ನಕಲಿ ಕೆಎಂಎಫ್ ತುಪ್ಪ ಮಾರಾಟ ತಡೆಗೆ ಕ್ಯೂ ಆರ್ ಕೋಡ್ ಅಸ್ತ್ರ ಬಳಕೆ: ಶೀಘ್ರದಲ್ಲೇ ಕ್ಯೂಆರ್ ಕೋಡ್ ಇರೋ ತುಪ್ಪ ಬಿಡುಗಡೆ

ಇತ್ತೀಚೆಗೆ ತಮಿಳುನಾಡಿನಲ್ಲಿ ಕೆಎಂಎಫ್‌ ನ ನಕಲಿ ನಂದಿನಿ ತುಪ್ಪವನ್ನು ಮಾರಾಟ ಮಾಡುತ್ತಿದ್ದಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ನಕಲಿ ಕೆಎಂಎಫ್‌ ತುಪ್ಪ ಮಾರಾಟ ತಡೆಗೆ ತುಪ್ಪದ ಪ್ಯಾಕ್ ಮೇಲೆ ಕ್ಯೂಆರ್ ಕೋಡ್ ಮುದ್ರಿಸಲು ಕೆಎಂಎಫ್ ಚಿಂತನೆ ನಡೆಸಿದೆ. ಇದರಿಂದ ತುಪ್ಪದ ಮೂಲ ಯಾವುದು ಎಂದು ಗೊತ್ತಾಗಲಿದೆ.

author-image
Chandramohan
KMF NANDINI GHEE RATE HIKE2
Advertisment


ನಕಲಿ... ನಕಲಿ...ನಕಲಿ... ಎಲ್ಲಾ‌‌ ಕಡೆಯೂ ನಕಲಿ... ತಿನ್ನೋ ಪದಾರ್ಥವೂ ನಕಲಿ.. ಬಳಸೋ ವಸ್ತುಗಳು ನಕಲಿ... ಈಗ, ಶುದ್ಧ ತುಪ್ಪ ಎಂಬ ಖ್ಯಾತಿಗಳಿಸಿರುವ ನಂದಿನಿ ತುಪ್ಪವನ್ನೂ ನಕಲಿ ಮಾಡ್ತಿದ್ದಾರೆ... ಈ ನಕಲಿಕೋರರನ್ನ ತಡೆಯೋಕೆ KMF ಹೆಜ್ಜೆಯಿಟ್ಟಿದ್ದು, ಕ್ಯುಆರ್ ಕೋಡ್ ಅಸ್ತ್ರ ಪ್ರಯೋಗಿಸ್ತಿದೆ... ಹಾಗಾದ್ರೆ, ಈ ಕ್ಯೂಆರ್ ಕೋಡ್ ಪ್ರಯೋಗ ವರ್ಕೌಟ್ ಆಗುತ್ತಾ?  ಇಲ್ಲಿದೆ ವಿವರ ಓದಿ.

ನಕಲಿ ತುಪ್ಪ ತಡೆಯೋಕೆ ಕೆಎಂಎಫ್ ಹೊಸ ಪ್ಲ್ಯಾನ್!

ಕ್ಯೂಆರ್ ಕೋಡ್ ಅಸ್ತ್ರ... ಡ್ಯೂಪ್ಲಿಕೇಟ್ ತುಪ್ಪಕ್ಕೆ ಬೀಳುತ್ತಾ ಬ್ರೇಕ್!?

ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನಗಳಿಗೆ ನಿರ್ದಿಷ್ಟವಾದ ಗ್ರಾಹಕರಿದ್ದಾರೆ.. ನಂದಿನಿ ಹಾಲು, ನಂದಿನಿ ತುಪ್ಪ, ನಂದಿನಿ ಸ್ವೀಟ್ಸ್ ಹೀಗೆ ನಂದಿನಿ ಉತ್ಪನ್ನಗಳನ್ನೇ ಬಳಸುವ ಜನಸಾಮಾನ್ಯರಿದ್ದಾರೆ... ಇದಕ್ಕೆ ಕಾರಣ ನಂದಿನಿ ಬ್ರ್ಯಾಂಡ್ ಉಳಿಸಿಕೊಂಡಿರುವ ಕ್ವಾಲಿಟಿ... ಆದ್ರೀಗ, ಈ ಕ್ವಾಲಿಟಿಯನ್ನೇ ಬಂಡವಾಳವಾಗಿಸಿಕೊಂಡ ಕೆಲವು ಕಿಡಿಗೇಡಿಗಳು ನಂದಿನಿ ತುಪ್ಪವನ್ನ ನಕಲು ಮಾಡುತ್ತಿದ್ದಾರೆ... ಕೆ.ಎಂ.ಎಫ್ ನಿಂದ ತಯಾರಿಸುವ ನಂದಿನಿ ತುಪ್ಪದಂತೆ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಈಗಾಗಲೇ ನಕಲಿ ನಂದಿನಿ ತುಪ್ಪ ಜಾಲದಲ್ಲಿದ್ದ ಕೆಲವ್ರನ್ನ ಬಂಧಿಸಲಾಗಿದೆ...
ನಕಲಿ ನಂದಿನಿ‌ ತುಪ್ಪ ಮಾರುಕಟ್ಟೆಗೆ ಬಂದಿದೆ ಎನ್ನುವ ವಿಚಾರ ಬಯಲಾಗ್ತಿದ್ದಂತೆ ಗ್ರಾಹಕರಲ್ಲಿ ಕಳವಳ ಶುರುವಾಗಿದೆ. ಇತ್ತ ನಕಲಿಕೋರರ ಬಗ್ಗೆ ಕೆ.ಎಂ.ಎಫ್ ಗೂ ತಲೆಬಿಸಿ ಮಾಡಿದೆ. ಹಾಗಾಗಿ, ನಕಲಿ ನಂದಿನಿ ತುಪ್ಪಕ್ಕೆ ಬ್ರೇಕ್ ಹಾಕಲು ಕೆ.ಎಂ.ಎಫ್ ಮುಂದಾಗಿದ್ದು, ನಂದಿನಿ ಪ್ಯಾಕ್ ಮೇಲೆ ಕ್ಯೂಆರ್ ಕೋಡ್ ಮುದ್ರಿಸುವ ಚಿಂತನೆ ಮಾಡಿದ್ದಾರೆ   ಎಂದು ಕೆಎಂಎಫ್ ಎಂಡಿ ಶಿವಸ್ವಾಮಿ  ಹೇಳಿದ್ದಾರೆ. 

ಸಾರ್ವಜನಿಕರೇ ಗಮನಿಸಿ.. ನಾಳೆ ರಾಜ್ಯದಲ್ಲಿ ಹಾಲು, ಮೊಸರು ಎಂದಿನಂತೆ ಸರಬರಾಜು; ಮುಷ್ಕರ ಯಾವಾಗ?



ಕ್ಯೂಆರ್ ಕೋಡ್ ಹಾಕುವುದರಿಂದ ಗ್ರಾಹಕರು, ಇದು ಅಸಲಿ ತುಪ್ಪನಾ? ನಕಲಿ ತುಪ್ಪನಾ ಅಂತ ಸುಲಭವಾಗಿ ಪತ್ತೆ ಹಚ್ಚಲು ಸುಲಭವಾಗಲಿದೆಯಂತೆ. ಕ್ಯೂಆರ್ ಸ್ಕ್ಯಾನ್ ಮಾಡಿದ್ರೆ ಎಲ್ಲಿ‌ ಉತ್ಪಾದನೆ ಆಗಿದೆ? ಯಾವ ಡಿಪೋದಿಂದ ಬಂದಿದೆ? ಯಾವ ರಿಟೇಲರ್ ಗೆ ಹೋಗಿದೆ ಗೊತ್ತಾಗಲಿದೆಯಂತೆ..
ಸದ್ಯಕ್ಕೆ ನಂದಿನಿ ತುಪ್ಪದ ಮೇಲೆ ಕ್ಯೂಆರ್ ಕೋಡ್ ಅಳವಡಿಸುವ ಕಾರ್ಯತಂತ್ರ ಪ್ರಗತಿಯಲ್ಲಿದೆ.. ಆಹಾರ ತಜ್ಞರು, ಕ್ವಾಲಿಟಿ ತಜ್ಞರು ಚರ್ಚೆ ಮಾಡಿ ಸಲಹೆ ಕೊಟ್ಟಿದ್ದಾರೆ... ಶೀಘ್ರದಲ್ಲೇ ಕ್ಯೂಆರ್ ಕೋಡ್ ಪ್ಯಾಕಿಂಗ್ ತುಪ್ಪ ಮಾರುಕಟ್ಟೆಗೆ ಬರಲಿದ್ದು, ನಕಲಿ ದಂಧೆಗೆ ಬ್ರೇಕ್ ಬೀಳುವ ವಿಶ್ವಾಸವಿದೆ...


ಭರತ್ ಕೃಷ್ಣಪ್ಪ
ನ್ಯೂಸ್ ಫಸ್ಟ್ 
ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KMF GHEE HAVE QR CODE TO IDENTIFY FAKE GHEE
Advertisment