/newsfirstlive-kannada/media/media_files/2025/12/23/professor-became-thief-at-basvanagudi-2025-12-23-15-46-28.jpg)
ವೀಕೆಂಡ್ ನಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಪ್ರೊಫೆಸರ್ ರೇವತಿ!
ಆಕೆ ವೀಕ್ ಡೇಸ್ ನಲ್ಲಿ ಫ್ರೊಫೆಸರ್, ವೀಕೆಂಡ್ ನಲ್ಲಿ ಖರ್ತನಾಕ್ ಕಳ್ಳಿ..! ಇಂಥ ಡಬಲ್ ಮುಖದ ಖರ್ತನಾಕ್ ಕಳ್ಳಿಯನ್ನು ಬೆಂಗಳೂರಿನ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬೆಳ್ಳಂದೂರು ಬಳಿಯ ಖಾಸಗಿ ಕಾಲೇಜಿನಲ್ಲಿ ಫ್ರೊಫೆಸರ್ ಆಗಿರುವ ಆರೋಪಿ ರೇವತಿ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡುತ್ತಿದ್ದರು . ವಾರಪೂರ್ತಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಫ್ರೊಫೆಸರ್ ವೃತ್ತಿ ಮಾಡುತ್ತಿದ್ದರು. ಭಾನುವಾರ ಮಾತ್ರ ಸಂಬಂಧಿಕರ ರೀತಿಯಲ್ಲಿ ಮದುವೆ ಚೌಟ್ರಿಗೆ ಎಂಟ್ರಿಯಾಗುತ್ತಿದ್ದಳು. ಅನುಮಾನ ಬಾರದಂತೆ ಎಲ್ಲರನ್ನೂ ಮಾತನಾಡಿಸಿ ಚಿನ್ನಾಭರಣ ಎಗರಿಸುತ್ತಿದ್ದಳು. ನಂತರ ಕಲ್ಯಾಣ ಮಂಟಪದಲ್ಲಿ ಮದುವೆ ಊಟ ಮಾಡ್ಕೊಂಡು ಎಸ್ಕೇಪ್ ಆಗುತ್ತಿದ್ದಳು.
ಕಳೆದ ನವೆಂಬರ್ 25 ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ಕೂಡ ತನ್ನ ಕೈಚಳಕ ತೋರಿದ್ದಳು. ಸಂಬಂಧಿಕರ ರೀತಿ ತೆರಳಿ ಮದುವೆ ಮನೆಯವರ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಳು. ಮೂಲತ: ಶಿವಮೊಗ್ಗ ಮೂಲದ ರೇವತಿ ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ವಾಸವಾಗಿದ್ದಳು.
ಭಾನುವಾರದ ದಿನ ಬೆಂಗಳೂರನ್ನ ರೌಂಡ್ಸ್ ಹಾಕುತ್ತಿದ್ದಳು. ಮದುವೆ ನಡೆಯುತ್ತಿದ್ದ ಚೌಟ್ರಿಗಳಿಗೆ ಎಂಟ್ರಿಯಾಗುತ್ತಿದ್ದಳು. ಮದುವೆ ಸಂಭ್ರಮದಲ್ಲಿ ಮೈ ತುಂಬ ಚಿನ್ನಾಭರಣ ಹಾಕಿಕೊಂಡು ಮೈ ಮರೆತಿದ್ದವರನ್ನು ಟಾರ್ಗೆಟ್ ಮಾಡಿ ಚಿನ್ನ ಎಗರಿಸಿ ಎಸ್ಕೇಪ್ ಆಗಿಬಿಡುತ್ತಿದ್ದಳು. ಬಸವನಗುಡಿ ಪೊಲೀಸರ ವಿಚಾರಣೆ ವೇಳೆ ಮೂರು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬೇರೆ ಬೇರೆ ಕಲ್ಯಾಣಮಂಟಪದಲ್ಲಿ ಇದೇ ರೀತಿ ಕೃತ್ಯ ಎಸಗಿರೋದು ಪತ್ತೆಯಾಗಿದೆ.
ಬಂಧಿತ ಕನ್ನಡ ಪ್ರೊಫೆಸರ್ ರೇವತಿಯಿಂದ 32 ಲಕ್ಷ ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದು ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ದ ಚಿನ್ನವನ್ನು ಗಿರವಿ ಅಂಗಡಿಯಲ್ಲಿ ಅಡಮಾನ ಇಟ್ಟು ಸಾಲ ಪಡೆದಿದ್ದಾಳೆ.
ಬೇರೆ ಬೇರೆ ಜಿಲ್ಲೆಯಲ್ಲೂ ಈ ಪ್ರೊಫೆಸರ್ ಕಳ್ಳತನ ಮಾಡಿದ್ದಾಳೆ. ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ಎರಡು ಕಲ್ಯಾಣ ಮಂಟಪಕ್ಕೆ ಕನ್ನ ಹಾಕಿದ್ದಾಳೆ. ಕಳ್ಳತನ ಮಾಡಿದ ಚಿನ್ನವನ್ನು ವಾಸದ ಮನೆ, ಜೊತೆಗೆ ಬ್ಯಾಂಕ್ ನಲ್ಲಿ ರೇವತಿ ಇಟ್ಟಿದ್ದು ಬೆಳಕಿಗೆ ಬಂದಿದೆ. ಜೊತೆಗೆ ಗಂಡನ ಹೆಸರಿನಲ್ಲಿ ಗೋಲ್ಡ್ ಲೋನ್ ಮಾಡಿಸಿ ದುಡ್ಡು ಅನ್ನು ರೇವತಿ ಪಡೆದುಕೊಂಡಿದ್ದಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us