ಐಟಿ ಕಣ್ಣು CJ ರಾಯ್ ಮೇಲೆ ಬಿದ್ದಿದ್ಯಾಕೆ..? ಈ ಆರೋಪ ನಿಜಾನಾ..?

ಪ್ರಖ್ಯಾತ ಕಾನ್ಫಿಡೆಂಟ್ ಗ್ರೂಪ್ (Confident Group) ಮಾಲೀಕ ಹಾಗೂ ಉದ್ಯಮಿ ಸಿ.ಜೆ.ರಾಯ್ (C.J. Roy) ಪ್ರಕರಣದ ತನಿಖೆ ಮುಂದುವರಿದಿದೆ. ಇದರ ಬೆನ್ನಲ್ಲೇ, ಐಟಿ ಕಣ್ಣು ಸಿ.ಜೆ.ರಾಯ್ ಅವರ ಮೇಲೆ ಬಿದ್ದಿದ್ಯಾಕೆ? ಎಂಬ ಪ್ರಶ್ನೆಯೂ ಇದೆ.

author-image
Ganesh Kerekuli
cj roy (4)
Advertisment
  • ರಾಯ್​ಗೆ ಕೊಚ್ಚಿ ಫ್ಲ್ಯಾಟ್ ಮಾರಾಟ, ಕಂಟಕವಾಯ್ತಾ?
  • ಮೂಲ‌‌ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟದ ಆರೋಪ
  • ಈ‌ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸಿರುವ ಆರೋಪ

ಕೊಚ್ಚಿ/ಬೆಂಗಳೂರು: ಪ್ರಖ್ಯಾತ ಕಾನ್ಫಿಡೆಂಟ್ ಗ್ರೂಪ್ (Confident Group) ಮಾಲೀಕ ಹಾಗೂ ಉದ್ಯಮಿ ಸಿ.ಜೆ.ರಾಯ್ (C.J. Roy) ಪ್ರಕರಣದ ತನಿಖೆ ಮುಂದುವರಿದಿದೆ. ಇದರ ಬೆನ್ನಲ್ಲೇ, ಐಟಿ ಕಣ್ಣು ಸಿ.ಜೆ.ರಾಯ್ ಅವರ ಮೇಲೆ ಬಿದ್ದಿದ್ಯಾಕೆ? ಎಂಬ ಪ್ರಶ್ನೆಯೂ ಇದೆ. 

ತೆರಿಗೆ ವಂಚನೆ ಆರೋಪ..

ಕೊಚ್ಚಿಯಲ್ಲಿ ನಡೆದ ಫ್ಲ್ಯಾಟ್ ಮಾರಾಟ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ತೆರಿಗೆ ವಂಚನೆ ನಡೆದಿದೆ ಎಂಬ ಗಂಭೀರ ಆರೋಪದ ಮೇಲೆ ಐಟಿ ಅಧಿಕಾರಿಗಳು ಈಗ ರಾಯ್ ಅವರ ವ್ಯವಹಾರಗಳ ಮೇಲೆ ನಿಗಾ ಇಟ್ಟಿದ್ದರು ಎನ್ನಲಾಗಿದೆ. 

2025ರಲ್ಲಿ ಕೇರಳದ ಕೊಚ್ಚಿಯಲ್ಲಿ ಸಿ.ಜೆ.ರಾಯ್ ಅವರು ಸುಮಾರು 156 ಫ್ಲ್ಯಾಟ್​ಗಳನ್ನು ಮಾರಾಟ ಮಾಡಿದ್ದರು. ಈ ವ್ಯವಹಾರದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಮಾಹಿತಿ ಐಟಿ ಇಲಾಖೆಗೆ ಲಭ್ಯವಾಗಿತ್ತು. ಫ್ಲ್ಯಾಟ್​ಗಳ ಮೂಲ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಅವುಗಳನ್ನು ಮಾರಾಟ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿತ್ತು. ಈ ಮೂಲಕ ಸರ್ಕಾರಕ್ಕೆ ಪಾವತಿಸಬೇಕಾದ ಕೋಟ್ಯಂತರ ರೂಪಾಯಿ ತೆರಿಗೆಯನ್ನು (Tax Evasion) ವಂಚಿಸಲಾಗಿದೆ ಎಂಬ ಮಾಹಿತಿ ಐಟಿ ಅಧಿಕಾರಿಗಳಿಗೆ ಸಿಕ್ಕಿತ್ತು. ಹೀಗಾಗಿ ಸಿಜೆ ರಾಯ್ ಸಂಬಂಧಿಸಿದ ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು ಎನ್ನಲಾಗಿದೆ.

