/newsfirstlive-kannada/media/media_files/2025/11/25/silver-and-gold-2025-11-25-12-20-07.jpg)
ಡಿಸೆಂಬರ್ ಅಂತ್ಯದಲ್ಲಿ ಮತ್ತೆ ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯಾಗಿವೆ. ಇಂದು ( ಡಿಸೆಂಬರ್ 29) ಬೆಳ್ಳಿ ಬೆಲೆ ಶೇ.6 ರಷ್ಟು ಏರಿಕೆಯಾಗಿದೆ. ಅಂದರೇ, ಬರೋಬ್ಬರಿ 14,387 ರೂಪಾಯಿ ಏರಿಕೆಯಾಗಿದೆ. ಪ್ರತಿ ಕೆ.ಜಿ.ಬೆಳ್ಳಿ ದರ ಎರಡೂವರೆ ಲಕ್ಷ ರೂಪಾಯಿ ದಾಟಿದೆ. ಪ್ರತಿ ಕೆ.ಜಿ.ಬೆಳ್ಳಿ ದರ 2,54,174 ರೂಪಾಯಿಗೆ ಏರಿಕೆಯಾಗಿದೆ. ಕಳೆದ 6 ದಿನಗಳಿಂದ ನಿರಂತರವಾಗಿ ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ.
ಕಳೆದ ವಾರಕ್ಕೆ ಹೋಲಿಸಿದರೇ, ಬೆಳ್ಳಿ ಬೆಲೆ ಶೇ.15 ರಷ್ಟು ಏರಿಕೆಯಾಗಿದೆ. ಅಂದರೇ, ಬರೋಬ್ಬರಿ 31,348 ರೂಪಾಯಿ ಏರಿಕೆಯಾಗಿದೆ.
2024 ರ ಡಿಸೆಂಬರ್ 31 ರಂದು ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 87,233 ರೂಪಾಯಿ ಇತ್ತು. ಕಳೆದೊಂದು ವರ್ಷದಲ್ಲಿ ಬೆಳ್ಳಿ ಬೆಲೆ ಶೇ.191 ರಷ್ಟು ಏರಿಕೆಯಾಗಿದೆ. ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ, ಚಿನ್ನಕ್ಕಿಂತ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿರೋದು ವಿಶೇಷ.
ಚೆನ್ನೈನಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ. 2,81,000 ರೂಪಾಯಿ ಇದೆ. ಮುಂಬೈನಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ 2,58,000 ರೂಪಾಯಿ ಇದೆ.
ಒಂದು ಕಾಲದಲ್ಲಿ ಬೆಳ್ಳಿ ಅಂದರೇ, ಮೂಗು ಮುರಿಯುತ್ತಿದ್ದವರು ಇಂದು ಬೆಳ್ಳಿಯನ್ನು ಖರೀದಿಸದೇ ತಪ್ಪು ಮಾಡಿದ್ದೇವೆ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಬೆಳ್ಳಿಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬಳಕೆ ಮಾಡುವುದರಿಂದ ಇದರ ಬೆಲೆ ಏರಿಕೆಯಾಗುತ್ತಿದೆ. ಆದರೇ, ಮುಂದೆಯೂ ಬೆಳ್ಳಿ ಬೆಲೆ ಏರಿಕೆಯಾಗುತ್ತಲೇ ಇರುತ್ತಾ, ಬೆಲೆ ಇಳಿಕೆಯಾಗುತ್ತಾ ಎಂದು ಊಹಿಸುವುದು ಕಷ್ಟವಾಗಿದೆ.
ಇನ್ನೂ ಚಿನ್ನದ ದರವು 10 ಗ್ರಾಂಗೆ 1,42,420 ರೂಪಾಯಿ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us