂಥ ದುರಂತ ನಡೆದು ಹೋಗಿದೆ.
‘ಇವಿ’ ಬಸ್ ಕಂಟಕ ಯಾಕೆ?
ಬೆಂಗಳೂರಿನಲ್ಲಿ ಸರಿಸುಮಾರು 1,500 ಎಲೆಕ್ಟ್ರಿಕ್ ಬಸ್ಗಳಿವೆ. BMTC ಎಲೆಕ್ಟ್ರಿಕ್ ಬಸ್ಗಳಲ್ಲಿ ಚಾಲಕರು ಹೊರಗುತ್ತಿಗೆಯವರು. ಆದರೆ ಎಲೆಕ್ಟ್ರಿಕ್ ಬಸ್ಗಳ ನಿರ್ವಾಹಕರು ಬಿಎಂಟಿಸಿಯವರು. ಇ.ವಿ. ಬಸ್ ಚಾಲಕರನ್ನು ನೇರವಾಗಿ ಬಿಎಂಟಿಸಿ ನೇಮಿಸಿಕೊಂಡಿಲ್ಲ. ಬಿಎಂಟಿಸಿಗೆ ಇ.ವಿ ಬಸ್ ಗಳನ್ನು ಪೂರೈಸಿದ ಕಂಪನಿಗಳೇ ಇ.ವಿ. ಬಸ್ ಚಾಲಕರನ್ನು ನೇಮಿಸಿಕೊಂಡಿದ್ದಾರೆ. ಇ.ವಿ. ಬಸ್ ಚಾಲಕರ ಮೇಲೆ ಬಿಎಂಟಿಸಿಗೂ ನೇರವಾದ ನಿಯಂತ್ರಣ ಇಲ್ಲ. ಇ.ವಿ. ಬಸ್ ಚಾಲಕರು ಬಿಎಂಟಿಸಿ ಕೈ ಕೆಳಗೆ ಕೆಲಸವನ್ನು ಮಾಡುತ್ತಿಲ್ಲ.
ಇ.ವಿ ಬಸ್ ಚಾಲಕರಿಗೆ BMTC ಚಾಲಕರಿಗಿರುವ ನಿಯಮಗಳು ಇಲ್ಲ. BMTC ಬಸ್ ಚಾಲಕರ ನೇಮಕಾತಿ ಮಾಡುವಾಗ ಹಲವು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಈ ಯಾವುದೇ ನಿಯಮ ಇಲ್ಲ. ಬಿಎಂಟಿಸಿ ಚಾಲಕರನ್ನ ಎ, ಬಿ ಹಾಗೂ ಸಿ ಎಂದು ಡಿವೈಡ್ ಮಾಡ್ತಾರೆ. ಸಂಸ್ಥೆಯ ಕಡೆಯಿಂದ ಬಸ್ ಚಾಲಕರಿಗೆ ಟ್ರೈನಿಂಗ್ ಕೊಡಲಾಗುತ್ತದೆ. ಚಾಲಕರಿಗೆ ಒಂದು ವಾರ, 15 ದಿನಗಳ ಕಾಲ ಟ್ರೈನಿಂಗ್ ನಡೆಯುತ್ತೆ. ಸಿಟಿಯಲ್ಲಿ ಡ್ರೈವ್ ಮಾಡೋಕೆ ಸೂಕ್ತವೆನಿಸಿದ್ರೆ, ಅವಕಾಶ ಕೊಡ್ತಾರೆ. ಬಿ & ಸಿ ಕೆಟಗರಿಯಲ್ಲಿದ್ದವರು ಪರ್ಫೆಕ್ಟ್ ಆಗುವವರೆಗೆ ಟ್ರೈನಿಂಗ್ ನೀಡಲಾಗುತ್ತೆ.
