/newsfirstlive-kannada/media/media_files/2025/10/10/gba_new-2025-10-10-22-27-12.jpg)
ಬೆಂಗಳೂರು ವ್ಯಾಪ್ತಿಯ ಸ್ವತ್ತುಗಳನ್ನು ಬಿ ಖಾತಾದಿಂದ ಎ ಖಾತಾ ಆಗಿ ಪರಿವರ್ತಿಸುವುದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಇಲಾಖೆ ಅಧಿಕೃತ ಆದೇಶ ನೀಡಿತ್ತು. ಇಂದು ಖಾತಾ ಬದಲಾವಣೆ ಕುರಿತ ತಂತ್ರಾಂಶವನ್ನು ಬೆಂಗಳೂರು ನಗರಾಭಿವೃದ್ದಿ ಖಾತಾ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಂತ್ರಾಂಶವನ್ನು ಉದ್ಘಾಟಿಸಿದ್ದಾರೆ. ಹೊಸ ನಿವೇಶನಗಳಿಗೂ ಎ-ಖಾತಾ ಲಭ್ಯವಾಗುವಂತೆ ಹೊಸದಾಗಿ ಆನ್ ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇನ್ನೂ ಮುಂದೆ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಪರಿವರ್ತನೆ ಮಾಡಿಕೊಳ್ಳಬಹುದು. ಆದರೇ, ಇದಕ್ಕೆ ರಾಜ್ಯ ಸರ್ಕಾರ ಹಾಗೂ ಜಿಬಿಎ ನಿಗದಿಪಡಿಸಿರುವ ನಿಯಮಗಳನ್ನು ಪಾಲನೆ ಮಾಡಬೇಕು ಹಾಗೂ ಅಗತ್ಯ ಶುಲ್ಕ ಪಾವತಿಸಿ, ಬಿ ಖಾತಾದಿಂದ ಎ ಖಾತಾ ಬದಲಾವಣೆ ಕೋರಿ ಅರ್ಜಿಯನ್ನು ತಂತ್ರಾಶದಲ್ಲೇ ಸಲ್ಲಿಸಬೇಕು.
ಇನ್ನೂ ಬಿ ಖಾತಾದಿಂದ ಎ ಖಾತೆಗೆ ಆಸ್ತಿ ಬದಲಾವಣೆ ಮಾಡಿಕೊಳ್ಳುವ ತಂತ್ರಾಂಶಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್,
ಬಿ ಖಾತೆಯನ್ನು ಎ ಖಾತೆಯಾಗಿ ಮಾಡಲು ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದೊಂದು ಕ್ರಾಂತಿಕಾರಿ ಬದಲಾವಣೆ ಎಂದಿದ್ದಾರೆ.
ಬೆಂಗಳೂರಲ್ಲಿ ಸುಮಾರು 7.5 ಲಕ್ಷ ಎ ಖಾತೆ ಆಸ್ತಿಗಳಿವೆ, 7.5 ಲಕ್ಷ ಬಿ ಖಾತೆ ಆಸ್ತಿಗಳಿವೆ. ಆಸ್ತಿಯನ್ನು ಕಾಪಾಡಿಕೊಳ್ಳಲು ಕ್ರಾಂತಿಕಾರಿ ಬದಲಾವಣೆ ಮಾಡಿದ್ದೇವೆ . ಇಡೀ ದೇಶದಲ್ಲಿ ಯಾರು ಸಹ ಇಂಥ ದೊಡ್ಡ ಹೆಜ್ಜೆ ಇಟ್ಟಿಲ್ಲ ಅಂತ ಮೋದಿಯವರೇ ಹೊಗಳಿದ್ದಾರೆ . ಕೆಟಿಸಿಪಿ ಕಾಯ್ದೆ 1961ರ ಅಡಿಯಲ್ಲಿ ಅನುಮೋದನೆಗಳಿಲ್ಲದೆ ಕೃಷಿ ಭೂಮಿಯನ್ನು ಕಂದಾಯ ನಿವೇಶನಗಳು , ಬಿ ಖಾತೆ ಕೊಟ್ಟಿದ್ದಾರೆ . ದಾಖಲೆಗೆ ಎ ಖಾತೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ನವಂಬರ್ 1ರಿಂದ ನೂರು ದಿನಗಳ ಅವಕಾಶ ಇರಲಿದೆ . ಇದಕ್ಕೆ 500 ರೂಪಾಯಿ ಆರಂಭಿಕ ಶುಲ್ಕವನ್ನು ಪಾವತಿಸಬೇಕು . ಆನ್ ನೈನ್ ನಲ್ಲಿ ಅರ್ಜಿ ಸಲ್ಲಿಸಬಹುದು . ನಗರ ಪಾಲಿಕೆಗಳಿಂದ ಸೈಟ್ ಪರಿಶೀಲನೆ ಮಾಡಲಾಗುತ್ತೆ. ಅರ್ಹತೆಯ ಪ್ರಕಾರ ಅನುಮೋದನೆ ಮಾಡುತ್ತೇವೆ . 2000 ಚದರ್ ಮೀಟರ್ ವರೆಗಿನ ಸೈಟ್ ಗಳಿಗೆ ಬಿ-ಖಾತಾವನ್ನು ಎ ಖಾತೆ ಆಗಿ ಪರಿವರ್ತಿಸುವ ಯೋಜನೆ ಇದಾಗಿದೆ. ಭೂಮಿಗೆ ಮಾತ್ರವೇ ಅವಕಾಶ, ಕಟ್ಟಡಕ್ಕೆ ಅವಕಾಶ ಇರಲ್ಲ. ರೀ ಚೆಕ್ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.