/newsfirstlive-kannada/media/media_files/2025/09/25/leela-santhu-2025-09-25-15-30-02.jpg)
ಕೌಟುಂಬಿಕ ಕಲಹ Photograph: (ಕೌಟುಂಬಿಕ ಕಲಹ)
ಒಂದೆರೆಡು ತಿಂಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟದ ಬಸವನಪುರದಲ್ಲಿ ಟ್ರಯಾಂಗಲ್ ಲವ್ ಸ್ಟೋರಿಯೊಂದು ಬೆಳಕಿಗೆ ಬಂದಿತ್ತು. ಮೂವರು ಮಕ್ಕಳ ತಾಯಿ ಲೀಲಾ, ತನ್ನ ಗಂಡ ಮಂಜುವನ್ನು ಬಿಟ್ಟು ಲವ್ವರ್ ಸಂತು ಎಂಬಾತನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಮೂವರು ಮಕ್ಕಳು ಕೂಡ ಗಂಡ ಮಂಜು ಜೊತೆಯೇ ಇದ್ದವು. ಮೂವರು ಮಕ್ಕಳಿಗೆ ಈಗ ತಾಯಿ ಇಲ್ಲದಂತಾಗಿದ್ದಾಳೆ ಎಂದು ಪತಿ ಮಂಜು ಕಣ್ಣೀರು ಹಾಕಿದ್ದರು. ಪತಿ ಮಂಜು ಗೋಳಾಡಿದ್ದನ್ನು ಜನರು ನೋಡಿ ಅಯ್ಯೋ ಪಾಪಾ, ಹೀಗಾಗಬಾರದಿತ್ತು ಎಂದು ಪತಿ ಮಂಜು ಪರ ಅನುಕಂಪ ವ್ಯಕ್ತಪಡಿಸಿದ್ದರು. ಹೆತ್ತ ತಾಯಿಗೆ ತನ್ನ ಮಕ್ಕಳ ಮೇಲೆಯಾದರೂ ಪ್ರೀತಿ, ಕರುಣೆ ಇಲ್ಲವಾಯಿತು ಎಂದುಕೊಂಡಿದ್ದರು.
ಮಂಜು-ಲೀಲಾ- ಸಂತು ಟ್ರಯಾಂಗಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲವ್ವರ್ ಸಂತುಗೆ ಗುಡ್ ಬೈ ಹೇಳಿರುವ ಲೀಲಾ ಮತ್ತೆ ತನ್ನ ಪತಿ ಮಂಜು ಜೊತೆಯೇ ಸಂಸಾರ ನಡೆಸಲು ವಾಪಸ್ ಬಂದಿದ್ದಾರೆ. …ಲವ್ವರ್ ಸಂತು ಮನೆಯಿಂದ ಪತಿ ಮಂಜು ಮನೆಗೆ ಲೀಲಾ ವಾಪಸ್ ಬಂದಿದ್ದಾರೆ.
ಪತ್ನಿ ಲೀಲಾ , ಸಂತು ಜೊತೆ ಹೋಗಿದ್ದರಿಂದ ಸಿಟ್ಟಾದ ಪತಿ ಮಂಜು ಸೀದಾ ಸಂತು ಮನೆಗೆ ಹೋಗಿ ಸಂತುಗೆ ಹೊಡೆದು ಬಂದಿದ್ದರು. ಇದರಿಂದ ಪೊಲೀಸ್ ಕೇಸ್ ದಾಖಲಾಗಿ ಪತಿ ಮಂಜು ಜೈಲು ಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಬಳಿಕ ಬನ್ನೇರುಘಟ್ಟದ ಬಸವನಪುರದ ಮನೆ ಖಾಲಿ ಮಾಡಿದ್ದ ಪತಿ ಮಂಜು, ಜಲ್ಲಿ ಮಿಷನ್ ಏರಿಯಾದಲ್ಲಿ ಮನೆ ಮಾಡಿದ್ದರು. ಪತ್ನಿ ಲೀಲಾ ಬಳಿ ಇದ್ದ ದೊಡ್ಡ ಮಗನನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದರು. ಇನ್ಸಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ ಲೀಲಾ ಜೊತೆಗಿನ ವಿರಹ ವೇದನೆಯನ್ನು ವ್ಯಕ್ತಪಡಿಸುತ್ತಿದ್ದರು. ಮೊದಲು ಕಾರ್ ಹೊಂದಿದ್ದ ಮಂಜು, ಈಗ ಹೊಸ ಆಟೋ ಖರೀದಿಸಿ ಮಗನ ಜೊತೆ ಜೀವನ ನಡೆಸುತ್ತಿದ್ದರು.
/filters:format(webp)/newsfirstlive-kannada/media/media_files/2025/09/25/leela-santhu-new-2025-09-25-15-24-51.jpg)
ಈಗ ಟ್ರಯಾಂಗಲ್ ಲವ್ ಸ್ಟೋರಿಗೆ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಲೀಲಾ, ಮೊದಲ ಗಂಡನ ಪಾದವೇ ಗತಿ ಎಂದು ಲವ್ವರ್ ಸಂತುವನ್ನು ಬಿಟ್ಟು ಪತಿಯ ಬಳಿಗೆ ಬಂದಿದ್ದಾರೆ. ಇನ್ನೂ ಮುಂದೆ ಪತಿ ಮಂಜು ಗ ಹಾಗೂ ಮೂವರು ಮಕ್ಕಳ ಜೊತೆ ಚೆನ್ನಾಗಿ ಸಂಸಾರ ನಡೆಸುವುದಾಗಿ ಲೀಲಾ ಹೇಳಿದ್ದಾರೆ. ಇದರಿಂದಾಗಿ ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us