ಅಂಗಡಿ ಮಾಲೀಕರೇ ಹುಷಾರ್! ಪೋನ್ ಪೇ ಮೂಲಕ ಹಣ ವರ್ಗಾವಣೆ ಅಂತ ಯಾಮಾರಿಸ್ತಾರೆ!

ಬೆಂಗಳೂರಿನಲ್ಲಿ ಅಂಗಡಿ ಮಾಲೀಕರೇ ಹುಷಾರ್. ನಿಮ್ಮ ಅಂಗಡಿಗೆ ಬಂದು ಬೇಕಾದ್ದೆಲ್ಲವನ್ನೂ ಖರೀದಿಸಿ, ಪೋನ್ ಪೇ ಮೂಲಕ ಹಣ ಪಾವತಿಸಿ ಹೋಗ್ತಾರೆ. ನಿಮ್ಮ ಪೋನ್ ಪೇ ಸ್ಪೀಕರ್ ನಲ್ಲೂ ಹಣ ಪಾವತಿ ಅಂತ ಸೌಂಡ್ ಬರುತ್ತೆ. ಆದರೇ, ನಿಮ್ಮ ಬ್ಯಾಂಕ್ ಅಕೌಂಟ್‌ಗೆ ದುಡ್ಡೇ ಬಂದಿರಲ್ಲ! ಇದು ಹೊಸ ಸ್ಕ್ಯಾಮ್!

author-image
Chandramohan
PHONE_PAY
Advertisment

ಅಂಗಡಿ ಮಾಲಿಕರೇ ಬಿ ಅಲರ್ಟ್​. ಐಟಂ ಖರೀದಿ ಮಾಡಿ ಆನ್​ಲೈನ್​ ಪೇಮೆಂಟ್​ ಆಗಿದೆ ಅಣ್ಣಾ ಅಂತ ಹೋಗೋರನ್ನ ನಂಬಬೇಡಿ. ಯಾಕಂದ್ರೆ ಮಾಸ್ಕ್ ಹಾಕ್ಕೊಂಡು ಬರೋ ಗ್ಯಾಂಗ್​ ಫೇಕ್ ಆ್ಯಪ್ ಮೂಲಕ ಪೇ ಮಾಡಿ ಮಕ್ಮಲ್​ ಟೋಪಿ ಹಾಕುತ್ತೆ. ಶಾಕಿಂಗ್​ ಅಂದ್ರೆ ದುಡ್ಡು ಹೋಗಿರೋದು ತೋರಿಸುತ್ತೆ. ಸ್ಕ್ಯಾನರ್ ಸೌಂಡ್ ಬಾಕ್ಸ್​ನಲ್ಲೂ ಕ್ರೆಡಿಟ್ಡ್​ ಅನ್ನುತ್ತೆ. ಆದ್ರೆ ಹಣ ಮಾತ್ರ ನಿಮ್ಮ ಅಕೌಂಟ್​ಗೆ ಜಮೇ ಆಗೊಲ್ಲ. ಯಾವ ಆ್ಯಪ್​ ಅದು, ಯಾರಾ ಕಿಲಾಡಿಗಳು ಅಂತೀರಾ? 
. ಅಂಗಡಿಯಲ್ಲಿ ಕಾಸ್ಟ್ಲಿ ಕಾಸ್ಟ್ಲಿ ಐಟ್ಸ್​ಂ ತಗೊಳೋದೇನೂ.. ಚಾಕ ಚಾಕ್​ ಅಂತ ಮೊಬೈಲ್​ನಲ್ಲಿ ಸ್ಕ್ಯಾನ್​ ಮಾಡಿ ಅಮೌಂಟ್​ ಪೇ ಮಾಡೋದೇನು. ಅಂಗಡಿಯಲ್ಲಿ ಖರೀದಿ ಮುಗಿಸಿ ಪೋನ್ ಪೇನಲ್ಲೇ ಪೇಮೆಂಟ್ ಮಾಡಿ, ಅಂಗಡಿಯಿಂದ ಜನರು ಹೊರ ಹೋಗುತ್ತಾರೆ.  ಆದರೇ, ಅಂಗಡಿಯವರ ಬ್ಯಾಂಕ್ ಖಾತೆಗೆ ಮಾತ್ರ ಹಣ ಬಂದೇ ಇರಲ್ಲ. ಇದು ಹೊಸ ಸ್ಕ್ಯಾಮ್ . 