ಆದರೇ, ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಯಾವುದೇ ಟ್ರೈನಿಂಗ್ ಇರಲ್ಲ. ಕೇವಲ ಡಿ. ಎಲ್. ತೋರಿಸಿದರೆ ಅಂತವರಿಗೆ ಡ್ರೈವಿಂಗ್ಗೆ ಅವಕಾಶ ನೀಡಲಾಗುತ್ತೆ. ಯಾವುದೇ ನಿಯಮಗಳು ಇಲ್ಲ, ಪ್ರಶ್ನೆ ಮಾಡೋರು ಯಾರು ಇಲ್ಲ. ಬೇಕಾ ಬಿಟ್ಟಿ ಡ್ರೈವಿಂಗ್ ಮಾಡಿ ಆ್ಯಕ್ಸಿಡೆಂಟ್ ಮಾಡ್ತಿರುವ ಆರೋಪ ಇದೆ. ಬಹುತೇಕ ಇವಿ ಬಸ್ ಚಾಲಕರು ಲಾರಿ, ಹೆವಿ ವೆಹಿಕಲ್ಸ್ ಚಾಲಕರು. ಇತ್ತ ಗೇರ್ ಇಲ್ಲದ ಇವಿ ಬಸ್ಗಳು ಸರಿಯಾಗಿ ಓಡಿಸುವಲ್ಲಿ ವಿಫಲವಾಗುತ್ತಿದ್ದಾರೆ. ತಮಗಿಷ್ಟ ಬಂದಂತೆ ಮನಸೋ ಇಚ್ಛೆ ಱಶ್ ಡ್ರೈವಿಂಗ್ ಮಾಡ್ತಾರೆ. BMTC ಚಾಲಕರ ಪ್ರತಿಯೊಂದು ವಿಚಾರದಲ್ಲಿ ಸಂಸ್ಥೆಗೆ ಹಿಡಿತ ಇರುತ್ತೆ. ಇವಿ ಬಸ್ ಚಾಲಕ ಇವತ್ತು ಕೆಲಸಕ್ಕೆ ಬಂದವರು, ನಾಳೆ ಬರದೇ ಇರಬಹುದು. ಆ್ಯಕ್ಸಿಡೆಂಟ್ ಆದ್ರೆ ಬಿಎಂಟಿಸಿ ಎಲೆಕ್ಟ್ರಿಕ್ ಚಾಲಕರು ಸಸ್ಪೆಂಡ್ ಆಗಲ್ಲ. ಎಲೆಕ್ಟ್ರಿಕ್ ಚಾಲಕರನ್ನು ಸೇವೆಯಿಂದ ಸಸ್ಪೆಂಡ್ ಮಾಡಿದ್ರು ಏನೂ ಪ್ರಯೋಜನ ಇಲ್ಲ. ನಾಳೆ ಹೋಗಿ ಎಂದಿನಂತೆ ಲಾರಿ, ಹೆವಿ ವೆಹಿಕಲ್ ಓಡಿಸ್ಕೊಂಡು ಇರ್ತಾರೆ. ಇದೇ ಕಾರಣಕ್ಕೆ ರಾಶ್ ಡ್ರೈವಿಂಗ್ ಮಾಡಿ ಆ್ಯಕ್ಸಿಡೆಂಟ್ ಮಾಡುತ್ತಿರುವ ಆರೋಪ ಇದೆ. ಬಿಎಂಟಿಸಿ ಬಸ್ ಗಳೇ ಜನರ ಪಾಲಿಗೆ ಯಮ ಕಿಂಕರಗಳಾಗಿವೆ.
ಇನ್ನೂ ಬಿಎಂಟಿಸಿ ಬಸ್ ಗಳಿಂದ ಕಳೆದೊಂದು ತಿಂಗಳಲ್ಲಿ 7 ಮಂದಿ ಜೀವ ಕಳೆದುಕೊಂಡಿದ್ದಾರೆ.
ಅದರ ವಿವರ ಇಲ್ಲಿದೆ ನೋಡಿ.
