Advertisment

ಬೀದಿ ನಾಯಿಗಳ ಪರ ಮನೆಯಲ್ಲಿ ಕೂತು ಬೊಬ್ಬೆ ಹೊಡೆಯಲಿಲ್ಲ.. 20 ಶ್ವಾನಗಳ ಒಮ್ಮೆಲೆ ದತ್ತು ಪಡೆದು ಮಾದರಿಯಾದ ಮಹಿಳೆ

ಬೀದಿ ನಾಯಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ದುಬಾರಿ ಬೆಲೆಯ ವಿದೇಶಿ ತಳಿಯ ನಾಯಿಗಳ ಮೋಹಕ್ಕೆ ಬಿದ್ದಿರುವ ಇಂದಿನ ಕಾಲದಲ್ಲಿ, ಇಲ್ಲೊಬ್ಬರು ಮಹಿಳೆ ಬರೋಬ್ಬರಿ 20 ಬೀದಿ ನಾಯಿಗಳನ್ನು (Street Dogs) ದತ್ತು ಪಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

author-image
Ganesh Kerekuli
Street Dog Adoption, (2)
Advertisment

ಬೆಂಗಳೂರು:ಬೀದಿ ನಾಯಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ದುಬಾರಿ ಬೆಲೆಯ ವಿದೇಶಿ ತಳಿಯ ನಾಯಿಗಳ ಮೋಹಕ್ಕೆ ಬಿದ್ದಿರುವ ಇಂದಿನ ಕಾಲದಲ್ಲಿ, ಇಲ್ಲೊಬ್ಬರು ಮಹಿಳೆ ಬರೋಬ್ಬರಿ 20 ಬೀದಿ ನಾಯಿಗಳನ್ನು (Street Dogs) ದತ್ತು ಪಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

Advertisment

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಜಯಾ ಜಗದೀಶ್ ಎಂಬುವವರು ಒಂದೇ ಬಾರಿಗೆ 20 ಬೀದಿ ನಾಯಿಗಳನ್ನು ದತ್ತು ಪಡೆದು, ಅವುಗಳಿಗೆ ಹೊಸ ಜೀವನ ನೀಡಿದ್ದಾರೆ.

Street Dog Adoption, (1)

ನಿಯಮಾನುಸಾರ ದತ್ತು ಪ್ರಕ್ರಿಯೆ

ಪ್ರಾಣಿಗಳ ಮೇಲೆ ಕ್ರೂರತೆ ತಡೆ ಕಾಯ್ದೆ-1960 (PCA Act) ಹಾಗೂ ಪ್ರಾಣಿ ಜನನ ನಿಯಂತ್ರಣ ನಿಯಮಗಳು-2023ರ (Animal Birth Control Rules) ಅನ್ವಯ ಈ ದತ್ತು ಪ್ರಕ್ರಿಯೆಯನ್ನು ನಡೆಸಲಾಗಿದೆ.

ಲಸಿಕೆ, ಚಿಕಿತ್ಸೆ ಪೂರ್ಣ

ಸುಜಯಾ ಅವರು ದತ್ತು ಪಡೆದಿರುವ ಎಲ್ಲಾ 20 ನಾಯಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ದತ್ತು ನೀಡುವ ಮುನ್ನ ಎಲ್ಲಾ ನಾಯಿಗಳಿಗೆ ಅಗತ್ಯವಾದ ರೇಬಿಸ್ ವಿರೋಧಿ ಲಸಿಕೆ (ARV) ಹಾಗೂ ಸಂಯುಕ್ತ ಲಸಿಕೆಗಳನ್ನು ನೀಡಲಾಗಿದೆ. ಜೊತೆಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನೂ (ABC Surgery) ಪೂರೈಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisment

Street Dog Adoption,

ಜಿಬಿಎ ಮನವಿಗೆ ಉತ್ತಮ ಸ್ಪಂದನೆ

ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಪ್ರಾಣಿ ಕಲ್ಯಾಣದ ದೃಷ್ಟಿಯಿಂದ ಬೀದಿ ನಾಯಿಗಳನ್ನು ದತ್ತು ಪಡೆಯುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿತ್ತು. ಈ ಮನವಿಗೆ ಇದೀಗ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸುಜಯಾ ಜಗದೀಶ್ ಅವರ ಈ ನಡೆ ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಚ್ಚಿನ ಜನರು ಬೀದಿ ನಾಯಿಗಳನ್ನು ದತ್ತು ಪಡೆದರೆ, ಬೀದಿ ನಾಯಿಗಳ ಹಾವಳಿ ಕಡಿಮೆಯಾಗುವುದರ ಜೊತೆಗೆ ಮೂಕ ಪ್ರಾಣಿಗಳಿಗೂ ಸೂಕ್ತ ನೆಲೆ ಸಿಕ್ಕಂತಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Street Dog Adoption street dog
Advertisment
Advertisment
Advertisment