ಸಿ.ಜೆ. ರಾಯ್ ಮೇಲಿನ ಆರೋಪಗಳೇನು?

ಕಡಿಮೆ ಬೆಲೆಗೆ ಮಾರಾಟ: ಫ್ಲ್ಯಾಟ್ ಬೆಲೆಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ತೋರಿಸಿ ಮಾರಾಟ ಮಾಡಿರೋದು

ನಗದು ವ್ಯವಹಾರದ ದಂಧೆ: ದಾಖಲೆಗಳಲ್ಲಿ (Online Transaction) ಕೇವಲ ಕಡಿಮೆ ಮೊತ್ತವನ್ನು ತೋರಿಸಿ, ಉಳಿದ ಹಣವನ್ನು ಖರೀದಿದಾರರಿಂದ ನಗದು (Cash) ರೂಪದಲ್ಲಿ ಪಡೆದಿರುವ ಗಂಭೀರ ಆರೋಪ

ತೆರಿಗೆ ವಂಚನೆ: ಆನ್ಲೈನ್ ಮೂಲಕ ಸಣ್ಣ ಮೊತ್ತದ ವ್ಯವಹಾರ ನಡೆಸಿ, ಸರ್ಕಾರಕ್ಕೆ ಸಲ್ಲಬೇಕಾದ ಸ್ಟಾಂಪ್ ಡ್ಯೂಟಿ ಹಾಗೂ ತೆರಿಗೆಯನ್ನು ತಪ್ಪಿಸಲು ಈ ಪ್ಲಾನ್ ಮಾಡಿರೋ ಆರೋಪ

ದುಬೈ ಪ್ರಾಜೆಕ್ಟ್ ಮತ್ತು ಐಟಿ ಸಂಶಯ

ಸಿ.ಜೆ.ರಾಯ್ ಅವರ ಆರ್ಥಿಕ ವ್ಯವಹಾರಗಳ ಮೇಲೆ ಐಟಿ ಕಣ್ಣು ಬೀಳಲು ಮತ್ತೊಂದು ಪ್ರಮುಖ ಕಾರಣವೆಂದರೆ ಅವರ ದುಬೈ ಪ್ರಾಜೆಕ್ಟ್‌ಗಳು. ದುಬೈನಲ್ಲಿ ಯಾವುದೇ ಬ್ಯಾಂಕ್ ಸಾಲ (Loan) ಪಡೆಯದೆ ಬೃಹತ್ ಪ್ರಾಜೆಕ್ಟ್ ಆರಂಭಿಸಿದ್ದ ಕಾನ್ಫಿಡೆಂಟ್ ಗ್ರೂಪ್, ಅದನ್ನು ನಿಗದಿತ ಸಮಯಕ್ಕೆ ಮುಗಿಸಿತ್ತು. ಬಳಿಕ ಎರಡನೇ ಪ್ರಾಜೆಕ್ಟ್‌ಗೂ ಕೈ ಹಾಕಿತ್ತು. ಯಾವುದೇ ಸಾಲವಿಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಹಣದ ಹರಿವು ಹೇಗೆ ಸಾಧ್ಯವಾಯಿತು ಎಂಬುದು ಐಟಿ ಅಧಿಕಾರಿಗಳ ಕುತೂಹಲಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಕೊಚ್ಚಿಯ ಫ್ಲ್ಯಾಟ್ ವ್ಯವಹಾರದ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಟ್ಯಾಕ್ಸ್ ವಂಚನೆಯ ಸುಳಿವು ಸಿಕ್ಕಿದೆ. ಸದ್ಯ ಸಿ.ಜೆ.ರಾಯ್ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದು, ಹೆಚ್ಚಿನ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಈ ಪ್ರಕರಣ ಮುಂಬರುವ ದಿನಗಳಲ್ಲಿ ಇನ್ನಷ್ಟು ತಿರುವುಗಳನ್ನು ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಟಿ-20 ವಿಶ್ವಕಪ್ ಮುನ್ನವೇ ಪಾಕ್ ವಿವಾದ.. ಹಠಮಾರಿ ಧೋರಣೆಗೆ ICC ಎಚ್ಚರಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News income tax department Confident group CJ Roy
Advertisment