ಬೆಂಗಳೂರಿನ ಈಜಿಪುರ ಪ್ಲೈ ಓವರ್ ನಿರ್ಮಾಣಕ್ಕೆ ಇದ್ದ ತೊಂದರೆ ನಿವಾರಣೆ : ಈ ವರ್ಷದಲ್ಲೇ ಪ್ಲೈಓನವರ್ ರೆಡಿ!

ಬೆಂಗಳೂರಿನ ಈಜಿಪುರ ಮೇಲ್ಸೇತುವೆ ದಶಕಗಳಿಂದ ಪೂರ್ಣವಾಗದೇ ಬಾಕಿ ಉಳಿದಿದೆ. ಈಗ ಈಜಿಪುರ ಪ್ಲೈ ಓವರ್ ನಿರ್ಮಾಣಕ್ಕೆ ಇದ್ದ ತೊಂದರೆಯನ್ನು ನಿವಾರಿಸಲಾಗಿದೆ. ಸೇಂಟ್ ಜಾನ್ ಆಸ್ಪತ್ರೆ ಆಡಳಿತ ಮಂಡಳಿಯು ಜಾಗ ನೀಡಲು ಒಪ್ಪಿಗೆ ಸೂಚಿಸಿದೆ. ಹೀಗಾಗಿ ಮುಂದಿನ ಆರೇಳು ತಿಂಗಳಲ್ಲಿ ಮೇಲ್ಸೇತುವೆ ಸಿದ್ದವಾಗಲಿದೆ.

author-image
Chandramohan
EJIPURA FLYOVER (2)

ದಶಕದಿಂದ ಪೂರ್ಣವಾಗದ ಈಜಿಪುರ ಪ್ಲೈ ಓವರ್‌

Advertisment
  • ದಶಕದಿಂದ ಪೂರ್ಣವಾಗದ ಈಜಿಪುರ ಪ್ಲೈ ಓವರ್‌
  • ಪ್ಲೈಓವರ್‌ಗೆ ಜಾಗ ನೀಡಲು ಸೇಂಟ್ ಜಾನ್ಸ್ ಆಸ್ಪತ್ರೆ ಒಪ್ಪಿಗೆ
  • ಪ್ಲೈ ಓವರ್ ನಿರ್ಮಾಣಕ್ಕೆ ಇದ್ದ ತೊಂದರೆ ನಿವಾರಣೆ


ಕೊನೆಗೂ  ಬೆಂಗಳೂರಿನ  ಈಜೀಪುರ ಮೇಲ್ಸೇತುವೆಗೆ ಇದ್ದ ಬಹುದೊಡ್ಡ ಸಮಸ್ಯೆ ಪರಿಹಾರವಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಪಕ್ಕದಲ್ಲೇ ಇದ್ದ ಸೇಂಟ್ ಜಾನ್ಸ್ ಆಸ್ಪತ್ರೆಯ ಜಾಗವನ್ನು ಸ್ವಾಧೀನ ಮಾಡಿಕೊಂಡಿರಲಿಲ್ಲ. ಇದರಿಂದ ಮೇಲ್ಸೇತುವೆ ನಿರ್ಮಾಣ ಭಾರಿ ವಿಳಂಬವಾಗಿದೆ. ಈಗ ಜಿಬಿಎ ಅಧಿಕಾರಿಗಳು ಸೇಂಟ್ ಜಾನ್ಸ್ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಮೇಲ್ಸೇತುವೆಗೆ ಜಾಗ ಬಿಟ್ಟುಕೊಡಲು ಸೇಂಟ್ ಜಾನ್ಸ್ ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಇನ್ನೂ ಮುಂದೆ ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಯಾವುದೇ ಅಡೆ ತಡೆ ಇರಲ್ಲ. 2026 ರ ಮೊದಲ ಆರೇಳು ತಿಂಗಳುಗಳಲ್ಲೇ  ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗಿ ಸಂಚಾರಕ್ಕೆ ಸಿದ್ದವಾಗಲಿದೆ. 
ಜಿಬಿಎ ಕಮೀಷನರ್ ಮಹೇಶ್ವರ್ ರಾವ್ ಭೇಟಿ ನೀಡಿ ಸೇಂಟ್ ಜಾನ್ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಸೇಂಟ್ ಜಾನ್ ಆಸ್ಪತ್ರೆ ಆಡಳಿತ ಮಂಡಳಿ ಪ್ಲೈ ಓವರ್‌ಗೆ ಭೂಮಿ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಪ್ಲೈ ಓವರ್‌ಗೆ 5 ಕಡೆ ಪೋರ್ಟರ್ ಫಿಯರ್ ಅಳವಡಿಕೆಗೆ ಸೇಂಟ್ ಜಾನ್ಸ್ ಆಸ್ಪತ್ರೆಯ ಜಾಗ ಬೇಕಾಗಿತ್ತು. ಸೇಂಟ್ ಜಾನ್ ಆಸ್ಪತ್ರೆಯ ಕಾಂಪೌಂಡ್ ಹೊಡೆದು ಕಾಮಗಾರಿ ಮಾಡಬೇಕಾಗಿತ್ತು.  ಈಗ ಜಾಗ ನೀಡಲು ಸೇಂಟ್ ಜಾನ್ ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಕಾಮಗಾರಿ ಮುಗಿಸಿದ ನಂತರ ಮತ್ತೆ ಕಾಂಪೌಂಡ್  ಅನ್ನು ಜಿಬಿಎ ಮತ್ತೆ ನಿರ್ಮಾಣ ಮಾಡಿಕೊಡಲಿದೆ.  ಕೇಂದ್ರೀಯ ಸದನ್ ಕಡೆಯಿಂದ ಈಜೀಪುರ ಕಡೆಗೆ ಸಾಗುವ ಎಡ ಭಾಗದಲ್ಲಿ ಸೆೇಂಟ್ ಜಾನ್ಸ್ ಬಳಿ 5 ಪೋರ್ಟಲ್ ಪಿಯರ್  ಅಳವಡಿಸಲು ಸೆೇಂಟ್ ಜಾನ್ಸ್ ನ  ಜಾಗದ ಬಳಕೆ ಅವಶ್ಯಕತೆ ಇತ್ತು.  ಪಾದಚಾರಿ ಮಾರ್ಗ ಹಾಗೂ ಸೆೇಂಟ್ ಜಾನ್ಸ್ ಕಾಪೌಂಡ್ ಗೋಡೆಯ ಭಾಗದಲ್ಲಿ ಪೋರ್ಟಲ್ ಪಿಯರ್ ಹೊಂದಿಕೊಂಡಂತೆ ನಿರ್ಮಾಣ ಮಾಡಬೇಕಿದೆ . 

EJIPURA FLYOVER



ಈಜೀಪುರ ಮೇಲ್ಸುತುವೆ ವಿವರ
-ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ 
-ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕು
 ಈಗಾಗಲೇ 645 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಲಾಗಿದೆ
-ಇನ್ನು 117 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕಿದೆ
-ಜೊತೆಗೆ 490 ಸೆಗ್ಮೆಂಟ್ ಗಳನ್ನು ಜೋಡಣೆ ಮಾಡಲಾಗಿದೆ 
-ಈಗ ಐದು ಪೋರ್ಟರ್ ಫಿಯರ್ ನಿರ್ಮಾಣ ಮಾಡಿದ್ರೆ ಕೊನೆಯ ಹಂತದ ಕಾಮಗಾರಿ ಮುಗಿಯಲು ಸಹಕಾರಿ

EJIPURA FLYOVER (1)





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

GBA Ejipura flyover GBA COMMISSIONER
Advertisment