ಘಟನೆ 01 ದಿನಾಂಕ : ಜುಲೈ 18, ಪೀಣ್ಯದಲ್ಲಿ BMTC ಬಸ್ ಗೆ ಸುಮಾ ಎಂಬಾಕೆ ಬಲಿ
ಘಟನೆ 02 ದಿನಾಂಕ : ಜುಲೈ 22 ರೇಷ್ಮೆ ಸಂಸ್ಥೆ ಬಳಿ BMTC ಬಸ್ ಗೆ ಮಹಿಳೆ ಬಲಿ
ಘಟನೆ 03 ದಿನಾಂಕ : ಜುಲೈ 29 ಪೀಣ್ಯ 2ನೇ ಹಂತದಲ್ಲಿ ಬೈಕ್ ಸವಾರ ಬಲಿ
ಘಟನೆ 04 ದಿನಾಂಕ : ಜುಲೈ 30 ಚಾಮರಾಜಪೇಟೆಯಲ್ಲಿ ಬಸ್ ಹರಿದು ಮಗು ಸ್ಥಿತಿ ಚಿಂತಾಜನಕ
ಘಟನೆ 05 ದಿನಾಂಕ : ಜುಲೈ 30 ಮಡಿವಾಳದಲ್ಲಿ ರಸ್ತೆ ದಾಟುವಾಗ ಬಸ್ ಡಿಕ್ಕಿ.. ವೃದ್ಧೆ ಸಾವು
ಘಟನೆ 06 ದಿನಾಂಕ : ಆಗಸ್ಟ್ 13 ರೂಪೇನಾ ಅಗ್ರಹಾರದಲ್ಲಿ ಬಸ್ ಗೆ ಬೈಕ್ ಸವಾರ ಬಲಿ
ಘಟನೆ 07 ದಿನಾಂಕ : ಆಗಸ್ಟ್ 19 ಸಂಜಯ್ ನಗರದಲ್ಲಿ ಬಸ್ ಗೆ ಬೈಕ್ ಸವಾರ ಬಲಿ
ಘಟನೆ 08- ದಿನಾಂಕ-ಆಗಸ್ಟ್ 21-ಮಾರುತಿನಗರದಲ್ಲಿ ಬಸ್ ಗೆ ತನ್ವಿ ಎಂಬ ಬಾಲಕಿ ಬಲಿ
ಹೀಗೆ ಬೆಂಗಳೂರಿನಲ್ಲಿ ಕಳೆದೊಂದು ತಿಂಗಳಿನಲ್ಲಿ 7 ಮಂದಿ ಬಿಎಂಟಿಸಿ ಬಸ್ ನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಬಿಎಂಟಿಸಿ ಈಗಲಾದರೂ ಎಚ್ಚೆತ್ತುಕೊಂಡು ಇ.ವಿ. ಚಾಲಕರಿಗೆ ಸರಿಯಾದ ಡ್ರೈವಿಂಗ್ ತರಬೇತಿ ನೀಡಬೇಕು, ಜೊತೆಗೆ ಱಶ್ ಡ್ರೈವಿಂಗ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಱಶ್ ಡ್ರೈವಿಂಗ್ ಮಾಡಿ ಅಪಘಾತ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇ.ವಿ. ಬಸ್ ಚಾಲಕರನ್ನು ನೇರವಾಗಿ ಬಿಎಂಟಿಸಿ ಯೇ ನೇಮಕಾತಿ ಮಾಡಿಕೊಳ್ಳಬೇಕು. ಆಗ ಡ್ರೈವರ್ ಗಳಿಗೆ ಬಿಎಂಟಿಸಿ ನಿಯಮಗಳು, ಸೇವೆಯಿಂದ ಅಮಾನತು ಆಗುವ ಭಯ ಎಲ್ಲವೂ ಇರುತ್ತೆ. ಈಗ ನಿರ್ಭಯವಾಗಿ ಡ್ರೈವಿಂಗ್ ಮಾಡಿ, ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಇ.ವಿ. ಬಸ್ ಚಾಲಕ ಹುದ್ದೆಗೆ ಹೊರಗುತ್ತಿಗೆ ನೇಮಕಾತಿಯನ್ನು ನಿಲ್ಲಿಸಿದರೇ, ಬೆಂಗಳೂರಿನಲ್ಲಿ ಅಮಾಯಕ ಜನರು ಜೀವ ಕಳೆದುಕೊಳ್ಳುವುದು ನಿಲ್ಲುತ್ತೆ. ಇಲ್ಲದಿದ್ದರೇ, ಬಿಎಂಟಿಸಿ ಬಸ್ ಗಳು, ದೆಹಲಿಯ ಹಳೆಯ ಬ್ಲೂ ಲೈನ್ ಬಸ್ ಗಳಂತಾಗುತ್ತಾವೆ.
ಇಂದು ಬೈಕ್ ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.