/newsfirstlive-kannada/media/media_files/2025/12/24/vijayalakshmi-1-2025-12-24-15-17-15.jpg)
ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಿಜಯಲಕ್ಷ್ಮೀಯವರ ಹೇಳಿಕೆ ದಾಖಲಿಸಿದ್ದಾರೆ.
ದೂರಿನಲ್ಲಿ ಹೇಳಿರುವ ಅಂಶಗಳನ್ನೆ ವಿಜಯಲಕ್ಷ್ಮೀ ಹೇಳಿಕೆಯಲ್ಲೂ ನೀಡಿದ್ದಾರೆ. ಇನ್ನು, ದೂರು ದಾಖಲಾಗ್ತಿದಂತೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳುಲು ಕಾಮೆಂಟ್ ಮಾಡಿದ 18 ಆಕೌಂಟ್ ಡಿಲಿಟ್ ಮಾಡಿದ್ದಾರೆ. ಆದ್ರೆ ಆರೋಪಿಗಳು ಆಕೌಂಟ್ ಡಿಲಿಟ್ ಮಾಡುವ ಮೊದಲೆ ಪೊಲೀಸರು ಆಕೌಂಟ್ಸ್ ಡಿಟೈಲ್ಸ್ ಪಡೆದಿದ್ರು.
ಬಳಿಕ 18 ಅಕೌಂಟ್ ಹ್ಯಾಂಡ್ಲರ್ಸ್ ಡಿಟೇಲ್ಸ್ ಕೇಳಿ ಮೆಟಾಗೆ ಪತ್ರ ಬರೆದಿದ್ರು. ಆದ್ರೆ ಪತ್ರಕ್ಕೆ ರಿಪ್ಲೈ ಬರುವವರೆಗೆ ಕಾಯಬಾರದು ಎಂದು ಕಮಿಷನರ್ ಸಿಮಾಂತಕುಮಾರ್ ಸಿಂಗ್ ಸೂಚನೆ ನೀಡಿದ್ರು. ಹೀಗಾಗಿ ಬಹುತೇಕ ನಾಳೆ ಸಂಜೆ ಒಳಗೆ ಅಶ್ಲೀಲ ಕಮೆಂಟ್ಸ್ ಮಾಡಿರೋ ಅಕೌಂಟ್ ಹ್ಯಾಂಡ್ಲರ್ಸ್ ಮಾಹಿತಿ ಪೊಲೀಸರ ಕೈ ಸೇರಲಿದೆ.
ಇದನ್ನೂ ಓದಿ:ಸರ್ಕಾರಿ ಕೆಲಸ.. 24,800 ಆಕಾಂಕ್ಷಿಗಳಿಗೆ ಕನ್ನಡ ಕಡ್ಡಾಯ ಪರೀಕ್ಷೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us