/newsfirstlive-kannada/media/media_files/2025/10/25/stepfather-2025-10-25-13-53-45.jpg)
ಬೆಂಗಳೂರು: ನಗರದ ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಪಾಪಿ ಮಲತಂದೆಯೊಬ್ಬ 7 ವರ್ಷದ ಮಗಳನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೊದಲನೇ ಗಂಡ ತೀರಿಕೊಂಡ ನಂತರ ಮಗುವಿನ ತಾಯಿ ಶಿಲ್ಪಾ, ದರ್ಶನ್​ ಎಂಬಾತನ ಜೊತೆ ಎರಡನೇ ಮದುವೆ ಆಗಿದ್ದರು. ಕೇವಲ ಹೆಂಡತಿ ಜೊತೆಗಿನ ಜಗಳದಿಂದಾಗಿ ಪಾಪಿ ಪತಿ ಹಾಗೂ ಮಲತಂದೆ ದರ್ಶನ್ ಪುಟ್ಟ ಕಂದಮ್ಮ ಸಿರಿ (7)ಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ದರ್ಶನ್ ತಲೆಮರೆಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್. ಇನ್​​ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, 4 ತಿಂಗಳ ಹಿಂದೆ ಈ ಜೋಡಿ ಮದುವೆಯಾಗಿದ್ದರು, ಮೊನ್ನೆ ರಾತ್ರಿ 11 ಗಂಟೆಗೆ ದರ್ಶನ್ ಮನೆಗೆ ಬಂದು ಹೋಗಿದ್ದನು. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಸಿರಿ ಶಾಲೆಯಿಂದ ಬಂದ ಮೇಲೆ ಆರೋಪಿ ದರ್ಶನ್ ಹತ್ಯೆ ಮಾಡಿದ್ದಾನೆ. ಸಂಜೆ ಕೆಲಸದಿಂದ ಬಂದಿದ್ದ ಶಿಲ್ಪಾಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದನು. ಮಗುವಿಗೆ ಗುದ್ದಿ ಹಾಗೂ ಮೈಮೇಲೆ ಪರಚಿದ ಗಾಯಗಳಾಗಿವೆ. ಆತ ಸಿಕ್ಕ ಮೇಲೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us