/newsfirstlive-kannada/media/media_files/2025/11/08/umesh-reddy-luxury-life-in-jail-1-2025-11-08-14-56-03.jpg)
ಜೈಲಿನಲ್ಲಿರುವ ಉಮೇಶ್ ರೆಡ್ಡಿ ಕೈನಲ್ಲಿ ಮೊಬೈಲ್ ಪೋನ್!
ಜೈಲಿನಲ್ಲಿ ಒಂದು ಹಾಸಿಗೆ ದಿಂಬಿಗೆ ನಟ ದರ್ಶನ್ ಪರದಾಡುತ್ತಿದ್ದಾರೆ. ಆದರೇ, ಅದೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಳಿದ ಖೈದಿಗಳು ಬಿಂದಾಸ್ ಲೈಫ್ ಅನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುಖ, ಶಾಂತಿ, ನೆಮ್ಮದಿಗೆ ಭಂಗ ತಂದು ಇಡೀ ರಾಜ್ಯದಲ್ಲಿ ಭಾರಿ ಭಯ, ಭೀತಿ ಮೂಢಿಸಿದ್ದ ವಿಕೃತ ಕಾಮಿ ಉಮೇಶ್ ರೆಡ್ಡಿ ಕೂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾನೆ. ವಿಕೃತ ಕಾಮಿ ಉಮೇಶ್ ರೆಡ್ಡಿ ಈಗ ಜೈಲಿನಲ್ಲಿ ಬಿಂದಾಸ್ ಆಗಿ ಲೈಫ್ ನಡೆಸುತ್ತಿದ್ದಾನೆ. ಉಮೇಶ್ ರೆಡ್ಡಿ ಕೈನಲ್ಲಿ ಜೈಲಿನಲ್ಲಿ ಮೊಬೈಲ್ ಇದೆ. ಉಮೇಶ್ ರೆಡ್ಡಿ, ಕರ್ನಾಟಕ ಮಾತ್ರವಲ್ಲ, ಭಾರತದ ಮೋಸ್ಟ್ ನಟೋರೀಯಸ್ ಸೀರಿಯಲ್ ರೇಪಿಸ್ಟ್ . 1996 ರಿಂದ 2002 ರವರೆಗೆ ಸುಮಾರು 20 ಮಹಿಳೆಯರ ಮೇಲೆ ರೇಪ್ ಮಾಡಿದ ಆರೋಪ ಉಮೇಶ್ ರೆಡ್ಡಿ ಮೇಲಿದೆ. ಇದರ ಪೈಕಿ 18 ಮಂದಿಯನ್ನು ಕೊಲೆ ಮಾಡಿದ್ದಾನೆ. ಈಗಾಗಲೇ ಕೋರ್ಟ್ ನಿಂದ ರೇಪ್ ಅಂಡ್ ಮರ್ಡರ್ ಕೇಸ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾನೆ. 18 ಜನರನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಉಮೇಶ್ ರೆಡ್ಡಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಕಲ ಸೌಲಭ್ಯಗಳನ್ನು ನೀಡಲಾಗಿದೆ. ಉಮೇಶ್ ರೆಡ್ಡಿಗೆ ಜೈಲಿನಲ್ಲಿ ಮೊಬೈಲ್, ಟಿ.ವಿ. ಸೇರಿದಂತೆ ಎಲ್ಲ ಸೌಲಭ್ಯ ನೀಡಲಾಗಿದೆ.
/filters:format(webp)/newsfirstlive-kannada/media/media_files/2025/11/08/umesh-reddy-luxury-life-in-jail-2025-11-08-15-01-05.jpg)
ಇನ್ನೂ ಈ ಉಮೇಶ್ ರೆಡ್ಡಿಯನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಲ್ಲಿಗೇರಿಸಬೇಕಾಗಿತ್ತು. ಅಷ್ಟರಲ್ಲಿ ತಾನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿಕೊಂಡು ಮರಣದಂಡನೆ ಶಿಕ್ಷೆಯಿಂದ ಬಚಾವ್ ಆಗಿದ್ದಾನೆ. ಉಮೇಶ್ ರೆಡ್ಡಿ ಸೈಕೋ ತರಹ ಆ್ಯಕ್ಟಿಂಗ್ ಮಾಡಿದ್ದ. ಕೊನೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆ ತಂದು ಉಮೇಶ್ ರೆಡ್ಡಿಯ ಮೆದುಳು ಪರೀಕ್ಷೆ ನಡೆಸಿದಾಗ, ಆತನ ಕಳ್ಳಾಟ ಬಯಲಾಗಿತ್ತು. ಉಮೇಶ್ ರೆಡ್ಡಿಯ ಮೆದುಳು ಸುಸ್ಥಿತಿಯಲ್ಲಿದೆ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿತ್ತು. ಮೆದುಳು ಮತ್ತು ಮಾನಸಿಕ ಸ್ಥಿತಿ ಸಂಪೂರ್ಣ ನಾರ್ಮಲ್ ಎಂಬ ವರದಿ ಬಂದಿತ್ತು.
