Advertisment

ನೀನು ಅಲ್ಪಾಯುಷಿ ಎಂಬ ಜ್ಯೋತಿಷಿ ಮಾತಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ!!: ಇದೆಂಥಾ ದುರಂತ

ಬೆಂಗಳೂರಿನ ಬಾಗಲಗುಂಟೆಯ ಎಂಇಐ ಲೇಔಟ್ ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ನೀನು ಅಲ್ಪಾಯುಷಿ ಎಂಬ ಜ್ಯೋತಿಷಿಯ ಮಾತಿಗೆ ಹೆದರಿ ಮಹಿಳಾ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 9 ದಿನ ಮಾರಮ್ಮನಿಗೆ ಪೂಜೆ ಮಾಡಿ ಕೊನೆಯ ದಿನ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.

author-image
Chandramohan
TECHIE VIDYA JYOTHI SUICIDE
Advertisment


ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿ…ಮಾತಿಗೆ ಹೆದರಿ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದ್ಯಾಜ್ಯೋತಿ (29) ನೇಣುಬಿಗಿದುಕೊಂಡು ಆತ್ಮಹತ್ಯೆ…ಮಾಡಿಕೊಂಡ ನತದೃಷ್ಟ ಟೆಕ್ಕಿಯಾಗಿದ್ದಾರೆ.  ಬೆಂಗಳೂರಿನ  ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿ ಎಂಇಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. 
ಜ್ಯೋತಿಷಿಯ ಮಾತು ಕೇಳಿ, 9 ದಿನಗಳ ಕಾಲ ಪೂಜೆ ಸಲ್ಲಿಸಿದ್ದರು. 9ನೇ ದಿನದ ಪೂಜೆಯ ಕೊನೆಯಲ್ಲಿ ವಿದ್ಯಾಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮಾರಮ್ಮ ದೇವರಿಗೆ ತಾಳಿ ಕೊಡಬೇಕಿದ್ದ ಕುಟುಂಬಸ್ಥರು ಮಗಳ ಸಾವಿನ ವಿಚಾರ ತಿಳಿದು ಶಾಕ್ ಆಗಿದ್ದಾರೆ. …ಇಷ್ಟಪಟ್ಟ ಹುಡುಗನ ಜೊತೆ ಹಸೆಮಣೆ ಏರಬೇಕಿದ್ದ ಯುವತಿ ಸಾವಿನ ಕದ ತಟ್ಟಿದ್ದಾಳೆ.  ಎಲ್ಲವನ್ನೂ ಮಗಳ ಇಷ್ಟದಂತೆ ಅಪ್ಪ-ಅಮ್ಮ ನಡೆಸಿಕೊಟ್ಟಿದ್ದರು. ಆದರೇ, ಈಗ  ಅಪ್ಪ ಅಮ್ಮನನ್ನ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿ  ಮಗಳು…ಸಾವಿಗೆ ಶರಣಾಗಿದ್ದಾಳೆ.  ಹೆತ್ತ ಮಗಳನ್ನ ಕಳೆದುಕೊಂಡು ಪೋಷಕರು ಕಣ್ಣೀರು ಇಡುತ್ತಿದ್ದಾರೆ.  