ಆ್ಯಪ್​ ತಂದ ಆಪತ್ತು!
ಕೇಸ್ ನಂ.01
ವಿನಾಯಕ ಮೊಬೈಲ್ ಅಂಗಡಿ 7,000 ಐಟಂ ಖರೀದಿಸಿ ಮೋಸ 
ಸ್ಕ್ಯಾನ್ ಮಾಡಿ ಹಣ ಬಂದಿದೆ ಅಂತ ಹೇಳಿ ಜೂಟ್ ಆಗಿದ್ದ ಗ್ಯಾಂಗ್​

ಕೇಸ್ ನಂ.02
ದಿನೇಶ್ ಮೊಬೈಲ್ ಅಂಗಡಿ 15 ಸಾವಿರ ಐಟಂ ಖರೀದಿಸಿ ಮೋಸ
ಒನ್​ ಪ್ಲಸ್ ಏರ್ ಬಡ್ಸ್​ ಖರೀದಿಸಿ ಯಾಮಾರಿಸಿದ್ದ ಖದೀಮರ ಗುಂಪು

ಕೇಸ್ ನಂ.03
ಹಿಂದೆ ಒಂದು ಬಾರಿ ಬಿರಿಯಾನಿ ಅಂಗಡಿಯಲ್ಲೂ ಹೀಗೆ ಮಾಡಿದ್ರು
ಮತ್ತೊಮ್ಮೆ ಬಂದು ಬಿರಿಯಾನಿ ತಿಂದು ಪೇ ಮಾಡಿದಾಗ ಬೆಳಕಿಗೆ 
ಕಳೆದ ಬಾರಿಯ ಅಮೌಂಟ್ ಬಂದಿಲ್ಲ ಅಂದಾಗ ಕೃತ್ಯ ಬೆಳಕಿಗೆ 

ಈಗ ಈ ಕಿಲಾಡಿಗಳ ಮೋಸದ ಜಾಲದ ಬಗ್ಗೆ ಒಂದು ಕ್ಲಾರಿಟಿ ಸಿಗ್ತು ಅಲ್ವಾ.  ಯಲಹಂಕ ನ್ಯೂಟೌನ್​ನಲ್ಲಿ 10ಕ್ಕೂ ಹೆಚ್ಚು ಅಂಗಡಿಗಳಿಗೆ ಹೀಗೇನೇ ಮಾಸ್ಕ್ ಹಾಕ್ಕೊಂಡು ಬಂದು ಮಕ್ಮಲ್​ ಟೋಪಿ ಹಾಕಿ ಹೋಗಿದ್ದಾರೆ ಈ ಖದೀಮರು. ಸದ್ಯ ಈ ಕೃತ್ಯದ ಬಗ್ಗೆ ಯಲಹಂಕ ನ್ಯೂ ಟೌನ್ ಠಾಣೆಗೆ ಮೊಬೈಲ್ ಅಸೋಸಿಯೇಷನ್ ದೂರು ನೀಡಿದೆ. ಜೊತೆಗೆ ಹೀಗೆ ಕಳ್ಳಾಟ ಆಡಿದವರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಫೇಕ್  ಆ್ಯಪ್ ಬಳಸಿ​  ಸ್ಕ್ಯಾನ್ ಮಾಡಿ ದುಡ್ಡು ಹಾಕದೆ ಜೂಟ್ ಆಗ್ತಾರೆ. 

ಶಾಕಿಂಗ್​ ಅನಿಸಿದ್ರು ಇದು ಸತ್ಯ. ಫೋನ್ ಪೇ ರೀತಿಯೇ ಕೆಲಸ ಮಾಡೋ ಈ ಆ್ಯಪ್​ ಬಳಸಿ1 ಕೋಟಿವರೆಗೂ ಹಣ ವರ್ಗಾವಣೆ ಮಾಡ್ಬೋದು. ಈ ಆ್ಯಪ್​ ಕೇವಲ ದುಡ್ಡು ಹಾಕಿದ್ದಾಗಿ ತೋರಿಸುತ್ತೆ ಅಷ್ಟೇ . ಸ್ಕ್ಯಾನರ್ ಬಾಕ್ಸ್​ನಲ್ಲೂ ಕೆಲವೊಮ್ಮೆ ಕ್ರೆಡಿಟ್ ಅಂತ ಬರುತ್ತೆ . ಆದರೆ ಹಣ ಮಾತ್ರ ಅಕೌಂಟ್​ಗೆ ಕ್ರೆಡಿಟ್​ ಆಗೋದೇ ಇಲ್ಲ. ಸೋ ವ್ಯಾಪಾರಸ್ಥರೇ, ಜನಸಾಮಾನ್ಯರೇ ಹ್ಯೂಜ್​ ಅಮೌಂಟ್​ ಅನ್ನ ಆನ್​ಲೈನ್​ ಟ್ರಾನ್ಸ್ಯಾಕ್ಷನ್​ ಮಾಡಿಸಿಕೊಳ್ಳೋ ಮುನ್ನ ಬಿ ಅಲರ್ಟ್​.

 
ಚಂದನಾ ಶೆಟ್ಟಿ, ನ್ಯೂಸ್​ಫಸ್ಟ್​ ಬೆಂಗಳೂರು .


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Phone pay payment scam
Advertisment