/newsfirstlive-kannada/media/media_files/2025/12/17/actress-joshika-assulted-by-husband-2025-12-17-18-05-04.jpg)
ನಡು ರಸ್ತೆಯಲ್ಲೇ ಹೆಂಡತಿ ಹಾಗೂ ಅತ್ತೆ ಮೇಲೆ ಗಂಡನಿಂದ ಹಲ್ಲೆ ನಡೆದಿದೆ. ಪತ್ನಿ ಹಾಗೂ ಅತ್ತೆ ಮೇಲೆ ಮನಬಂಥಂತೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುರೇಶ್ ನಾಯ್ಡು ಜೊತೆ ಕಳೆದ ಎರಡು ವರ್ಷಗಳ ಹಿಂದೆ ಜೋಶಿಕಾ ಎಂಬಾಕೆ ಮದುವೆಯಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದೆ . … ಕೌಟುಂಬಿಕ ಕಲಹದಿಂದ ಬೇರೆ ಪತಿ-ಪತ್ನಿ…ಬೇರೆ ಬೇರೆಯಾಗಿದ್ದರು. ಇದೀಗ ಮಾತನಾಡೋಣ ಎಂದು ಮನೆ ಬಳಿ ಕರೆಸಿಕೊಂಡು ಪತ್ನಿ ಮೇಲೆ ಮನಸೋ ಇಚ್ಛೆ …ಪತಿ ಸುರೇಶ್ ನಾಯ್ಡು ಹಲ್ಲೆ ನಡೆಸಿದ್ದಾನೆ. ಡಿವೋರ್ಸ್ ಕೇಳಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡ್ತಿರೋ ಆರೋಪ…ಕೇಳಿ ಬಂದಿದೆ. ಜೋಶಿಕಾ ತಾಯಿ ನಯನಾ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಈ ಹಲ್ಲೆ ಬಗ್ಗೆ ದೂರು ನೀಡಿದ್ದಾರೆ.
ಅತ್ತೆ ನಯನಾ ಮೇಲೆ ಅಳಿಯ ಸುರೇಶ್ ನಾಯ್ಡು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪ ಮಾಡಿದ್ದಾರೆ. ಸದ್ಯ ರಾಮಮೂರ್ತಿ ನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ನಟಿ ಜೋಶಿಕಾ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೀವನದಿ, ಸ್ವಯಂವರ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಮದಗಜ ಸಿನಿಮಾದಲ್ಲೂ ಜೋಶಿಕಾ ಆಕ್ಟಿಂಗ್ ಮಾಡಿದ್ದಾರೆ.
ಮದಗಜ ಸಿನಿಮಾದಲ್ಲಿ ತಂಗಿ ಪಾತ್ರದಲ್ಲಿ ನಟಿ ಜೋಶಿಕಾ ನಟಿಸಿದ್ದಾರೆ. ಇದೀಗ ಮೂರು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಇಂಥ ಸಮಯಗಲ್ಲಿ ಗಂಡ ಸುರೇಶ್ ನಾಯ್ಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ಜೋಶಿಕಾ ಆರೋಪಿಸಿದ್ದಾರೆ.
ಮದುವೆಯಾದ ಮೇಲೆ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಬಾರದು ಎಂದು ಪತಿ ಸುರೇಶ್ ನಾಯ್ಡು ಹೇಳಿದ್ದಾನೆ. ಈ ವಿಚಾರಕ್ಕೆ ಗಂಡ- ಹೆಂಡತಿ ನಡುವೆ ಗಲಾಟೆ ನಡೆದಿದೆ.
ಈ ಹಿಂದೆ ಸುರೇಶ್ ನಾಯ್ಡು ವಿರುದ್ಧ ಪತ್ನಿ ಜೋಶಿಕಾ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಪತಿ ಸುರೇಶ್ ನಾಯ್ಡು ಹೇಳಿದ್ದಾನೆ. ನಿನ್ನೆ ಮಾತುಕತೆಗೆಂದು ಬೆಂಗಳೂರಿನ ಚನ್ನಸಂದ್ರ ಬಳಿ ಕರೆದು ಹಲ್ಲೆ ಮಾಡಿದ್ದಾನೆ. ಜೋಶಿಕಾ ತಮ್ಮ ತಾಯಿ ನಯನಾ ಜೊತೆ ಬೆಂಗಳೂರಿನ ಕೆಂಗೇರಿ ಬಳಿ ವಾಸ ಮಾಡುತ್ತಿದ್ದಾರೆ. ಮಾತಿಗೆ ಮಾತು ಬೆಳೆದು ಪತಿ ಸುರೇಶ್ ನಾಯ್ಡು ತನ್ನ ಪತ್ನಿ ಜೋಶಿಕಾ ಹಾಗೂ ಅತ್ತೆ ನಯನಾ ಮೇಲೆ ಹಲ್ಲೆ ಮಾಡಿದ್ದಾನೆ . ಈ ಹಲ್ಲೆ ಬಗ್ಗೆ ನಯನಾ ಕೊಟ್ಟ ದೂರಿನ ಆಧಾರದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/12/17/women-loves-police-inspector-satish-1-2025-12-17-14-13-58.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us