Advertisment

ಬೆಂಗಳೂರು-ಹೈದರಾಬಾದ್‌ ನಡುವೆ ಬುಲೆಟ್ ಟ್ರೇನ್ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ ಆರಂಭ! : 8 ಗಂಟೆ ಜರ್ನಿ 2 ಗಂಟೆಗೆ ಇಳಿಯುವ ನಿರೀಕ್ಷೆ!

ಬೆಂಗಳೂರು-ಹೈದರಾಬಾದ್ ನಗರಗಳ ನಡುವೆ ಬುಲೆಟ್ ಟ್ರೇನ್ ನಿರ್ಮಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮೊದಲ ಹಂತದಲ್ಲಿ ಪ್ರಾಥಮಿಕ ಸರ್ವೇ, ಮಣ್ಣು ಪರೀಕ್ಷೆ ಆರಂಭವಾಗಿದೆ. ಗಂಟೆಗೆ 325 ಕಿ.ಮೀ ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸುತ್ತಾವೆ. ಇದರಿಂದ 8 ಗಂಟೆಯ ಪ್ರಯಾಣದ ಅವಧಿ 2 ಗಂಟೆಗೆ ಇಳಿಯಲಿದೆ.

author-image
Chandramohan
BULLET TRAIN 02

ಬೆಂಗಳೂರು-ಹೈದರಾಬಾದ್ ನಡುವೆ ಬುಲೆಟ್ ಟ್ರೇನ್ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ

Advertisment
  • ಬೆಂಗಳೂರು-ಹೈದರಾಬಾದ್ ನಡುವೆ ಬುಲೆಟ್ ಟ್ರೇನ್ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ
  • ಮಣ್ಣು ಪರೀಕ್ಷೆ ಆರಂಭಿಸಿದ ರೈಲ್ವೇ ಇಲಾಖೆ ಅಧಿಕಾರಿಗಳು
  • ಮುಂಬೈ- ಅಹಮದಾಬಾದ್‌ ಮಾರ್ಗದಲ್ಲಿ 2027 ರ ಡಿಸೆಂಬರ್ ನಲ್ಲಿ ಬುಲೆಟ್ ಟ್ರೇನ್ ಸಂಚಾರ!

ನಮ್ಮ ದೇಶದಲ್ಲಿ ಈಗಾಗಲೇ ಮುಂಬೈ- ಅಹಮದಾಬಾದ್ ನಗರಗಳ ನಡುವೆ ಬುಲೆಟ್ ಟ್ರೇನ್ ನಿರ್ಮಾಣಕ್ಕೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದರೇ, ಬುಲೆಟ್ ಟ್ರೇನ್ ಮಾರ್ಗ ಕಾಲಮಿತಿಯಲ್ಲಿ ಪೂರ್ಣವಾಗಿಲ್ಲ ಅನ್ನೋದು ಬೇರೆ ವಿಚಾರ. ಈಗ ದೇಶದ ಬೇರೆ ಬೇರೆ ನಗರಗಳ ನಡುವೆಯೂ ಚೀನಾ, ಜಪಾನ್ ನಂತೆಯೇ ಬುಲೆಟ್ ಟ್ರೇನ್ ಮಾರ್ಗ ನಿರ್ಮಿಸುವ ಪ್ಲ್ಯಾನ್ ಕೇಂದ್ರ ಸರ್ಕಾರಕ್ಕಿದೆ. 
ದಕ್ಷಿಣದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆಯೂ ಬುಲೆಟ್ ಟ್ರೇನ್ ಕಾರಿಡಾರ್‌  ಅನ್ನು ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದೆ.  
ಬೆಂಗಳೂರು - ಹೈದರಾಬಾದ್‌ ನಡುವೆ ಬುಲೆಟ್ ಟ್ರೇನ್‌ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಮಾಡುವ ಕಾರ್ಯ ಆರಂಭವಾಗಿದೆ. ಬುಲೆಟ್ ಟ್ರೇನ್ ಮಾರ್ಗದ 263 ಕಿ.ಮೀ. ಮಾರ್ಗದಲ್ಲಿ ಮಣ್ಣು ಪರೀಕ್ಷೆಗಾಗಿ ಮತ್ತು ಪ್ರಾಥಮಿಕ ಸರ್ವೇಗಾಗಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಲಾಗಿದೆ. 
ಆಂಧ್ರದ ಕರ್ನೂಲ್ ನಿಂದ ಬೆಂಗಳೂರಿಗೆ ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸಲಿದೆ. ಕರ್ನೂಲ್ ನಿಂದ ಬೆಂಗಳೂರು ತಲುಪಲು 1 ಗಂಟೆ 20 ನಿಮಿಷ ತೆಗೆದುಕೊಳ್ಳಲಿದೆ. ಸದ್ಯ ಇರುವ ರೈಲು ಮಾರ್ಗದಲ್ಲಿ ಬೆಂಗಳೂರಿನಿಂದ ಹೈದರಾಬಾದ್ ತಲುಪಲು  8 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಬೆಂಗಳೂರು ಹೈದರಾಬಾದ್ ನಡುವೆ ಬುಲೆಟ್ ಟ್ರೇನ್ ನಿಂದಾಗಿ ಸಂಚಾರದ ಸಮಯ 8 ಗಂಟೆಯಿಂದ 2 ಗಂಟೆಗೆ ಇಳಿಯಲಿದೆ. 
ಬೆಂಗಳೂರಿನ ಯಶವಂತಪುರದಿಂದ ಕಾಚಿಗುಡಕ್ಕೆ 620 ಕಿ.ಮೀ. ದೂರ ಇದೆ.  ಈ ದೂರವನ್ನು ಬುಲೆಟ್ ಟ್ರೇನ್ ನಲ್ಲಿ ಕೇವಲ 2 ಗಂಟೆಯಲ್ಲಿ ತಲುಪಬಹುದು.

Advertisment

BULLET TRAIN 03




ಮುಂಬೈ-ಅಹಮದಾಬಾದ್ ನಡುವಿನ ಮಾರ್ಗದ ಪೈಕಿ ಸೂರತ್- ಬಿಲಿಮೋರ್ ಮಾರ್ಗದಲ್ಲಿ ಬುಲೆಟ್ ಟ್ರೇನ್ 2027 ರ ಡಿಸೆಂಬರ್ ನಲ್ಲಿ ಸಂಚರಿಸಲಿದೆ ಎಂದು ಕೇಂದ್ರದ ರೈಲ್ವೇ ಇಲಾಖೆ ಹೇಳಿದೆ. 

BULLET TRAIN



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore- Hyderabad Bullet train soil testing starts
Advertisment
Advertisment
Advertisment