/newsfirstlive-kannada/media/media_files/2026/01/31/sit-formed-to-investigate-cj-roy-death-case-2026-01-31-17-01-35.jpg)
ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚನೆ
ಕಾನ್ಪಿಡೆಂಟ್ ಗ್ರೂಪ್ ಚೇರಮೆನ್ ಸಿಜೆ ರಾಯ್ ಸೂಸೈಡ್ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಸ್ಪೆಷಲ್ ಇನ್ ವೆಸ್ಟಿಗೇಷನ್ ಟೀಮ್ ರಚಿಸಲಾಗಿದೆ. ಈ ಎಸ್‌ಐಟಿ ಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಇರುತ್ತಾರೆ ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇದುವರೆಗೂ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯ ಪೊಲೀಸರು ಸಾವಿನ ಕೇಸ್ ತನಿಖೆ ನಡೆಸುತ್ತಿದ್ದರು. ಈಗ ಅಶೋಕ ನಗರ ಪೊಲೀಸರಿಂದ ಎಸ್‌ಐಟಿ ಕೇಸ್ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ. ಕೇಸ್ ದಾಖಲೆ, ಸಾಕ್ಷಿ, ಎಫ್ಐಆರ್ ಪ್ರತಿ ಸೇರಿದಂತೆ ಎಲ್ಲವನ್ನೂ ಅಶೋಕ್ ನಗರ ಪೊಲೀಸರು ಎಸ್‌ಐಟಿ ಗೆ ವರ್ಗಾಯಿಸುವರು.
ಎಸ್‌ಐಟಿ ನೇತೃತ್ವ ವಹಿಸಿರುವ ಜಂಟಿ ಪೊಲೀಸ್ ಕಮೀಷನರ್ ವಂಶಿಕೃಷ್ಣ ನಿನ್ನೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗ ತನಿಖೆಯ ನೇತೃತ್ವ ವಹಿಸಿ ಎಲ್ಲ ಕೋನಗಳಿಂದಲೂ ಈ ಆತ್ಮಹತ್ಯೆ ಕೇಸ್ ಬಗ್ಗೆ ತನಿಖೆ ನಡೆಸಬೇಕಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಸಿ.ಜೆ.ರಾಯ್‌ಗೆ ಎದುರಾದ ಪರಿಸ್ಥಿತಿ ಏನು? ಐ.ಟಿ. ಇಲಾಖೆಯ ದಾಳಿಯಿಂದ ಹೆದರಿದ್ದಾರಾ? ಇಲ್ಲವೇ ಬೇರೆ ಯಾರಾದರೂ ಸಿ.ಜೆ.ರಾಯ್ ಮೇಲೆ ಯಾವ ರೀತಿಯ ಒತ್ತಡ ಹೇರಿದ್ದರು? ಹಣಕಾಸಿನ ಒತ್ತಡ ಏನಾದರೂ ಇತ್ತಾ ? ಬ್ಲ್ಯಾಕ್ ಮೇಲ್ ಮಾಡಿದ್ದಾರಾ? ಎಂಬ ಆ್ಯಂಗಲ್ ಸೇಿರಿದಂತೆ ಬೇರೆ ಬೇರೆ ಆ್ಯಂಗಲ್ ಗಳಲ್ಲಿ ಸಾವಿನ ಕೇಸ್ ತನಿಖೆ ನಡೆಸಿ ಸತ್ಯಾಂಶ ಬಯಲಿಗೆ ಎಳೆಯಬೇಕಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2025/07/DR_G_PARAMESHWARA.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us