/newsfirstlive-kannada/media/post_attachments/wp-content/uploads/2025/03/MLC-RAJENDRA-1.jpg)
ತಂದೆಗೆ ಸಚಿವ ಸ್ಥಾನ ಕೊಡಿಸಲು ದೆಹಲಿಗೆ ಹಾರಿದ ರಾಜೇಂದ್ರ
ಮತಗಳವು ವಿಷಯದಲ್ಲಿ ನಮ್ಮ ಪಕ್ಷದ ನಾಯಕರೇ ಆಲರ್ಟ್ ಆಗಿರಬೇಕಿತ್ತು ಎಂದು ಹೇಳಿದ್ದ ಶಾಸಕ ಕೆ.ಎನ್.ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡಿದ್ದರು. ಕಾಂಗ್ರೆಸ್ ಹೈಕಮ್ಯಾಂಡ್ ಕೆ.ಎನ್.ರಾಜಣ್ಣರನ್ನು ಸಹಕಾರ ಖಾತೆಯ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಸೂಚಿಸಿತ್ತು. ಇದರಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎನ್.ರಾಜಣ್ಣ ಈಗ ಮತ್ತೆ ಕ್ಯಾಬಿನೆಟ್ ಸೇರುವ ಪ್ರಯತ್ನ ನಡೆಸಿದ್ದಾರೆ. ಕಳೆದ ಭಾರಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುವ ಮುನ್ನ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದ ಕೆ.ಎನ್.ಆರ್. ತಮ್ಮನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದರು.
ಈಗ ಕೆಎನ್‌ಆರ್ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ತಂದೆಯ ಪರವಾಗಿ ಹೈಕಮ್ಯಾಂಡ್ ಮೇಲೆ ಒತ್ತಡ ಹೇರಲು ಹೊರಟಿದ್ದಾರೆ. ಇಂದು ರಾಜೇಂದ್ರ ರಾಜಣ್ಣ ಬೆಂಗಳೂರಿನಿಂದ ದೆಹಲಿಯತ್ತ ಹೊರಟರು.
/filters:format(webp)/newsfirstlive-kannada/media/post_attachments/wp-content/uploads/2023/09/KNRAJANNAA.jpg)
ಈ ವೇಳೆ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಮಾತನಾಡಿದ ರಾಜೇಂದ್ರ ದೆಹಲಿಗೆ ಶಾಸಕರ ಭೇಟಿ ವಿಚಾರ ನಾನು ಕೂಡ ಮಾಧ್ಯಮದಲ್ಲಿ ನೋಡಿದ್ದೇನೆ . ಪವರ್ ಶೇರಿಂಗ್ ಅಂತ ವಿಚಾರ ಬಂದಾಗ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು. ಆದ್ರೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮುಂದಿನ 5 ವರ್ಷ ನಾನೇ ಸಿಎಂ . ಬಜೆಟ್ ಕೂಡ ನಾನೆ ಮಂಡಿಸುತ್ತೇನೆ ಅಂತಾ ಹೇಳಿದ್ದಾರೆ . ಅದರಿಂದ ಸಿಎಂ ಬದಲಾವಣೆ ಪ್ರಸ್ತಾಪ ನಮಗೆಲ್ಲೂ ಕಾಣಿಸುತ್ತಾ ಇಲ್ಲ, ನಮ್ಮ ತಂದೆ ರಾಜಣ್ಣಗೆ ಮಂತ್ರಿ ಸ್ಥಾನ ಸಿಗಲಿ ಅಂತ ಪ್ರಯತ್ನ ಮಾಡುತ್ತಿದ್ದೇವೆ . ಸಿಎಂ ಬಳಿ ನಮ್ಮ ತಂದೆಯೂ ಹಾಗೂ ನಾನು ಚರ್ಚೆ ಮಾಡಿದ್ದೇವೆ. ಕ್ಯಾಬಿನೆಟ್ ಪುನರ್ ರಚನೆ ಏನಾದರೂ ಮಾಡಿದರೇ, ಹೈಕಮ್ಯಾಂಡ್ ಬಳಿ ಮಾತನಾಡಿ, ನಮ್ಮ ತಂದೆಗೂ ಸಚಿವ ಸ್ಥಾನ ನೀಡುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ರಾಜೇಂದ್ರ ಹೇಳಿದ್ದಾರೆ.
ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಎಲ್ಲರೂ ಕುಳಿತು ಮಾತನಾಡುತ್ತಾರೆ ಎಂದು ರಾಜೇಂದ್ರ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us