/newsfirstlive-kannada/media/media_files/2026/01/04/chitrakala-sante-2-2026-01-04-17-21-39.jpg)
/newsfirstlive-kannada/media/media_files/2026/01/04/chitrakala-sante-4-2026-01-04-17-22-03.jpg)
ಕಲಾವಿದನ ಕಲೆಗೆ ಸಾಟಿಯೇ ಇಲ್ಲ
ಎಲ್ ನೋಡಿದ್ರು ಕಣ್ಮನ ಸೆಳೆಯೋ ಚಿತ್ರಗಳು.. ಬಣ್ಣ ಬಣ್ಣದ ಚಿತ್ತಾರಗಳು.. ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರಗಳು ಒಂದಕ್ಕಿಂತ ಒಂದು ಸೊಗಸು.. ಹಳ್ಳಿಯ ಸೊಗಡು ಸಾರುವ ಚಿತ್ರಗಳು, ಆರ್ಟ್ ವರ್ಕ್, ಆಯಿಲ್ ಪೇಂಟಿಂಗ್ನಿಂದ ಮಾಡಿರೋ ಚಿತ್ರಗಳು ನೋಡ್ತಿದ್ರೆ ಕಣ್ಣಿಗೆ ಹಬ್ಬ. ಕಲಾವಿದನ ಕಲೆಗೆ ಸಾಟಿಯೇ ಇಲ್ಲ ಎನ್ನುವಂತಿತ್ತು...
/newsfirstlive-kannada/media/media_files/2026/01/04/siddaramaiah-9-2026-01-04-17-22-35.jpg)
ಸಿಎಂ ಸಿದ್ದರಾಮಯ್ಯ ಚಾಲನೆ
ಇದು 23ನೇ ಆವೃತ್ತಿಯ ಚಿತ್ರ ಸಂತೆಯಲ್ಲಿ ಕಂಡು ಬಂದ ದೃಶ್ಯವೈಭವ.. ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ವರೆಗೂ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಂಜಾನೆ 8 ಗಂಟೆಗೆ ಶುರುವಾದ ಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಸಿಎಂಗೆ ಸಚಿವರಾದ ಎಂಸಿ ಸುಧಾಕರ್ ಸಾಥ್ ನೀಡಿದ್ರು.
/newsfirstlive-kannada/media/media_files/2026/01/04/chitrakala-sante-3-2026-01-04-17-23-18.jpg)
ಪ್ರಕೃತಿಗೆ ಅರ್ಪಣೆ
ಈ ಬಾರಿಯ ಚಿತ್ರಸಂತೆಯನ್ನ ಪರಿಸರ ಪ್ರಕೃತಿಗೆ ಅರ್ಪಣೆ ಮಾಡಲಾಗಿತ್ತು. ಈ ಹಿನ್ನೆಲೆ ಚಿತ್ರ ಕಲಾಪರಿಷತ್ತಿನ ಮುಂಭಾಗದಲ್ಲಿ ಪರಿಸರದ ಸಂದೇಶ ಸಾರುವ ಕಲಾಕೃತಿ ಮಾಡಲಾಗಿತ್ತು.. ವಿವಿಧ ಬಗೆಯ ಪೇಂಟಿಂಗ್ಗಳನ್ನ ಕಲಾವಿದರು ರಚಿಸಿದ್ದರು.
/newsfirstlive-kannada/media/media_files/2026/01/04/chitrakala-sante-8-2026-01-04-17-24-15.jpg)
4 ಲಕ್ಷ ರೂಪಾಯಿ ಬೆಲೆ ಬಾಳುವ ಚಿತ್ರ ಎಲ್ಲರ ಗಮನ ಸೆಳೆಯಿತು.. 3D ಪೇಟಿಂಗ್ ನಲ್ಲಿ ಜಗತ್ತಿನ 104 ಸುಪ್ರಸಿದ್ಧ ವ್ಯಕ್ತಿಗಳನ್ನ ಒಂದೇ ಚಿತ್ರದಲ್ಲಿ ಸೃಷ್ಟಿಸಿದ್ದ ಕಲಾ ಕೃತಿಗೆ ಅಭಿಮಾನಿಯೊಬ್ಬ 3 ಲಕ್ಷ ಕೊಟ್ಟು ಖರೀದಿ ಮಾಡಿದ್ರು..