ಉಮೇಶ್, ಕವಿತಾ ದಂಪತಿ ಎರಡನೇ ಮಗಳು ವಿದ್ಯಾ ಜ್ಯೋತಿ.  ಬಾಷ್ ಕಂಪನಿಯಲ್ಲಿ   ವಿದ್ಯಾಜ್ಯೋತಿ ಕೆಲಸ ಮಾಡುತ್ತಿದ್ದರು.  ವರ್ಕ್ ಫ್ರಂ ಹೋಂ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾಜ್ಯೋತಿಗೆ, ಕೆಲ ದಿನಗಳ ಹಿಂದೆ  ಅಲ್ಪಾಯುಷಿ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರಂತೆ. …ಈ ಹಿನ್ನೆಲೆಯಲ್ಲಿ  ಮಗಳ ಆಸೆಯಂತೆ ಎಲ್ಲವನ್ನೂ  ಅಪ್ಪ ಅಮ್ಮ…ಮಾಡಿದ್ದರು.  ಕೊಡಗು ಮೂಲದ ಯುವಕನನ್ನ  ವಿದ್ಯಾ…ಪ್ರೀತಿಸಿದ್ದಳು.  ವಿದ್ಯಾಜ್ಯೋತಿ ಇಷ್ಟದಂತೆ ಎರಡೂ‌ ಮನೆಯವರು ಒಪ್ಪಿಗೆ ಸೂಚಿಸಿ ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು. 
ಅಲ್ಪಾಯುಷಿ ಎಂದಿದ್ದ ಜ್ಯೋತಿಷಿ 9 ದಿನ ಪೂಜೆ ಮಾಡುವಂತೆ ತಾಕೀತು ಮಾಡಿದ್ದಾರಂತೆ.  9 ನೇ ದಿನ ದೇವರಿಗೆ ತಾಳಿ ಕೊಡುವಂತೆ  ಜ್ಯೋತಿಷಿ…ಹೇಳಿದ್ದಾರಂತೆ.  ಈ ಹಿನ್ನೆಲೆ 9ನೇ ದಿನ ಮಾರಮ್ಮ ದೇವರಿಗೆ ತಾಳಿ ಕೊಡಲು ಸಿದ್ದತೆಯನ್ನು ಮಾಡಿಕೊಂಡಿದ್ದರು. ಊಟದ ನಂತರ ಮನೆಯ ರೂಮುಗೆ ವಿದ್ಯಾಜ್ಯೋತಿ ಸೇರಿಕೊಂಡಿದ್ದರು. ರೂಮುನಲ್ಲೇ ಕಂಪನಿಯ ಕೆಲಸ ಮಾಡುತ್ತಿರಬೇಕು ಎಂದು ಪೋಷಕರು ಸುಮ್ಮನಾಗಿದ್ದಾರೆ. ಸಂಜೆ ತಾಯಿ ಕವಿತಾ ಕರೆದರೂ ವಿದ್ಯಾಜ್ಯೋತಿ ಪ್ರತಿಕ್ರಿಯಿಸಿಲ್ಲ. ವರ್ಕ್ ಫ್ರಂ ಹೋಮ್ ಆಗಿರುವುದರಿಂದ ಕೆಲಸದಲ್ಲೇ ಬ್ಯುಸಿಯಾಗಿರಬೇಕು ಎಂದು ತಾಯಿ ಅಂದುಕೊಂಡಿದ್ದಾರೆ. ರಾತ್ರಿ 8 ಗಂಟೆಗೆ ದೇವಸ್ಥಾನಕ್ಕೆ ಹೋಗಲು ವಿದ್ಯಾಜ್ಯೋತಿರನ್ನು ತಾಯಿ ಕವಿತಾ ಮತ್ತೆ ಕರೆದಿದ್ದಾರೆ. ಆದರೇ, ಡೋರ್ ಓಪನ್ ಮಾಡದೇ ಇದ್ದಾಗ,  ಅನುಮಾನಗೊಂಡು, ಕಿಟಕಿಯಿಂದ ನೋಡಿದ್ದಾರೆ. ಕಿಟಕಿಯಲ್ಲಿ ವಿದ್ಯಾಜ್ಯೋತಿ ನೇಣು  ಬಿಗಿದುಕೊಂಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. 
ಉಮೇಶ್, ಕವಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳ ಮದುವೆ ಮಾಡಿದ್ದರು. ಎರಡನೇ ಮಗಳಾದ ವಿದ್ಯಾಜ್ಯೋತಿ ತಂದೆ, ತಾಯಿ ಜೊತೆ ಬಾಗಲಗುಂಟೆ ಎಂಇಐ ಲೇಔಟ್ ನಲ್ಲಿ ವಾಸ ಇದ್ದರು. 

Advertisment

TECHIE VIDYA JYOTHI SUICIDE (1)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Crime News in Kannada Bengaluru Crime Bangalore SUICIDE CASE Techie suicide at Bangalore
Advertisment
Advertisment
Advertisment