ಬಳಿಕ ಉಮೇಶ್ ರೆಡ್ಡಿ, ಕ್ಷಮಾದಾನಕ್ಕೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ, ಜೀವ ಭೀಕ್ಷೆ ಬೇಡಿದ್ದರಿಂದ ಸುಪ್ರೀಂಕೋರ್ಟ್, 2022 ರಲ್ಲಿ ಆತನ ಮರಣದಂಡನೆ ಶಿಕ್ಷೆಯನ್ನು 30 ವರ್ಷಗಳ ಶಿಕ್ಷೆಗೆ ಇಳಿಸಿತ್ತು. ಈಗ 30 ವರ್ಷಗಳ ಶಿಕ್ಷೆಯನ್ನು ಮುಗಿಸಿ, ಜೈಲಿನಿಂದ ಬಿಡುಗಡೆಯ ಕೊನೆ ಹಂತದಲ್ಲಿ ಉಮೇಶ್ ರೆಡ್ಡಿ ಇದ್ದಾನೆ. ಉಮೇಶ್ ರೆಡ್ಡಿಯನ್ನು ಎಲ್ಲ ಸಜಾ ಬಂಧಿಗಳ ಜೊತೆಗೆ ಸಜಾ ಬ್ಯಾರಕ್ ನಲ್ಲಿ ಇಟ್ಟಿದ್ದರೂ, ಉಮೇಶ್ ರೆಡ್ಡಿ ಬಳಿ 2 ಆಂಡ್ರಾಯ್ಡ್ ಮೊಬೈಲ್ ಪೋನ್, ಕೀ ಪ್ಯಾಡ್ ಮೊಬೈಲ್ ಗಳು ಇವೆ. ಉಮೇಶ್ ರೆಡ್ಡಿ ಜೈಲಿನ ಬ್ಯಾರಕ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡುವ ವಿಡಿಯೋ ಈಗ ಬಿಡುಗಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಉಮೇಶ್ ರೆಡ್ಡಿಯು ಮೊಬೈಲ್ ನಲ್ಲಿ ಮಾತನಾಡುವ ವಿಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲೋ ಅಥವಾ ಲಕ್ಷುರಿ ರೆಸಾರ್ಟೋ ಎಂಬ ಅನುಮಾನ ಜನರಿಂದ ವ್ಯಕ್ತವಾಗುತ್ತಿದೆ. ಜೈಲಿನಲ್ಲಿ ಖೈದಿಗಳ ಬ್ಯಾರಕ್ ನಲ್ಲೇ ಟಿವಿ, ಮೊಬೈಲ್, ನ್ಯೂಸ್ ಪೇಪರ್ ಸೇರಿದಂತೆ ಎಲ್ಲ ಫೈವ್ ಸ್ಟಾರ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಇನ್ನೂ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧನವಾಗಿ ಜೈಲು ಪಾಲಾಗಿರುವ ತೆಲುಗು ನಟ ತರುಣ್ ರಾಜ್ ಕೂಡ ತನ್ನ ಬ್ಯಾರಕ್ ನಲ್ಲೇ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಿರುವ ವಿಡಿಯೋ ಕೂಡ ಬಿಡುಗಡೆಯಾಗಿದೆ.
Terror suspects, smugglers, and rapists getting royal treatment in Bengaluru jail..... What kind of justice system is this?
— Karnataka Portfolio (@karnatakaportf) November 8, 2025
Once again, shocking visuals have emerged from Parappana Agrahara Central Jail in Bengaluru, raising serious questions about the state of our prison… pic.twitter.com/5D4PfA73Gz
ಈ ವಿಡಿಯೋಗಳನ್ನು ನೋಡಿದ ಮೇಲೆ ನಟ ದರ್ಶನ್ ಅಭಿಮಾನಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ನಟ ದರ್ಶನ್ ರನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ. ಬೇರೆ ಎಲ್ಲ ಖೈದಿಗಳಿಗೂ ಲಕ್ಷುರಿ ಸೌಲಭ್ಯಗಳನ್ನೇ ಜೈಲಿನಲ್ಲಿ ನೀಡಿದ್ದಾರೆ ಎಂಬ ಅಸಮಾಧಾನ, ಆಕ್ರೋಶವನ್ನು ಜೈಲು ಅಧಿಕಾರಿಗಳ ವಿರುದ್ಧ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us