/newsfirstlive-kannada/media/media_files/2026/01/04/chitrakala-sante-1-2026-01-04-17-25-01.jpg)
ಈ ಬಾರಿ 22 ರಾಜ್ಯಗಳಿಂದ 4 ಕೇಂದ್ರಡಳಿತ ಪ್ರದೇಶದಿಂದ ಸುಮಾರು 1500 ಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದರು. ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಪೇಂಟಿಂಗ್ಗಳ ಪ್ರದರ್ಶನವನ್ನ ಮಾಡಲಾಯ್ತು.
/newsfirstlive-kannada/media/media_files/2026/01/04/chitrakala-sante-9-2026-01-04-17-25-20.jpg)
ಈ ಹಿನ್ನೆಲೆ ಕಲಾ ಪ್ರಿಯರಿಗೆ ಇದು ಕಣ್ಣುಗಳಿಗೆ ಹಬ್ಬದ ವಾತಾವರಣವನ್ನ ತಂದಿತ್ತು. ಕೇವಲ ಚಿತ್ರಗಳಷ್ಟೇ ಅಲ್ಲ ಫೇಸ್ ಪೈಂಟಿಂಗ್, ಪೆನ್ಸಿಲ್ ಸ್ಕೆಚ್, ಕೈಗಳ ಮೇಲೆ ಚಿತ್ರ ಬಿಡಿಸೋದು ಕೂಡಾ ಇಲ್ಲಿ ಎಲ್ಲರನ್ನು ಸಖತ್ ಅಟ್ರಾಕ್ಟ್ ಮಾಡ್ತು.
/newsfirstlive-kannada/media/media_files/2026/01/04/chitrakala-sante-2026-01-04-17-25-37.jpg)
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಹ ಚಿತ್ರಸಂತೆಗೆ ಕುಟುಂಬ ಸಮೇತ ಆಗಮಿಸಿ ಖುಷಿಪಟ್ಟರು. ಲಕ್ಷ ಲಕ್ಷ ಬೆಲೆ ಬಾಳುವ ದುಬಾರಿ ಪೇಟಿಂಗ್ ನಿಂದ ಹಿಡಿದು 100 ರೂಪಾಯಿವರೆಗಿನ ಚಿತ್ರಗಳನ್ನ ಸ್ಥಳದಲ್ಲಿಯೇ ಚಿತ್ರಿಸುವ ಕಲಾ ಆರ್ಟ್ ಗಳ ಪರ್ದಶರ್ನವೂ ಕಂಡು ಬಂತ್ತು.
/newsfirstlive-kannada/media/media_files/2026/01/04/chitrakala-sante-7-2026-01-04-17-26-02.jpg)
ಇದ್ರ ಜೊತೆಗೆ ಬೇರೆ ಊರುಗಳಿಂದಲೇ ಕಲಾಪ್ರೇಮಿಗಳು ಬಂದಿದ್ರು, ಚಿತ್ರಸಂತೆಯನ್ನು ಕಂಡು ಅನೇಕ ಪೇಂಟಿಂಗ್ಗಳನ್ನು ಕೊಂಡು ಕೊಂಡು ಇಡೀ ದಿನದ ಚಿತ್ರ ಸಂತೆಯನ್ನು ಸಖತ್ ಎಂಜಾಯ್ ಮಾಡಿದ್ರು. ಒಟ್ನಲ್ಲಿ ಈ ವರ್ಷದ ಚಿತ್ರಸಂತೆಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಸಿಲಿಕಾನ್ ಸಿಟಿ ಫುಲ್ ಖುಷಿಯಾಗಿದ್ದರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us